ಕಾಸರಗೋಡು: ಪ್ರಮುಖ ರಾಜಕೀಯ ಮುಖಂಡ ಪೆÇ್ರಫೆಸರ್ ಖಾದರ್ ಮೊಯ್ದೀನ್, ಮಲಯಾಳಂ ಸಾಹಿತ್ಯದ ದಿಗ್ಗಜ ಟಿ. ಪದ್ಮನಾಭನ್ ಮತ್ತು ಏಷ್ಯಾದ ಅತಿದೊಡ್ಡ ಹಣಕಾಸು ವಿನಿಮಯ ಕೇಂದ್ರವಾದ ಯುನಿಮನಿಯ ಜನರಲ್ ಮ್ಯಾನೇಜರ್ ವೈ. ಸುಧೀರ್ ಕುಮಾರ್ ಶೆಟ್ಟಿ ಅವರು ಚೆರ್ಕಳಂ ಅಬ್ದುಲ್ಲಾ ಫೌಂಡೇಶನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ನಾಸರ್ ಚೆರ್ಕಳ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಚೆರ್ಕಳಂ ಅಬ್ದುಲ್ಲಾ ಸ್ಮಾರಕ ಪ್ರತಿಷ್ಠಿತ ಪ್ರೆಸ್ಟಿಜಿಯಸ್ ಲೀಡರ್‍ಶಿಪ್ ಪ್ರಶಸ್ತಿಗೆ ಮುಸ್ಲಿಂ ಲೀಗ್ ರಾಷ್ಟ್ರೀಯ ಅಧ್ಯಕ್ಷ ಪ್ರಾಧ್ಯಾಪಕ ಕೆ.ಎಂ. ಖಾದರ್ ಮೊಯ್ದೀನ್, ಚೆರ್ಕಳಂ ಅಬ್ದುಲ್ಲಾ ಸ್ಮಾರಕ ಕಲ್ಚರಲ್ ಹೋನೆಸ್ಟ್ ಪ್ರಶಸ್ತಿಗೆ ಟಿ. ಪದ್ಮನಾಭನ್ ಮತ್ತು ಚೆರ್ಕಳಂ ಅಬ್ದುಲ್ಲಾ ಸ್ಮಾರಕ ಬಿಸಿನೆಸ್ ಹೋನೆಸ್ಟ್ ಪ್ರಶಸ್ತಿಗೆ ವೈ. ಸುಧೀರ್ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ನಗದು ಮತ್ತು ಪ್ರಶಸ್ತಿಫಲಕ ಹೊಂದಿದೆ.
ಇದೇ ಸಂದರ್ಭ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಹಿರಿಯ ಮುಖಂಡ ಎಂ.ಎಸ್. ಮುಹಮ್ಮದ್ ಕುಞÂ, ವಿಶ್ವ ದರ್ಜೆಯ ಚಿತ್ರಕಲಾವಿದ ಪಿ.ಎಸ್. ಪುಣಿಂಚಿತ್ತಾಯ ಮತ್ತು ಹಿರಿಯ ಮಾಧ್ಯಮ ಕಾರ್ಯಕರ್ತ ಸೂಫಿವಾಣಿಮೇಲ್ ಅವರು ವಿಶೇಷ ಗೌರವಕ್ಕೆ ಆಯ್ಕೆಯಾಗಿದ್ದು, ನಗದು ಮತ್ತು ಪ್ರಶಸ್ತಿಫಲಕ ನೀಡಲಾಗುವುದು. ಚೆರ್ಕಳಂ ಅಬ್ದುಲ್ಲಾ ಪ್ರತಿಷ್ಠಾನವು ನೇಮಿಸಿದ ತೀರ್ಪುಗಾರರ ಮತ್ತು ಸಾಹಿತ್ಯ ವೇದಿಕೆಯ ಅಧ್ಯಕ್ಷ ಪದ್ಮನಾಭನ್ ಬ್ಲಾತ್ತೂರ್ ಅವರ ಅಧ್ಯಕ್ಷತೆಯಲ್ಲಿ ಚೆರ್ಕಳಂ ಅಬ್ದುಲ್ಲಾ ಸ್ಮಾರಕ ಪ್ರಶಸ್ತಿ ಮತ್ತು ವಿಶೇಷ ಗೌರವ ಪ್ರಕಟಿಸಲಾಗಿದೆ. ಜ.25 ರಂದು ಮಧ್ಯಾಹ್ನ 12.30ರಿಂದ ಮಂಜೇಶ್ವರ ಕುಂಜತ್ತೂರಿನ ಅನಾಥಾಶ್ರಮ ಕ್ಯಾಂಪಸ್‍ನಲ್ಲಿ ನಡೆಯುವ ಚೆರ್ಕಳಂ ಅಬ್ದುಲ್ಲ ಸಂಸ್ಮರಣಾ ಸಂಗಮ ಹಾಗೂ ಸಾಂಸ್ಕøತಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಯ್ಯದ್ ಸಾದಿಕಲಿ ಶಿಹಾಬ್ ತಙಳ್ ಪಾಣಕ್ಕಾಡ್ ಸಮಾರಂಭ ಉದ್ಘಾಟಿಸುವರು. ಸ್ವಾಗತಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್ ಉಪ್ಪಳಗೇಟ್ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ, ಶಾಸಕ ಪಿ.ಕೆ ಕುಞËಲಿಕುಟ್ಟಿ ಮುಖ್ಯ ಭಾಷಣ ಮಾಡುವರು. ಪ್ರೊ. ಆಲಿಕುಟ್ಟಿ ಮುಸ್ಲಿಯಾರ್, ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್, ಆಯಿಷಾ ಚೆರ್ಕಳ ಮೊದಲಾದವರು ಪಾಲ್ಗೊಳ್ಳುವರು. ಸಜೆ 4.30ಕ್ಕೆ ನಡೆಯುವ ಸಾಂಸ್ಕøತಿಕ ಸಮ್ಮೇಳನವನ್ನು ಸಯ್ಯದ್ ಮುನಾವರಲಿ ಶಿಹಾಬ್ ತಙಳ್ ಪಾಣಕ್ಕಾಡ್ ಉದ್ಘಾಟಿಸುವರು. ಸಚಿವ ರೋಶಿ ಅಗಸ್ಟಿನ್, ಎಡನೀರು ಶ್ರಿ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಸಯ್ಯದ್ ಹಮೀದ್ ಅನ್ವರ್ ಅಲ್‍ಅಹದಲ್ ತಙಳ್‍ವಂದನೀಯ ಫಾ. ರೆವರೆಮಡ್ ಪಿರೇರಾ, ಸಸಿ.ಕೆ ಪದ್ಮನಾಭನ್ ಮೊದಲಾದವರು ಭಾಗವಹಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ತೀರ್ಪುಗಾರರ ಸಮಿತಿ ಅಧ್ಯಕ್ಷ ಪದ್ಮನಾಭನ್ ಬ್ಲಾತೂರ್, ಸದಸ್ಯರಾದ ವಿ.ವಿ. ಪ್ರಭಾಕರನ್, ಬಿ. ಅಶ್ರಫ್, ಫೌಂಡೇಶನ್ ಅಧ್ಯಕ್ಷ ನಾಸರ್ ಚೆರ್ಕಳಂ, ಹಿರಿಯ ಕಾರ್ಯಕಾರಿ ಸದಸ್ಯ ಕಬೀರ್ ಚೆರ್ಕಳ ಉಪಸ್ಥಿತರಿದ್ದರು.