ಕಾಸರಗೋಡು: ವಿದ್ಯಾನಗರ ಸಿವಿಲ್ ಠಾಣೆಯಲ್ಲಿ ಡೇ ಕೇರ್ ವಾರ್ಷಿಕೋತ್ಸವವನ್ನು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಮಕ್ಕಳೊಂದಿಗೆ ಕೇಕ್ ಕತ್ತರಿಸಿದರು. ಬಹುಮಾನ ವಿತರಿಸಲಾಯಿತು. 2011ರಲ್ಲಿ ಡೇ ಕೇರ್ ಆರಂಭವಾಗಿದ್ದು, ಒಟ್ಟು 20 ಮಕ್ಕಳಿದ್ದಾರೆ. ಡೇ ಕೇರ್ ಅನ್ನು ಕಲೆಕ್ಟರೇಟ್ ಸ್ಟಾಫ್ ಕೌನ್ಸಿಲ್ ನಡೆಸುತ್ತದೆ. ಸ್ಟಾಫ್ ಕೌನ್ಸಿಲ್ ಪ್ರತಿನಿಧಿಗಳು, ಶಿಕ್ಷಕಿ ಆಶಾ ನಾರಾಯಣನ್ ಮತ್ತು ಸಹಾಯಕಿ ಸುಮನಾ ಭಾಗವಹಿಸಿದ್ದರು.