ಮುಳ್ಳೇರಿಯ: ಮುಳ್ಳೇರಿಯ ಕಯ್ಯಾರ ಕಿಞ್ಞಣ್ಣ ರೈ ವಾಚನಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನವೋದಯ ಪುರುಷ ಸ್ವ-ಸಹಾಯ ಸಂಘದ ವಾರ್ಷಿಕ ಮಹಾಸಭೆಯ ಅಂಗವಾಗಿ ಕುಟುಂಬ ಸಮ್ಮಿಲನ ಮತ್ತು ಪ್ರೇರಣಾ ತರಗತಿ ಹಾಗೂ ಹತ್ತು ವರ್ಷಾಚರಣೆಯ ಅಂಗವಾಗಿ ಮಕ್ಕಳ ಕಲಾ ಪ್ರದರ್ಶನ ನಡೆಯಿತು.
ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯೆ ಜ್ಯೋತಿ ಪಾಣೂರು ಉದ್ಘಾಟಿಸಿದರು. ಮಾಸ್ಟರ್ ಪ್ರವಿರಾಜ್ ಹಾಡಿ, ಪ್ರೇರಣಾ ತರಗತಿ ನಡೆಸಿಕೊಟ್ಟರು. ಚಂದ್ರನ್ ಮೊಟ್ಟಮ್ಮಾಳ್. ಕೆ.ಕೆ.ಮೋಹನನ್, ಕೆ.ಗೋವಿಂದನ್, ಸಂತೋಷ್ ಕುಮಾರ್ ಎ, ಉಣ್ಣಿಕೃಷ್ಣನ್ ಕೆ, ಜಯಪ್ರಕಾಶ್. ಟಿ ಮಾತನಾಡಿದರು. ಪದಾಧಿಕಾರಿಗಳಾಗಿ ಅಧ್ಯಕ್ಷ ಕೆ.ಕೆ.ಮೋಹನನ್, ವೈ.ಅಧ್ಯಕ್ಷ ಸುಭಾμï ಕೆ.ಎಂ, ಕಾರ್ಯದರ್ಶಿ ರಾಜೇಶ್ ಕುಮಾರ್ ಕೆ, ಜೋತೆ.ಕಾರ್ಯದರ್ಶಿ ಮುತ್ತಪ್ಪ ರೈ, ಕೋಶಾಧಿಕಾರಿ ಸುಂದರ ಮವ್ವಾರು ಆಯ್ಕೆಯಾದರು.