HEALTH TIPS

ಏಕಬಳಕೆಯ ಇ-ಸಿಗರೇಟ್‌ ನಿಷೇಧಕ್ಕೆ ಬ್ರಿಟನ್ ಚಿಂತನೆ

              ಲಂಡನ್: ಮಕ್ಕಳು ನಿಕೋಟಿನ್‌ ವ್ಯಸನಿಗಳಾಗುವುದನ್ನು ತಪ್ಪಿಸಲು ಏಕಬಳಕೆಯ ಇ-ಸಿಗರೇಟ್ ಮತ್ತಿತರ ಸಾಧನಗಳನ್ನು ನಿಷೇಧಿಸಲು ಬ್ರಿಟನ್ ಮುಂದಾಗಿದೆ.

                ಬ್ರಿಟನ್‌ನಲ್ಲಿ ಸದ್ಯ 18 ವರ್ಷಕ್ಕಿಂತ ಕಿರಿಯರಿಗೆ ಇ-ಸಿಗರೇಟ್ ಮತ್ತು ತಂಬಾಕು ಮಾರಾಟ ಮಾಡುವುದು ಅಕ್ರಮವಾಗಿದೆ. ಆದರೆ, ಕಳೆದ ಮೂರು ವರ್ಷಗಳಲ್ಲಿ ಯುವಜನರ ಇ-ಸಿಗರೇಟ್ ಬಳಕೆ ಮೂರು ಪಟ್ಟು ಹೆಚ್ಚಾಗಿದೆ.

                   ಅಗ್ಗದ ಮತ್ತು ಬಣ್ಣ ಬಣ್ಣದ ಇ-ಸಿಗರೇಟ್‌ಗಳು ಯುವಜನತೆಯ ಪಾಲಿಗೆ ಆಕರ್ಷಣೆಯಾಗಿವೆ.

                      ಏಕಬಳಕೆ ಇ-ಸಿಗರೇಟ್‌ ನಿಷೇಧಿಸುವುದರ ಜೊತೆಗೆ ಮಕ್ಕಳನ್ನು ಸೆಳೆಯಲು ವಿವಿಧ ಸುವಾಸನೆಗಳನ್ನು ಬೀರುವ ವಸ್ತುಗಳನ್ನು ಬಳಸಲಾಗುತ್ತಿದ್ದು, ಅವಕ್ಕೆ ಮಿತಿ ಹೇರಲಾಗುತ್ತದೆ. ಹಾಗೆಯೇ ಅವುಗಳ ಪ್ಯಾಕೆಟ್‌ಗಳನ್ನು ಕಣ್ಮನ ಸೆಳೆಯದಂತೆ ರೂಪಿಸಲು ಸೂಚಿಸಲಾಗುತ್ತದೆ ಎಂದು ಬ್ರಿಟನ್ ಸರ್ಕಾರ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries