ಮಾಸ್ಕೊ: ಉಕ್ರೇನ್‌ನ 65 ಯುದ್ಧ ಕೈದಿಗಳನ್ನು ಕರೆದೊಯ್ಯುತ್ತಿದ್ದ ಐಎಲ್-76 ಸೇನಾ ವಿಮಾನವು ರಷ್ಯಾ-ಉಕ್ರೇನ್ ಗಡಿ ಭಾಗದ ಬೆಲ್ಗಾರ್ಡ್ ಪ್ರಾಂತ್ಯದಲ್ಲಿ ಪತನಗೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯವು ಬುಧವಾರ ಹೇಳಿದೆ.
ಮಾಸ್ಕೊ: ಉಕ್ರೇನ್‌ನ 65 ಯುದ್ಧ ಕೈದಿಗಳನ್ನು ಕರೆದೊಯ್ಯುತ್ತಿದ್ದ ಐಎಲ್-76 ಸೇನಾ ವಿಮಾನವು ರಷ್ಯಾ-ಉಕ್ರೇನ್ ಗಡಿ ಭಾಗದ ಬೆಲ್ಗಾರ್ಡ್ ಪ್ರಾಂತ್ಯದಲ್ಲಿ ಪತನಗೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯವು ಬುಧವಾರ ಹೇಳಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊ ಒಂದರಲ್ಲಿ ಬೆಲ್ಗಾರ್ಡ್ ಪ್ರಾಂತ್ಯದಲ್ಲಿ ವಿಮಾನವೊಂದು ಪತನಗೊಂಡು ಬೆಂಕಿ ಹೊತ್ತುಕೊಂಡಂತೆ ಕಾಣುತ್ತದೆ.
'ಯುದ್ಧದಲ್ಲಿ ಸೆರೆಯಾದ ಉಕ್ರೇನ್‌ನ 65 ಸೈನಿಕರು ಈ ವಿಮಾನದಲ್ಲಿದ್ದರು. ಇವರೊಂದಿಗೆ 6 ವಿಮಾನ ಸಿಬ್ಬಂದಿ ಮತ್ತು 3 ರಕ್ಷಣಾ ಸಿಬ್ಬಂದಿ ಇದ್ದರು. ಕೈದಿಗಳ ಹಸ್ತಾಂತರ ಪ್ರಕ್ರಿಯೆಗಾಗಿ ಇವರನ್ನು ಬೆಲ್ಗಾರ್ಡ್ ಪ್ರಾಂತ್ಯದಲ್ಲಿನ ಉಭಯ ರಾಷ್ಟ್ರಗಳ ಗಡಿ ಪ್ರದೇಶಕ್ಕೆ ಕರೆತರಲಾಗುತ್ತಿತ್ತು' ಎಂದು ಸೇನೆ ಹೇಳಿದೆ.
ವಿಮಾನದಲ್ಲಿದ್ದವರ ಪರಿಸ್ಥಿತಿ ಏನಾಗಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಘಟನಾ ಸ್ಥಳಕ್ಕೆ ತನಿಖಾ ತಂಡ ಮತ್ತು ತುರ್ತು ಚಿಕಿತ್ಸಾ ತಂಡಗಳು ತೆರಳಿವೆ.
ಘಟನೆ ಕುರಿತು ಉಕ್ರೇನ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಸ್ಥಳೀಯ ಮಾಧ್ಯಮಗಳ ಪ್ರಕಾರ, ವಿಮಾನದಲ್ಲಿ ಶಸ್ತ್ರಾಸ್ತ್ರಗಳನ್ನು ಸಾಗಿಸಲಾಗುತ್ತಿತ್ತು. ಅದನ್ನು ಉಕ್ರೇನ್ ಹೊಡೆದುರುಳಿಸಿದೆ ಎಂದು ಉಕ್ರೇನ್‌ನ ಸೇನಾ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.