ಕೇಪ್ ಟೌನ್: ಜಾಡುಗಳು ಹಾಗೂ ಕುರುಹುಗಳ ವೈಜ್ಞಾನಿಕ ಅಧ್ಯಯನದ ಮೂಲಕ ಕಳೆದ 15 ವರ್ಷಗಳಲ್ಲಿ ನಾವು 350ಕ್ಕೂ ಹೆಚ್ಚು ಕಶೇರುಕ ಪಳೆಯುಳಿಕೆಗಳ ಜಾಡಿನ ಕುರುಹನ್ನು ದಕ್ಷಿಣ ಆಫ್ರಿಕಾದ ದಕ್ಷಿಣ ಕರಾವಳಿ ಪ್ರದೇಶದಿಂದ ಪತ್ತೆ ಹಚ್ಚಿದ್ದೇವೆ.
ಈ ಸಂದರ್ಭದಲ್ಲಿ ನಾವು ನಮ್ಮ ಗುರುತು ಹಚ್ಚುವ ಕೌಶಲವನ್ನು ನಿಕಷಕ್ಕೆ ಒಡ್ಡಿ, ಪಳೆಯುಳಿಕೆ ಹೆಜ್ಜೆ ಶಾಸ್ತ್ರ ಎಂಬ ಕ್ಷೇತ್ರದಲ್ಲಿ ಜಾಡಿನ ಕುರುಹುಗಳನ್ನು ಪತ್ತೆ ಹಚ್ಚುವ ಮತ್ತು ವ್ಯಾಖ್ಯಾನಿಸುವ ಕೆಲಸ ಮಾಡಿದ್ದೇವೆ. ಮತ್ತು ಪ್ರತಿ ಬಾರಿಯೂ ನಾವು ತಕ್ಷಣವೇ ಭೂಮಿಯ ಯಾವುದೇ ಭಾಗದಲ್ಲೂ ಇಂತಹ ಪಳೆಯುಳಿಕೆಗಳು ಇಲ್ಲದಿರುವುದನ್ನು ಕಂಡು ಅಚ್ಚರಿಗೊಂಡಿದ್ದೇವೆ.
ಇಂತಹುದೇ ಒಂದು ಅನಿರೀಕ್ಷಿತ ಆವಿಷ್ಕಾರದ ಕ್ಷಣವು ಕೇಪ್ ಟೌನ್ ನಿಂದ 200 ಕಿಮೀ ದೂರವಿರುವ ಡಿ ಹೂಪ್ ಪ್ರಾಕೃತಿಕ ಸಂರಕ್ಷಿತ ಪ್ರದೇಶದ ಕರಾವಳಿ ತೀರದಲ್ಲಿ 2019ರಲ್ಲಿ ಘಟಿಸಿತು. ಪಳೆಯುಳಿಕೆಗಳ ಸಮೂಹದಿಂದ ಎರಡು ಮೀಟರ್ ಗೂ ಕಡಿಮೆ ಇದ್ದ ಪ್ರದೇಶದಲ್ಲಿ ವೃತ್ತಾಕಾರದ ಲಕ್ಷಣ ಹೊಂದಿದ್ದ ಆನೆಯ ಜಾಡು ಪತ್ತೆಯಾಯಿತು. ಆ ಜಾಡು 57 ಸೆಮೀ ವ್ಯಾಸ ಹಾಗೂ ಕೇಂದ್ರೀಕೃತ ವೃತ್ತಾಕಾರದ ಲಕ್ಷಣಗಳನ್ನು ಹೊಂದಿತ್ತು. ಈ ಮೇಲ್ಮೈನಿಂದ 7 ಸೆಮೀ ಕೆಳಗೆ ಮತ್ತೊಂದು ಪದರವು ಕಂಡು ಬಂದಿತು. ಈ ಪದರವು ಕನಿಷ್ಠ 14 ಸಮಾನಾಂತರ ಕಂದಕಗಳ ಲಕ್ಷಣವನ್ನು ಹೊಂದಿತ್ತು. ಆ ಕಂದಕಗಳು ವೃತ್ತಾಕಾರವನ್ನು ಸಮೀಪಿಸಿದಾಗ, ಅದರೆಡೆಗೆ ಕೊಂಚ ತಿರುವನ್ನು ಹೊಂದಿದ್ದವು. ಈ ಎರಡು ಶೋಧನೆಗಳನ್ನು ನಮ್ಮ ಅಂದಾಜಿನೊಂದಿಗೆ ಹೋಲಿಸಿದಾಗ, ಅವು ಪರಸ್ಪರ ಸಂಬಂಧ ಹೊಂದಿರುವುದು ಹಾಗೂ ಅವು ಒಂದೇ ಮೂಲ ಹೊಂದಿರುವುದು ಕಂಡು ಬಂದಿತು.
