ಕಣ್ಣೂರು: ತೊಡುಪುಳ ನ್ಯೂಮನ್ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಟಿಜೆ ಜೋಸೆಫ್ ಅವರ ಕೈಕತ್ತರಿಸಿದ ಪ್ರಕರಣದಲ್ಲಿ ಸವಾದ್‌ಗೆ ಸಹಾಯ ಮಾಡಿದ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೆ ಎನ್‌ಐಎ ನಿಗಾ ಇರಿಸಿದೆ.
ನೆರವು ನೀಡಿದವರ ಬಗ್ಗೆ ತನಿಖಾ ತಂಡಕ್ಕೆ ಈಗಾಗಲೇ ಮಾಹಿತಿ ಲಭಿಸಿದೆ ಎಂದು ಸೂಚಿಸಲಾಗಿದೆ. ಕೆಲವು ಉಗ್ರಗಾಮಿ ಇಸ್ಲಾಮಿಕ್ ಸಂಘಟನೆಗಳು ಕೂಡ ಎನ್‌ಐಎಯ ಕಣ್ಗಾವಲಿನಲ್ಲಿವೆ.
ಕಣ್ಣೂರಿಗೆ ಸಂಬAಧವೇ ಇಲ್ಲದ ಎರ್ನಾಕುಳಂ ಮೂಲದ ವ್ಯಕ್ತಿಯೊಬ್ಬ ಕಣ್ಣೂರಿಗೆ ಬಂದು ಹಲವು ವರ್ಷಗಳಿಂದ ತಂಗಲು ವಿವಿಧೆಡೆ ಮನೆ ಬಾಡಿಗೆಗೆ ಪಡೆದಿದ್ದರೆ ಹಲವರ ನೆರವು ಪಡೆದಿರಬೇಕು ಎಂಬುದನ್ನು ತನಿಖಾ ತಂಡ ಅರಿತುಕೊಂಡಿದೆ. ಕಸ್ಟಡಿಗೆ ಪಡೆದಿರುವ ಆರೋಪಿಗಳಿಗೆ ಸಹಾಯ ಮಾಡಿದವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತ ಕೂಡಲೇ ತನಿಖೆ ಮುಂದುವರಿಸಿ ಬಂಧಿಸಲಾಗುವುದು ಎಂದು ಸೂಚಿಸಲಾಗಿದೆ.
ಸವಾದ್ ನನ್ನು ಬಲೆಗೆ ಬೀಳಿಸಲು ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಕೆಲ ದಿನಗಳ ಹಿಂದೆ ಮಟ್ಟನೂರಿಗೆ ತಲುಪಿ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಮೊಕ್ಕಾಂ ಹೂಡಿತ್ತು ಎಂದು ವರದಿಯಾಗಿದೆ. ಎನ್‌ಐಎ ತಂಡವು ನಿನ್ನೆ ಮುಂಜಾನೆ ಮಟ್ಟನ್ನೂರು ಪರಿರಂ ಬೆರಾಟ್ ಬಳಿಯ ಬಾಡಿಗೆ ಮನೆಯಲ್ಲಿ ಸವಾದ್ ನನ್ನು ಬಂಧಿಸಿತ್ತು.
ಈತ ಪರಿಯಾರಂನಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದ. ಆತ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಪ್ರಭಾವದ ವಲಯದಲ್ಲಿ ವಾಸಿಸುತ್ತಿದ್ದ. ಪ್ರಕರಣದಲ್ಲಿ ಇತರ ಆರೋಪಿಗಳು ವಿವಿಧ ಹಂತಗಳಲ್ಲಿ ಸಿಕ್ಕಿಬಿದ್ದಾಗಲೂ ಮೊದಲ ಆರೋಪಿ ತಲೆಮರೆಸಿಕೊಂಡಿದ್ದ. ಎನ್‌ಐಎ ತಂಡವು ಮಟ್ಟನ್ನೂರು ಮತ್ತು ಸುತ್ತಮುತ್ತ ವಾರಗಳಿಂದ ರಹಸ್ಯ ತನಿಖೆ ನಡೆಸುತ್ತಿತ್ತು.
ಪ್ರಕರಣಕ್ಕೆ ಸಂಬAಧಿಸಿದ ಘಟನೆ ಮಾರ್ಚ್ ೨೩, ೨೦೧೦ ರಂದು ನಡೆದಿತ್ತು. ಸವಾದ್ ತನ್ನನ್ನು ಷಹಜಹಾನ್ ಎಂದು ಪರಿಚಯಿಸಿಕೊಂಡಿದ್ದು, ಆತನ ಕೆಲಸ ಮರಗೆಲಸವಾಗಿದೆ ಎಂದು ನೆರೆಹೊರೆಯವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಸವಾದ್‌ಗೆ ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಸವಾದ್ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ. ಕಳೆದ ವಾರವೂ ಮಾತನಾಡಿದ್ದ. ಬೆಳಗ್ಗೆ ವಿಷಯ ತಿಳಿಯಿತು ಎಂದು ನೆರೆಮನೆಯವರು ತಿಳಿಸಿದ್ದಾರೆ.
ಜನವರಿ ಅಂತ್ಯಕ್ಕೆ ಮನೆಯ ಅಗ್ರಿಮೆಂಟ್ ಮುಗಿಯುತ್ತಿದ್ದಂತೆ ಹೊಸ ಮನೆಗೆ ತೆರಳಲು ಸವಾದ್ ನಿರ್ಧರಿಸಿದ್ದ ಎಂಬ ಮಾಹಿತಿಯೂ ಬಂದಿದೆ. ಇಲ್ಲೇ ತಲೆಮರೆಸಿಕೊಂಡಿದ್ದು ಸಾಕಾಗಿ ಬೇರೆಡೆಗೆ ತೆರಳಲು ಮುಂದಾದಾಗ ಎನ್ ಐಎ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ವರದಿಯಾಗಿದೆ.
ಸವಾದ್ ವಿವಾಹವಾಗಿದ್ದು ಕಾಸರಗೋಡಿನಿಂದ. ಕೈಕತ್ತರಿಸಿದ ಪ್ರಕರಣದ ಶಂಕಿತ ಆರೋಪಿ ತಲೆಮರೆಸಿಕೊಂಡಿರುವ ಬಗ್ಗೆ ರಾಜ್ಯ ಪೋಲೀಸರಿಗೆ ಯಾವುದೇ ಮಾಹಿತಿ ಸಿಗದಿರುವುದು ಸಮುದಾಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಕಾರಣದಿಂದಾಗಿ, ಬಂಧನದ ನಂತರ, ಕೇರಳ ಪೊಲೀಸರು ಶಂಕಿತನ ಸ್ಥಳ, ಕಳೆದ ವರ್ಷಗಳಲ್ಲಿ ಅವನ ಚಟುವಟಿಕೆಗಳು ಮತ್ತು ಅವನಿಗೆ ಸಹಾಯ ಮಾಡಿದವರ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಹದಿಮೂರು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಕೈ ಕಡಿದ ಪ್ರಕರಣದ ಮೊದಲ ಆರೋಪಿ ಸವಾದ್ ನನ್ನು ಕಣ್ಣೂರಿನಲ್ಲಿ ನಿನ್ನೆ ಬಂಧಿಸಲಾಗಿತ್ತು.