ಮಂಜೇಶ್ವರ :ಅಯೋಧ್ಯೆಯ ಶ್ರೀರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಪ್ರಯುಕ್ತ ದೈಗೋಳಿ ಶ್ರೀ ರಾಮಕೃಷ್ಣ ಭಜನಾ ಮಂದಿರದಲ್ಲಿ ಭಗವದ್ಗೀತೆ ಪಾರಾಯಣ, ರಾಮತಾರಕ ಮಂತ್ರ, ಹನುಮಾನ್ ಚಾಲೀಸ್, ಭಜನೆ ಮುಂತಾದ ಕಾರ್ಯಕ್ರಮಗಳು ನಡೆದುವು.
ಈ ಸಂದರ್ಭ ಜರಗಿದ ಸಭಾ ಕಾರ್ಯಕ್ರಮದಲ್ಲಿ ಶ್ರೀಲತಾ ಕೋರನ್ ಅಧ್ಯಕ್ಷತೆ ವಹಿಸಿದರು. ಯಶೋಧ ಹಾಗೂ ಲೀಲ ಮಯ್ಯ ಪ್ರಾರ್ಥನೆ ಹಾಡಿದರು. ಮಂದಿರದ ಅಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್, ವಿಶ್ವಹಿಂದೂ ಪರಿಷತ್ ನೇತಾರ ಬಿ.ವಿ. ಸುರೇಶ್, ಗ್ರಾಮ ಪವಿತ್ರಪಾಣಿ ಶ್ರೀಹರ್ಷ ಕುಮಾರ್ ಪಾತೂರಾಯ, ಆನೆಕಲ್ಲು ಶ್ರೀಸಂತಾನ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಟ್ರಸ್ಟಿ ಕೃಷ್ಣ ನಾಯ್ಕ್ ಸೊಡಂಕೂರು ಅತಿಥಿಗಳಾಗಿ ಉಪಸ್ಥಿತರಿದ್ದರು. ಕರಸೇವೆಯಲ್ಲಿ ಭಾಗವಹಿಸಿದ್ದ ಗೋಪಾಲಕೃಷ್ಣ ಭಟ್ ಪಾರೆಕುಂಡಡ್ಕ, ಸತ್ಯನಾರಾಯಣ ಭಟ್ ಪಜ್ವ, ಬಾಲಕೃಷ್ಣ ಸೇನವ ನಡಿಮಾರು ಹಾಗೂ ಗೋಪಾಲಕೃಷ್ಣ ಭಟ್ ಅಬ್ಬೆಮನೆಯವರನ್ನು ಸನ್ಮಾನಿಸಲಾಯಿತು. ಮಾಧವ ಶೆಟ್ಟಿಗಾರ್ ದೈಗೋಳಿ ಸ್ವಾಗತಿಸಿ, ವಂದಿಸಿದರು. ಸಂತೋಷ್ ಕುಮಾರ್ ಶೆಟ್ಟಿ, ಬಾಬು ಮಡ್ವ, ಶಂಕರನಾರಾಯಣ ಭಟ್ ಸಾದಂಗಯ, ಧರ್ಮರಾಜ್ ಬೋಳ್ನ, ಚರಣ್ ರಾಜ್ ದೈಗೋಳಿ, ಸುಂದರ ದೈಗೋಳಿ ಹಾಗೂ ಪದ್ಮನಾಭ ದೈಗೋಳಿ ನೇತೃತ್ವ ನೀಡಿದರು.