ನವದೆಹಲಿ: ಕೇಂದ್ರ ಸರ್ಕಾರ 2024-25 ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಲು ಸಜ್ಜಾಗಿದೆ. ಫೆಬ್ರುವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 6ನೇ ಬಾರಿ ಬಜೆಟ್ ಮಂಡಿಸಲಿದ್ದಾರೆ.
ನವದೆಹಲಿ: ಕೇಂದ್ರ ಸರ್ಕಾರ 2024-25 ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಲು ಸಜ್ಜಾಗಿದೆ. ಫೆಬ್ರುವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 6ನೇ ಬಾರಿ ಬಜೆಟ್ ಮಂಡಿಸಲಿದ್ದಾರೆ.
ಎಪ್ರಿಲ್- ಮೇ ನಲ್ಲಿ ಲೋಕಸಭಾ ಚುನಾವಣೆ ಇರುವ ಕಾರಣ ಈಗ ಮಧ್ಯಂತರ ಬಜೆಟ್ ಮಂಡನೆಯಾಗಲಿದೆ.
ಮಧ್ಯಂತರ ಬಜೆಟ್‌ನಲ್ಲಿ ಮಹತ್ವದ ನೀತಿ ಬದಲಾವಣೆಗಳು ಮತ್ತು ದೊಡ್ಡ ಯೋಜನೆಗಳ ಘೋಷಣೆಗಳನ್ನು ನಿರೀಕ್ಷಿಸದಿದ್ದರೂ, ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಚುನಾವಣಾ ವರ್ಷದಲ್ಲಿ, ಜನಪರ ಯೋಜನೆಗಳು ಮತ್ತು ಹಣಕಾಸಿನ ಬಲವರ್ಧನೆಗೆ ಸರ್ಕಾರದ ನಡೆಯ ಬಗ್ಗೆ ಕುತೂಹಲವಿದೆ.
ಫೆಬ್ರುವರಿ 1 ರಂದು ಗುರುವಾರ ಬೆಳಿಗ್ಗೆ 11 ಗಂಟೆಗೆ ನಿರ್ಮಲಾ ಸೀತಾರಾಮನ್ ಅವರು 2024-25 ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ.
ಬಜೆಟ್ ಮಂಡನೆ ಸದನದಿಂದ ಸಂಸದ್ ಟಿವಿ ಮತ್ತು ಡಿಡಿ ನ್ಯೂಸ್‌ನಲ್ಲಿ ನೇರಪ್ರಸಾರವಾಗಲಿದೆ.
ಪ್ರೆಸ್ ಇನ್ಪರ್ಮೇಷನ್ ಬ್ಯೂರೊ (ಪಿಐಬಿ) ಕೂಡ ಯುಟ್ಯೂಬ್ ಮತ್ತು ವೆಬ್‌ಸೈಟ್‌ನಲ್ಲಿ ನೇರಪ್ರಸಾರ ಇರಲಿದೆ.
ಸದನದಲ್ಲಿ ಬಜೆಟ್ ಮಂಡನೆ ಮುಗಿದ ಬಳಿಕ 'ಯೂನಿಯನ್ ಬಜೆಟ್' ಮೊಬೈಲ್ ಆಯಪ್‌ನಲ್ಲಿ ಬಜೆಟ್ ಪ್ರತಿಯನ್ನು ಪಡೆಯಬಹುದು ಅಥವಾ 'ಯೂನಿಯನ್ ಬಜೆಟ್ ವೆಬ್‌ಸೈಟ್'ನಲ್ಲಿಯೂ ಸಿಗಲಿದೆ.