ಕಾಸರಗೋಡು: ನಗರದ ಬಾಲಭವನ ಶಾಲೆಯಲ್ಲಿ ಒಂದು ದಿನದ ಅಧ್ಯಯನ ಶಿಬಿರ ನಡೆಯಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗುರುದತ್ತ ಪೈ ಸಮಾರಂಭ ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ಲೀಲಾವತಿ ಕೆ ನಾಯರ್ ಅವರ ಅಧ್ಯಕ್ಷತೆ ವಹಿಸಿದ್ದರು. ಪಿಟಿಎ ಸಂಘದ ಕೋಶಾಧಿಕಾರಿ ಪ್ರಕಾಶನ್ ಎನ್.ಬಿ ಉಪಸ್ಥಿತರಿದ್ದರು. ರಂಗಭೂಮಿ ಮತ್ತು ಸಿನಿಮಾ ಪ್ರವತ್ಕ ಸನಲ್ ಪಾಟಿಕಾನ ನೇತೃತ್ವದಲ್ಲಿ ಅಧ್ಯಯನ ಶಿಬಿರ ನಡೆಸಲಾಯಿತು. ಜಯಂತಿ ಸ್ವಾಗತಿಸಿದರು. ರಾಧಾ ವಂದಿಸಿದರು.