ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯಿತಿಯ ಹದಿನಾಲ್ಕನೇ ವಾರ್ಡ್‍ನ ಪೆರಡಾಲ ಕೊರಗ ಕಾಲೋನಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಬದಿಯಡ್ಕ ಪೆರಡಾಲ ಕೊರಗ ಕಾಲೋನಿಯಲ್ಲಿ ಕಾಸರಕೋಟ ಬ್ಲಾಕ್ ಪಂಚಾಯತಿ ಹಾಗೂ ಬದಿಯಡ್ಕ ಗ್ರಾಮ ಪಂಚಾಯತಿ ಜಂಟಿಯಾಗಿ 58,47,000 ರೂ.ಗಳ ಸಮಗ್ರ ಅಭಿವೃದ್ಧಿ ಯೋಜನೆ ಅನುμÁ್ಠನಗೊಳಿಸಲಾಗುತ್ತಿದೆ.
ಬದಿಯಡ್ಕ ಪೆರಡಾಲ ಕಾಲೋನಿಯಲ್ಲಿ 44 ಕುಟುಂಬಗಳಿದ್ದು, 47 ಮಹಿಳೆಯರು, 51 ಪುರುಷರು ಮತ್ತು 3 ಮಕ್ಕಳು ಇದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ಭೂ ಅಭಿವೃದ್ಧಿ, ಮಳೆನೀರು ಬಾವಿ, ಪಾರಂಪರಿಕ ಹಳ್ಳ ಪುನಶ್ಚೇತನ ಮುಂತಾದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅಗತ್ಯ ಚಟುವಟಿಕೆಗಳಿಗೆ ಹಣ ಮಂಜೂರು ಮಾಡಲಾಗಿದೆ. ಕಾಲೋನಿಯಲ್ಲಿ 44 ಮಂದಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಿ ಕಾಮಗಾರಿ ಆರಂಭಿಸಲಾಗಿದೆ. ಗಿರಿಜನ ಇಲಾಖೆ ಮೂಲಕ ಕಾಲೋನಿಯ ಪ್ರತಿ ಕುಟುಂಬಕ್ಕೆ 35 ಕೋಳಿ ಹಾಗೂ ಕೋಳಿ ಗೂಡು ಹಾಗೂ ಎಂಟು ಕುಟುಂಬಗಳಿಗೆ ಮೇಕೆ ವಿತರಿಸಲಾಗಿದೆ. ಉತ್ಪಾದನಾ ಕೇಂದ್ರ ಯಶಸ್ವಿಯಾಗಿ ನಡೆಯುತ್ತಿದೆ. ಪಿಎಸ್‍ಸಿ ಕೋಚಿಂಗ್ ಸೆಂಟರ್ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಈಗಾಗಲೇ ಲೈಫ್ ಮಿಷನ್ ಮೂಲಕ ಕಾಲೋನಿಯಲ್ಲಿ ವಸತಿ, ಹಾಸಿಗೆ ವಿತರಣೆ, ಗ್ಯಾಸ್ ಸಂಪರ್ಕ, ಕುಡಿಯುವ ನೀರಿನ ಟ್ಯಾಂಕ್ ವಿತರಣೆ, ಹಣ್ಣುಹಂಪಲು ವಿತರಣೆ, ಅಧ್ಯಯನ ಕೊಠಡಿಗಳು ಮುಂತಾದವುಗಳನ್ನು ಅನುಷ್ಠಾನಗೊಳಿಸಲಾಗಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ಬದಿಯಡ್ಕ ಪೆರಡಾಲ ಕಾಲೋನಿಯಲ್ಲಿ ಸಮಗ್ರ ಅಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.