ಆನೆಗಳು ಭೂಮಿ ಮೇಲಿನ ಭಾರಿ ತೂಕದ ಪ್ರಾಣಿಗಳಾಗಿವೆ. ಅವು ಉದ್ದನೆಯ, ಆಳವಾದ, ಸುಲಭವಾಗಿ ಗುರುತಿಸಬಲ್ಲ ಹೆಜ್ಜೆ ಗುರುತುಗಳನ್ನು ಬಿಡುತ್ತವೆ. ನಾವು ನಮ್ಮ ಅಧ್ಯಯನ ಪ್ರದೇಶದಲ್ಲಿ ಪಳೆಯುಳಿಕೆಗಳಾಗಿರುವ 35 ಆನೆಗಳನ್ನು ದಾಖಲಿಸಿದೆವು ಹಾಗೂ ಪಳೆಯುಳಿಕೆಯಾಗಿರುವ ಆನೆಯ ಉದ್ದನೆಯ ಸೊಂಡಿಲಿನ ಅಚ್ಚಿನ ಪ್ರಪ್ರಥಮ ಪುರಾವೆಯನ್ನೂ ದಾಖಲಿಸಿಕೊಂಡೆವು.
ಭೂಮಿ ಮೇಲಿನ ಭಾರಿ ಗಾತ್ರದ ಜೀವಿಯಾದ ಡೈನೊಸಾರ್ ನಂತೆಯೆ ಆನೆಗಳೂ ಕೂಡಾ ಭಾರಿ ಗಾತ್ರದ ಪ್ರಾಣಿಗಳ ಗುಂಪಾಗಿದ್ದು, ನೆಲದ ಮೇಲೆ ಹೆಜ್ಜೆ ಹಾಕುವಾಗ ಅವನ್ನು ಸಣ್ಣ ಪ್ರಮಾಣದ ಭೂಕಂಪನವನ್ನು ಸೃಷ್ಟಿಸುವ ಭೂವೈಜ್ಞಾನಿಕ ಎಂಜಿನಿಯರ್ ಗಳು ಎಂತಲೇ ಪರಿಗಣಿಸಬೇಕಾಗುತ್ತದೆ. ಈ ಸಂಗತಿಗೆ ಭೂಕಂಪನ ತರಂಗಗಳನ್ನು ಸೃಷ್ಟಿಸುವ ಮೂಲಕ ಸಂಪರ್ಕ ಸಾಧಿಸುವ ಅದ್ಭುತ ಸಾಮರ್ಥ್ಯ ಹೊಂದಿರುವ ಆನೆಗಳೊಂದಿಗೆ ಸಂಬಂಧ ಕಲ್ಪಿಸಬೇಕಾಗುತ್ತದೆ. ಇವು ಒಂದು ಬಗೆಯ ಶಕ್ತಿಯಾಗಿದ್ದು, ಇವು ಭೂತಳದಲ್ಲಿ ಸಂಚರಿಸಬಲ್ಲವಾಗಿವೆ.
