ತಿರುವನಂತಪುರಂ: ಕೇರಳದಿಂದ ಅಯೋಧ್ಯೆಗೆ ನ.30ರಂದು ಮೊದಲ ರೈಲು. 'ಅಸ್ತಾ ವಿಶೇಷ' ರೈಲು ಪಾಲಕ್ಕಾಡ್‍ನಿಂದ ರಾತ್ರಿ 7.10ಕ್ಕೆ ಹೊರಡಲಿದೆ.
ಫೆಬ್ರವರಿ 2, 9, 14, 19, 24 ಮತ್ತು 29 ರಂದು ಪಾಲಕ್ಕಾಡ್‍ನಿಂದ ಅಯೋಧ್ಯೆಗೆ ರೈಲು ಸೇವೆ ಇರುತ್ತದೆ. ಇದು ಕೊಯಮತ್ತೂರು, ತಿರುಪುರ್, ಈರೋಡ್, ಸೇಲಂ, ಜೋಲರ್‍ಪೇಟ್ ಮತ್ತು ಗೋಮತಿ ನಗರ ನಿಲ್ದಾಣಗಳಲ್ಲಿ ನಿಲ್ಲುತ್ತದೆ.
ಫೆಬ್ರವರಿ 3, 8, 13, 18, 23, 28 ಮತ್ತು ಮಾರ್ಚ್ 4 ರಂದು ಅಯೋಧ್ಯೆಯಿಂದ ಹಿಂದಿರುಗುವ ರೈಲು ಸೇವೆ ಇರುತ್ತದೆ. ರೈಲು ಹಾದುಹೋಗುವ ನಿಲ್ದಾಣಗಳಲ್ಲಿ ಹಿರಿಯ ರೈಲ್ವೆ-ಭದ್ರತಾ ಅಧಿಕಾರಿಗಳಿಗೆ ಪ್ರಯಾಣಿಕರ ಹೆಸರುಗಳು ಮುಂಚಿತವಾಗಿ ಲಭ್ಯವಿರುತ್ತವೆ. Iಖಅಖಿಅ ಮೂಲಕ ರೈಲು ಟಿಕೆಟ್ ಬುಕಿಂಗ್ ಆಗಿದೆ. ಪ್ರತಿದಿನ 10,000 ಪ್ರಯಾಣಿಕರು ರೈಲಿನಲ್ಲಿ ಅಯೋಧ್ಯೆಗೆ ತಲುಪುತ್ತಾರೆ ಎಂದು ಅಂದಾಜಿಸಲಾಗಿದೆ.
ಫೆಬ್ರವರಿ 22 ರಂದು ತಿರುವನಂತಪುರಂ ಸೆಂಟ್ರಲ್‍ನಿಂದ ಅಯೋಧ್ಯೆಗೆ ವಿಶೇಷ ರೈಲು ಇರುತ್ತದೆ. ವರ್ಕಲಾ, ಕೊಟ್ಟಾಯಂ, ಎರ್ನಾಕುಳಂ ಟೌನ್ ಮತ್ತು ಆಲುವಾದಲ್ಲಿ ನಿಲ್ದಾಣಗಳಿವೆ.