HEALTH TIPS

ಚಿನ್-ಕುಕಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನಿರ್ಧಾರಕ್ಕೆ ಸಮಿತಿ ರಚನೆ: ಮಣಿಪುರ ಮುಖ್ಯಮಂತ್ರಿ

               ಇಂಫಾಲ: ಮಣಿಪುರದ ಪರಿಶಿಷ್ಟ ಪಂಗಡಗಳ ಪಟ್ಟಿಯಿಂದ ಚಿನ್ ಕುಕಿ ಸಮುದಾಯವನ್ನು ತೆಗೆಯಬಹುದೇ ಎನ್ನುವುದನ್ನು ಸರ್ವ ಬುಡಕಟ್ಟು ಸದಸ್ಯರನ್ನು ಒಳಗೊಂಡ ಸಮಿತಿಯೊಂದು ನಿರ್ಧರಿಸಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ಎನ್. ಬೀರೇನ್ ಸಿಂಗ್ ಮಂಗಳವಾರ ಹೇಳಿದ್ದಾರೆ.

               ಅಲೆಮಾರಿ ಸಮುದಾಯಕ್ಕೆ ನೀಡಲಾಗಿರುವ ಪರಿಶಿಷ್ಟ ಪಂಗಡ ಸ್ಥಾನಮಾನವನ್ನು ಮರುಪರಿಶೀಲಿಸುವಂತೆ ಕೋರಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ (ಅಠವಾಳೆ)ದ ರಾಷ್ಟ್ರೀಯ ಕಾರ್ಯದರ್ಶಿ ಇಂಫಾಲದ ಮಹೇಶ್ವರ್ ತೌನೌಜಮ್ ಕಳೆದ ತಿಂಗಳು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದರು.

                ಪರಿಶಿಷ್ಟ ಪಂಗಡವನ್ನು ನಿರ್ಣಯಿಸಲು ಸಮುದಾಯಗಳ ಮೂಲನಿವಾಸವು ಪ್ರಮುಖ ಮಾನದಂಡವಾಗಬೇಕು ಎಂಬುದಾಗಿ ತೌನೌಜಮ್ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾರಿಗೆ ಸಲ್ಲಿಸಿದ ಮನವಿಯಲ್ಲಿ ಹೇಳಿದ್ದಾರೆ.

             ಇದರ ಆಧಾರದಲ್ಲಿ, ಮಣಿಪುರದ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಯಾರು ಇರಬೇಕು ಎನ್ನುವುದನ್ನು ಸರಿಯಾಗಿ ನಿರ್ಧರಿಸುವಂತೆ ಅವರು ಕೇಂದ್ರ ಸರಕಾರವನ್ನು ಕೋರಿದ್ದರು. ಮೆತೈ ಸಮುದಾಯದ ಜನರನ್ನೂ ಪರಿಶಿಷ್ಟ ಪಂಗಡಗಳಿಗೆ ಸೇರಿಸಿಕೊಳ್ಳಬೇಕು ಎಂಬ ಬೇಡಿಕೆಯನ್ನು ಅವರು ಆ ಮೂಲಕ ಇಟ್ಟಿದ್ದರು.

                 ಸರ್ವ ಬುಡಕಟ್ಟು ಸದಸ್ಯರನ್ನು ಒಳಗೊಂಡ ಸಮಿತಿಯ ಶಿಫಾರಸುಗಳನ್ನು ಸ್ವೀಕರಿಸಿದ ಬಳಿಕವಷ್ಟೇ, ಈ ವಿಷಯದಲ್ಲಿ ತನ್ನ ನಿಲುವನ್ನು ಮಣಿಪುರ ಸರಕಾರವು ಕೇಂದ್ರ ಸರಕಾರಕ್ಕೆ ತಿಳಿಯಪಡಿಸುತ್ತದೆ ಎಂದು ಮಂಗಳವಾರ ಬೀರೇನ್ ಸಿಂಗ್ ತಿಳಿಸಿದರು ಎಂದು ಪಿಟಿಐ ವರದಿ ಮಾಡಿದೆ.

''ಅವರನ್ನು (ಚಿನ್-ಕುಕಿ ಸಮುದಾಯ) ಮಣಿಪುರದ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಲಾಗಿದೆ. ಆದರೆ, ಅವರನ್ನು ಹೇಗೆ ಸೇರಿಸಿಕೊಳ್ಳಲಾಗಿದೆ ಎಂಬ ಬಗ್ಗೆ ಮರುಪರಿಶೀಲನೆ ಅಗತ್ಯವಾಗಿದೆ'' ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಹೇಳಿದರು. ''ಅದರ ಬಗ್ಗೆ ಹೇಳಿಕೆ ನೀಡುವ ಮೊದಲು, ರಾಜ್ಯದ ಎಲ್ಲಾ ಬುಡಕಟ್ಟು ಪಂಗಡಗಳನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಬೇಕು'' ಎಂದು ಅವರು ಅಭಿಪ್ರಾಯಪಟ್ಟರು.

               ಮಣಿಪುರದ ಜನಸಂಖ್ಯೆಯ 60 ಶೇಕಡದಷ್ಟಿರುವ ಮೆತೈ ಸಮುದಾಯವು ತನ್ನನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಿಕೊಳ್ಳಬೇಕೆಂದು ಹಲವು ವರ್ಷಗಳಿಂದ ಒತ್ತಾಯಿಸುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries