ಕಾಸರಗೋಡು: ವಿದ್ಯಾರ್ಥಿಗಳ ಪ್ರಯಾಣ ಸೌಲಭ್ಯಗಳ ಕುರಿತಾದ ಸಭೆ ಜಿಲ್ಲಾಧಿಕಾರಿಗಳ ವಿಡಿಯೊ ಕಾನ್ಫರೆನ್ಸ್ ಸಭಾಂಗಣದಲ್ಲಿ ಜರುಗಿತು. ಎಂಡೋಸಲ್ಫಾನ್‍ಸೆಲ್ ಸಹಾಯಕ ಜಿಲ್ಲಾಧಿಕಾರಿ ಪಿ. ಸುರ್ಜಿತ್ ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡಿನಿಂದ ತಲಪ್ಪಾಡಿ ವರೆಗೆ ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್ ಒದಗಿಸುವುದು, ಕಾಲೇಜು ವಿದ್ಯಾರ್ಥಿಗಳ ರಿಯಾಯಿತಿ ಬಸ್‍ಪಾಸ್‍ಗಳ ನಕಲಿ ನಡೆಸಿರುವುದು, ವಿದ್ಯಾರ್ಥಿಗಳ ಬಸ್ ರಿಯಾಯಿತಿ ವಯೋಮಿತಿಯನ್ನು 27ಕ್ಕೆ ಏರಿಸುವುದು, ಕೇಂದ್ರೀಯ ವಿಶ್ವವಿದ್ಯಾಲಯದ ಎಂಎಸ್‍ಡಬ್ಲ್ಯು ವಿದ್ಯಾರ್ಥಿಗಳಿಗೆ ಫೀಲ್ಡ್‍ವರ್ಕ್ ಸಮಯದಲ್ಲಿ ಬಸ್‍ಗಳಲ್ಲಿ ರಿಯಾಯಿತಿ ನೀಡುವುದು, ಬಸ್‍ಗಳಿಗೆ ನಿಗದಿತ ಸಥಳಗಳಲ್ಲಿ ನಿಲುಗಡೆ ಕಲ್ಪಿಸದಿರುವುದು ಮುಂತಾದ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಪ್ರಾದೇಶಿಕ ಸಾರಿಗೆ ಅಧಿಕಾರಿ(ಆರ್‍ಟಿಒ) ಎ.ಸಿ ಶೀಬಾ, ಬಸ್ ಮಾಲೀಕರ ಸಂಘಟನೆ ಪ್ರತಿನಿಧಿಗಳಾದ ಕೆ. ಗಿರೀಶ್, ಸಿಎ ಮೊಹಮ್ಮದ್‍ಕುಞÂ, ಟಿ. ಲಕ್ಷ್ಮಣನ್, ಕೆ.ವಿ.ರವಿ, ಪೆರಿಯ ಸರ್ಕಾರಿ ಕಾಲೇಜು ಪ್ರಾಂಶುಪಾಲ ನಾರಾಯಣ ನಾಯ್ಕ್, ಕಾಸರಗೋಡು ಸರ್ಕಾರಿ ಕಾಲೇಜು ಪ್ರತಿನಿಧಿ ಎ. ಪ್ರಮೇಶ್, ವಿದ್ಯಾರ್ಥಿ ಸಂಘದ ಪ್ರತಿನಿಧಿ ಕೆ. ನಾಸರ್ ಅಬ್ದುಲ್ಲಾ, ಕೆ.ಪ್ರಸಾದ್, ಎಂ. ರಾಧಾಕೃಷ್ಣನ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.