2019ರಲ್ಲಿ ನಾವು ಪತ್ತೆ ಹಚ್ಚಿದ ಲಕ್ಷಣಗಳು ಇಂತಹುದೇ ವಿದ್ಯಮಾನಗಳನ್ನು ಪ್ರತಿಫಲಿಸುವಂತೆ ತೋರುತ್ತವೆ. ಆನೆಗಳು ಹೊರಕ್ಕೆ ತರಂಗಗಳನ್ನು ಹೊಮ್ಮಿಸುತ್ತಿರುವಂತೆ. ಈ ಕುರಿತು ಹೆಚ್ಚುವರಿ ತನಿಖೆ ಹಾಗೂ ಪರ್ಯಾಯ ವಿವರಣೆಗಳನ್ನು ಕುರಿತ ಕೂಲಂಕಷ ಶೋಧ ನಡೆಸಿದ ನಂತರ, ನಾವು ವಿಶ‍್ವದ ಪ್ರಪ್ರಥಮ ಭೂಕಂಪನ ಕುರುಹು ಹೊಂದಿರುವ ಪಳೆಯುಳಿಕೆಯ ಜಾಡನ್ನು ಪತ್ತೆ ಹಚ್ಚಿದ್ದು, ಇದು ಆನೆಗಳೊಂದಿಗೆ ಭೂತಳದ ಸಂಪರ್ಕವನ್ನು ಸಾಧಿಸುತ್ತದೆ.
ಆನೆಯ ಭೂಕಂಪನ ಸಾಮರ್ಥ್ಯ
1980ರಿಂದ ಆನೆಯ ಭೂಕಂಪನ ಸಾಮರ್ಥ್ಯ ಹಾಗೂ ಇನ್ ಫ್ರಾ ಸದ್ದಿನ ಮೂಲಕ ಭೂಕಂಪನ ಸಂಪರ್ಕ ಸಾಧಿಸುವ ಆನೆಗಳ ಕುರಿತು ಬೆಳೆಯುತ್ತಲೇ ಇರುವ ಸಾಹಿತ್ಯವು ದಾಖಲಿಸಿದೆ. ಮನುಷ್ಯ ಆಲಿಸಬಹುದಾದ ಕ್ಷೀಣ ಸದ್ದಿನ ಸಾಮರ್ಥ್ಯ 20 ಹರ್ಟ್ಝ್. ಅದಕ್ಕಿಂತಲೂ ಕಡಿಮೆ ಕಂಪನಾಂಕಗಳನ್ನು ಹೊಂದಿರುವ ಸದ್ದುಗಳನ್ನು ಇನ್ ಫ್ರಾ ಸದ್ದು ಎಂದು ಕರೆಯಲಾಗುತ್ತದೆ. ಗಂಟಲ ಮೂಲಕ ಘೀಳಿಡುವ ಆನೆಗಳು, ಅವನ್ನು ಇನ್ ಫ್ರಾಸಾನಿಕ್ ವ್ಯಾಪ್ತಿಯೊಳಗೆ ತಮ್ಮ ಪಾದಗಳ ಮೂಲಕ ಭೂತಳಕ್ಕೆ ರವಾನಿಸುತ್ತವೆ.
