ಬದಿಯಡ್ಕ: ಕೊಲ್ಲಂಗಾನ ಅರ್ತಲೆ ಶ್ರೀ ರಕ್ತೇಶ್ವರೀ ಕ್ಷೇತ್ರದ ನೂತನ ನೂತನ ಗರ್ಭ ಗುಡಿಯ ದಾರಂದ ಮುಹೂರ್ತ ಮತ್ತು ನಾಗನ ಕಟ್ಟೆಯ ಶಿಲಾನ್ಯಾಸ ಭಾನುವಾರ ಜರಗಿತು. ನಂತರ ನಡೆದ ಸಭಾ ಕಾರ್ಯಕ್ರಮವನ್ನು ಡಾ. ಅನಂತ ಕಾಮತ್ ಕಾಸರಗೋಡು ದೀಪಬೆಳಗಿಸಿ ಉದ್ಘಾಟಿಸಿದರು.
ಸುಬ್ಬಣ್ಣ ನಾಯ್ಕ ಅರ್ತಲೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಲ್ಲಿಕೋಟೆ ಟ್ರಾಫಿಕ್ ಎಸ್ಪಿ ಹರಿಶ್ಚಂದ್ರ ನಾಯ್ಕ್, ಕಾಸರಗೋಡು ಮಾರುತಿ ಗ್ಯಾಸ್ ಏಜನ್ಸಿಯ ಮಾಲಕ ಬಾಬ್ಕ್ಭುಟ್, ಮಂಜೇಶ್ವರ ಅನಂತ ಗ್ಯಾಸ್ ಏಜನ್ಸಿಯ ಮಾಲಕ ಶೋಭಾ ಗೋಪಾಲನ್, ಮಧೂರು ಗ್ರಾಮಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಸಂತೋಷ್ ಕುಮಾರ್ ಮಾನ್ಯ, ಮಹೇಶ್ ವಳಕ್ಕುಂಜ, ಪಿ.ವಿ.ಶಿವರಾಮ ಚಿತ್ತಾರಿ, ಕೃಷ್ಣಪ್ರಸಾದ ಚಿತ್ತಾರಿ ಮಾತನಾಡಿದರು. ಗೋಪಾಲಕೃಷ್ಣ ಮೇಗಿನಡ್ಕ, ವೆಂಕಪ್ಪ ನಾಯ್ಕ ಬೋಂದೇಲ್, ವೆಂಕಪ್ಪ ನಾಯ್ಕ ಅರ್ತಲ, ವನಿತಾ ಐತ್ತಪ್ಪ ನಾಯ್ಕ, ಸುಲೋಚನಾ ಗೋವಿಂದ ನಾಯ್ಕ ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷ ಶ್ರೀನಾಥ್ ಕೊಲ್ಲಂಗಾನ ಸ್ವಾಗತಿಸಿ, ಕಾರ್ಯದರ್ಶಿ ಪ್ರಮೋದ್ ಕುಮಾರ್ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ನಿರೂಪಿಸಿದರು. ಐತ್ತಪ್ಪನಾಯ್ಕ, ನಾರಾಯಣ ನಾಯ್ಕ, ಶಿವನಾಯ್ಕ, ವೇಣುಗೋಪಾಲ. ರಾಧಾಕೃಷ್ಣ, ವಿಜಯಕುಮಾರ್,ಅಶೋಕ ಕುಮಾರ್,ಆದರ್ಶ್ ನೇತೃತ್ವ ವಹಿಸಿದ್ದರು. ಶಿಲ್ಪಿಗಳಾದ ಮನೋಜ್ ಮಾಂಗಾಡ್, ದಯಾನಂದ ಮೇಗಿನಡ್ಕ, ಜಗನ್ನಿವಾಸ ಆಚಾರ್ಯ, ಜಿತೇಂದ್ರ ಆಚಾರ್ಯ ಪುತ್ತಿಗೆ, ವಾಮನ ನಾಯ್ಕ ಆರಂತೋಡು ಉಪಸ್ಥಿತರಿದ್ದರು.