ಬದಿಯಡ್ಕ: ವಾಂತಿಚ್ಚಾಲು-ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ನೂತನ ವರ್ಷದ ಸಮಿತಿ ರಚನೆ, ಧರ್ಮಕೋಲೋತ್ಸವದ ಯಶಸ್ಸಿಗೆ ಶ್ರಮಿಸಿದವರಿಗೆ ಅಭಿನಂದನೆ ಹಾಗೂ ಸ್ವಚ್ಛತಾ ಕಾರ್ಯಕ್ರಮ ಸನ್ನಿಧಿಯ ಪರಿಸರದಲ್ಲಿ ಜರಗಿತು. ಜಗನ್ನಾಥ ರೈ ಕೊರೆಕ್ಕಾನ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಡಾ.ಶ್ರೀನಿಧಿ ಸರಳಾಯ ಬದಿಯಡ್ಕ ಉದ್ಘಾಟಿಸಿದರು.
ಧ.ಗ್ರಾ.ಯೋಜನೆಯ ಮೇಲ್ಬಿಚಾರಕ ದಿನೇಶ್ ಕೊಕ್ಕಡ ಮುಖ್ಯ ಅತಿಥಿಯಾಗಿದ್ದರು. ದೈವ ನರ್ತಕ ರಮೇಶ್ ಅಡ್ಕತ್ತಬೈಲ್, ಪ್ರತಿಷ್ಠಾ ಕರ್ಮಿ ಕೃಷ್ಣ ಬೆಳ್ಚಾಡ ಸಭೆಯಲ್ಲಿ ಉಪಸ್ಥಿತರಿದ್ದರು. ಸಮಿತಿ ಕಾರ್ಯದರ್ಶಿ ರಾಮ ನಾಯ್ಕ ಕುಂಟಾಲುಮೂಲೆ ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ ಪ್ರಸ್ತುತ ವರ್ಷದ ಕೋಲೋಧಾರಿಯಾದ ರಮೇಶ್ ಅಡ್ಕತ್ತಬೈಲ್ ಅವರನ್ನು ಅಭಿನಂದಿಸಲಾಯಿತು. ಜಿಶನ್ ವಾಂತಿಚ್ಚಾಲು ಪ್ರಾರ್ಥನೆಗೈದರು. ಸನ್ನಿಧಿಯ ಪ್ರಧಾನಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ರಮೇಶ್ ಕುಲಾಲ್ ನಾಯ್ಕಾಪು ವಂದಿಸಿದರು. ಜಯ ಮಣಿಯಂಪಾರೆ ನಿರೂಪಿಸಿದರು.