ದೊಡ್ಡ ವಿಸ್ತೀರ್ಣದಲ್ಲಿ ಇನ್ ಫ್ರಾ ಸದ್ದುಗಳು (ಈ ಸದ್ದು ಕೊಂಚ ಹೆಚ್ಚು ಕಂಪನಾಂಕ ಹೊಂದಿದ್ದರೂ ನಮಗೆ ತುಂಬಾ ಜೋರು ಸದ್ದಿನಂತೆ ಭಾಸವಾಗುತ್ತದೆ) ಭಾರಿ ಕಂಪನಾಂಕದ ಸದ್ದುಗಳಿಗಿಂತ ವೇಗವಾಗಿ ಪ್ರಯಾಣಿಸುತ್ತವೆ. ಇದರ ವೇಗವು 6 ಕಿಮೀ ದೂರಕ್ಕಿಂತ ಹೆಚ್ಚಿರುತ್ತದೆ. ಇಂತಲ್ಲಿ ಆನೆಗಳಿಗೆ ಒಂದು ಅನುಕೂಲವಿರುತ್ತದೆ. ಸಣ್ಣ ಗಾತ್ರದ ಜೀವಿಗಳು ವಾಚ್ಯವಾಗುವ ಮೂಲಕ ಕಡಿಮೆ ಕಂಪನಾಂಕದ ಸದ್ದನ್ನು ಸೃಷ್ಟಿಸಲು ಸಾಧ್ಯವಿಲ್ಲ. ಆನೆಯ ಗುಂಪುಗಳು ಗಣನೀಯ ದೂರದೊಂದಿಗೆ ದೂರ ವ್ಯಾಪ್ತಿಯ ಭೂಕಂಪನ ಸಂಪರ್ಕದೊಂದಿಗೆ ಸಂವಾದ ನಡೆಸಬಲ್ಲವು ಹಾಗೂ ಮರಳುಗಾಡು ಪ್ರದೇಶಗಳು ಮತ್ತಷ್ಟು ದೂರ ಪ್ರಯಾಣಿಸಲು ಅವಕ್ಕೆ ಸಂಪರ್ಕ ಒದಗಿಸುವುದು ಕಂಡು ಬರುತ್ತದೆ ಎಂದು ಭಾವಿಸಲಾಗಿದೆ.
ಆನೆ ಮತ್ತು ಡೈನೊಸಾರ್ ನೊಂದಿಗೆ ಹೋಲಿಕೆಯನ್ನು ಮುಂದುವರಿಸಿ, ಡೈನೊಸಾರ್ ಜಾಡುಗಳ ಮೇಲಿನ ಹಲವಾರು ಪ್ರಕಟಣೆಗಳನ್ನು ನಾವು ಪರಿಗಣಿಸಿದ್ದೇವೆ. ಕೊರಿಯಾದ ಜಾಡಿನಲ್ಲಿ ಮಾತ್ರ ಸಂಭಾವ್ಯ ಕೇಂದ್ರೀಕೃತ ವೃತ್ತಾಕಾರ ಹೊಂದಿರುವ ನಿದರ್ಶನದ ಬಗ್ಗೆ ನಮಗೆ ತಿಳಿದಿದ್ದು, ಉಳಿದಂತೆ ಯಾವ ಜಾಡುಗಳೂ ಸಮಾನಾಂತರ ಕಂದಕಗಳನ್ನು ಹೊಂದಿಲ್ಲ. ಈ ಸಂಗತಿಯು ಆನೆಗಳ ಬಗ್ಗೆ ನಮಗೊಂದು ವಿಶಿಷ್ಟ ಹೊಳಹನ್ನು ನೀಡುತ್ತಿದ್ದು, ಆನೆಗಳು ಜಾಡಿನೊಳಗೆ ಕೇಂದ್ರೀಕೃತ ವೃತ್ತಾಕಾರವನ್ನು ಸೃಷ್ಟಿಸಿ, ಅದಕ್ಕೆ ಸಂಬಂಧಿಸಿದ ಕಂದಕ ಲಕ್ಷಣಗಳತ್ತ ಮುನ್ನಡೆಯುತ್ತವೆ. ಆನೆಯ ಘೀಳುಡುವಿಕೆ ಈ ಮಾತಿಗೆ ತೋರಿಕೆಯ ವಿವರಣೆಯನ್ನು ಒದಗಿಸುತ್ತದೆ.
