ಭೋಪಾಲ್: ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀ ರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಮಧ್ಯಪ್ರದೇಶದ ಭೋಪಾಲ್‌ನಿಂದ ಬೋಗನ್‌ವಿಲ್ಲಾ ಹೂವುಗಳನ್ನು ರವಾನಿಸಲಾಗುವುದು ಎಂದು ನರ್ಸರಿ ಮಾಲೀಕ ರಾಮ್‌ಕುಮಾರ್ ರಾಥೋಡ್ ತಿಳಿಸಿದ್ದಾರೆ.
ಅಯೋಧ್ಯೆಯ ರಾಮಮಂದಿರದ ಆವರಣ ಹಾಗೂ ಕಾರಿಡಾರ್ ಅನ್ನು ಅಲಂಕರಿಸಲು ವಿವಿಧ ಬಗೆಯ ಬೋಗನ್‌ವಿಲ್ಲಾ ( ಕಾಗದ ಹೂವು) ಹೂವುಗಳನ್ನು ಅಯೋಧ್ಯೆಗೆ ಕಳುಹಿಸಿ ಕೊಡಲಾಗುವುದು ಎಂದು ರಾಥೋಡ್ ಮಾಹಿತಿ ಹಂಚಿಕೊಂಡಿದ್ದಾರೆ.
ಅಯೋಧ್ಯೆಯ ರಾಮಮಂದಿರದ ವತಿಯಿಂದ 5-6 ವಿಧದ ಬಗೆಯ ಹೂವುಗಳನ್ನು ಒದಗಿಸಲು ತಿಳಿಸಿದ್ದಾರೆ. ಇವುಗಳಲ್ಲಿ ಬಿಳಿ, ಕಿತ್ತಳೆ, ಕೆಂಪು ಮತ್ತು ಹಳದಿ ಸೇರಿದಂತೆ ವಿವಿಧ ಬಣ್ಣಗಳ ಬೋಗನ್‌ವಿಲ್ಲಾ ಸೇರಿವೆ ಎಂದು ರಾಥೋಡ್ ಹೇಳಿದ್ದಾರೆ.
ಈಗಾಗಲೇ ಅಯೋಧ್ಯೆಗೆ ತಲಾ 10,000 ಹೂವುಗಳನ್ನು ಎರಡು ಬಾರಿ ಕಳುಹಿಸಿಕೊಡಲಾಗಿದೆ. ಈ ಜಾತಿಯ( ಬೋಗನ್‌ವಿಲ್ಲಾ ) ಹೂವುಗಳು ಎಲ್ಲಾ ಋತುಗಳಲ್ಲಿ ಅರಳುತ್ತವೆ. ಈ ಹೂವುಗಳನ್ನು ಬೆಳೆಯಲು ಹೆಚ್ಚಿನ ಕಾಳಜಿ ಅಗತ್ಯವಿಲ್ಲ ಹಾಗೂ ಕಡಿಮೆ ಪ್ರಮಾಣದ ನೀರಿನಿಂದ ಅವುಗಳನ್ನು ಪೋಷಿಸಬಹುದು ಎಂದು ರಾಥೋಡ್ ತಿಳಿಸಿದ್ದಾರೆ.
ರಾಥೋಡ್ ಒಡೆತನದ ನರ್ಸರಿಯು ರಾಮ ಮಂದಿರದ ಆವರಣ ಮತ್ತು ಕಾರಿಡಾರ್‌ನಲ್ಲಿ ಹೂವುಗಳನ್ನು ಒದಗಿಸಲು ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿತ್ತು.