ತಿರುವನಂತಪುರ: ಪಡಿತರ ಸಾಮಗ್ರಿಗಳನ್ನು ತಲುಪಿಸುವ ಸಾರಿಗೆ ಗುತ್ತಿಗೆದಾರರ ಬಾಕಿ ಹಣವನ್ನು ಬುಧವಾರದೊಳಗೆ ವಿತರಿಸಲಾಗುವುದು ಎಂದು ಆಹಾರ ಸಚಿವ ಜಿ.ಆರ್. ಅನಿಲ್ ಭರವಸೆ ನೀಡಿದ್ದಾರೆ. ಗುತ್ತಿಗೆದಾರರ ಮುಷ್ಕರದಿಂದ ಪಡಿತರ ವಿತರಣೆಗೆ ಧಕ್ಕೆಯಾಗುವುದಿಲ್ಲ ಎಂದೂ ಸಚಿವರು ತಿಳಿಸಿರುವರು.
ಆದರೆ ಖಾತೆಗೆ ಹಣ ಬರುವವರೆಗೆ ಮುಷ್ಕರ ಹಿಂಪಡೆಯುವುದಿಲ್ಲ ಎಂದು ಸಾರಿಗೆ ಗುತ್ತಿಗೆದಾರರ ಸಂಘ ಹಠ ಹಿಡಿದಿದೆ. ಗುತ್ತಿಗೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸಾರಿಗೆ ಗುತ್ತಿಗೆದಾರರ ಸಂಘ ನಿನ್ನೆಯಿಂದ ಮುಷ್ಕರ ಆರಂಭಿಸಿದೆ.
ಮುಷ್ಕರದ ಹಿನ್ನೆಲೆಯಲ್ಲಿ ಪಡಿತರ ವರ್ತಕರು ಕೂಡ ಪಡಿತರ ಅಂಗಡಿಗಳಿಗೆ ಸರಕು ತಲುಪದಿದ್ದರೆ ರಾಜ್ಯದಲ್ಲಿ ಪಡಿತರ ವಿತರಣೆ ಸ್ಥಗಿತಗೊಳಿಸುವುದಾಗಿ ತಿಳಿಸಿದ್ದಾರೆ.