ತಿರುವನಂತಪುರ: ಲೋಕಸಭೆ ಚುನಾವಣೆಗೆ ರಾಜ್ಯದ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ. ರಾಜ್ಯದಲ್ಲಿ ಒಟ್ಟು 2,70,99,326 ಮತದಾರರಿದ್ದಾರೆ.
ಇದರಲ್ಲಿ 1,39,96,729 ಮಹಿಳಾ ಮತದಾರರಾರಿದ್ದರೆ, 1,31,02,288 ಮಂದಿ ಪುರುಷ ಮತದಾರರಿದ್ದಾರೆ. 5.75 ಲಕ್ಷ ಹೊಸ ಮತದಾರರಾಗಿದ್ದಾರೆ. ಭಿನ್ನಲಿಂಗೀಯ- 309 ಮತದಾರರಿದ್ದಾರೆ. ಅನಿವಾಸಿ ಮತದಾರರು- 88,223 ಮಂದಿ. 25,177 ಮತಗಟ್ಟೆಗಳಿವೆ. ಲೋಕಸಭೆ ಚುನಾವಣೆಗೆ ಕೇರಳ ಸಜ್ಜಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜಯ್ ಎಂ.ಕೌಲ್ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ಮಲಪ್ಪುರಂ ಜಿಲ್ಲೆಯಲ್ಲಿ ಅತಿ ಹೆಚ್ಚು (32,79,172) ಮತದಾರರಿದ್ದಾರೆ. ವಯನಾಡ್ ಕಡಿಮೆ ಸಂಖ್ಯೆಯ ಮತದಾರರನ್ನು ಹೊಂದಿದೆ (6,21,880). ಮಲಪ್ಪುರಂ ಜಿಲ್ಲೆಯಲ್ಲಿ ಅತಿ ಹೆಚ್ಚು ಮಹಿಳಾ ಮತದಾರರಿದ್ದಾರೆ (16,38,971). ಕೋಝಿಕ್ಕೋಡ್ ಅತಿ ಹೆಚ್ಚು ಅನಿವಾಸಿ ಮತದಾರರನ್ನು (34,909) ಹೊಂದಿರುವ ಜಿಲ್ಲೆಯಾಗಿದೆ.
ಅಂತಿಮ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಸಾಧ್ಯವಾಗದವರು ಚುನಾವಣೆಗೂ ಮುನ್ನವೇ ಅರ್ಜಿ ಸಲ್ಲಿಸಬಹುದು. ಅಂತಿಮ ಮತದಾರರ ಪಟ್ಟಿ ಮುಖ್ಯ ಚುನಾವಣಾಧಿಕಾರಿಗಳ ವೆಬ್‍ಸೈಟ್‍ನಲ್ಲಿ (www.ceo.kerala.gov.in) ಲಭ್ಯವಿದೆ.