ನಮ್ಮ ಡಿ ಹೂಪ್ ನೈಸರ್ಗಿಕ ಸಂರಕ್ಷಿತ ಪ್ರದೇಶದ ಸನ್ನಿವೇಶದಲ್ಲಿ, ಆನೆಗಳಿಂದ ಹೊಮ್ಮುವ ಘೀಳಿನ ಸದ್ದು ಆನೆಗಳ ಪಾದಗಳ ಮೂಲಕ ಕೆಳಗೆ ಪ್ರಯಾಣಿಸಿ, ಕೇಂದ್ರೀಕೃತ ವೃತ್ತಾಕಾರದ ಲಕ್ಷಣಗಳನ್ನು ಸೃಷ್ಟಿಸಿವೆ ಎಂಬುದು ನಮ್ಮ ಪ್ರತಿಪಾದನೆಯಾಗಿದೆ. ಅವು ಕಂಪಿಸುವ ಮೇಲ್ಮೈ ಮೇಲೆ ಮರಳನ್ನು ಉದುರಿಸಿದಾಗ ಉಂಟಾಗುವ ಕೆಲವು ಸ್ಪಷ್ಟ ಮಾದರಿಗಳ ನೆನಪನ್ನು ತರುತ್ತವೆ. ಆ ಸಂದರ್ಭದಲ್ಲಿ ಕೇಂದ್ರೀಕೃತ ವೃತ್ತಾಕಾರ ಲಕ್ಷಣಗಳು ಕಂಡು ಬರುವ ಮೇಲ್ಮೈ ಬಹುಶಃ ಮರಳಿನ ದಿಬ್ಬದ ಕೆಳಗಿನದ್ದಿರಬೇಕು. ಆಗ ಸಮಾನಾಂತರ ಕಂದಕಗಳು ಉಪ ಮೇಲ್ಮೈ ಮೇಲಿನ ಪಳೆಯುಳಿಕೆ ಕುರುಹಿನ ಜಾಡನ್ನು ಪ್ರತಿನಿಧಿಸುತ್ತವೆ. ಆ ಪಳೆಯುಳಿಕೆ ಜಾಡು ಎಷ್ಟು ಪುರಾತನವಾದುದು ಎಂಬುದು ನಮಗಿನ್ನೂ ತಿಳಿದಿಲ್ಲ; ನಾವು ಆ ಮಾದರಿಗಳನ್ನು ಪರೀಕ್ಷೆಗಾಗಿ ರವಾನಿಸಿದ್ದೇವೆ.
ಶಿಲಾಪದರದ ಮೇಲೆ ಘೀಳಿನ ಗುರುತು
ಆನೆಯ ಭೂಕಂಪನ ಸಾಮರ್ಥ್ಯವು ವಿಜ್ಞಾನಿಗಳ ಪಾಲಿಗೆ ಬಹುತೇಕ ಹೊಸ ಅಧ್ಯಯನ ಕ್ಷೇತ್ರವಾಗಿದೆ. ಹೀಗಿದ್ದೂ, ಆನೆಗಳಿಗೆ ನಿಕಟವಾಗಿ ಜೀವಿಸುತ್ತಿರುವವರಿಗೆ ಪ್ರಾಣಿಗಳು ಕಂಪನದ ಮೂಲಕ ಸಂಪರ್ಕ ಸಾಧಿಸುತ್ತವೆ ಎಂಬ ಅಂದಾಜು ಅಚ್ಚರಿಯನ್ನೇನೂ ಉಂಟು ಮಾಡಲಾರದು. ಆನೆಗಳು ಘೀಳಿಡುವ ಮೂಲಕ ಸೃಷ್ಟಿಯಾಗುವ ಕಂಪನಗಳನ್ನು ಖಂಡಿತವಾಗಿಯೂ ಚಾಣಾಕ್ಷ ವೀಕ್ಷಕರು ಕೆಲ ಸಮಯ ಅನುಭವಿಸಬಲ್ಲರು (ಕೇಳಿಸಿಕೊಳ್ಳುವ ಬದಲು). ಈ ಜ್ಞಾನವು ತೀರಾ ಇತ್ತೀಚಿನದಲ್ಲ ಎಂಬುದೂ ಕಂಡು ಬರುತ್ತಿದೆ.
ದಕ್ಷಿಣ ಆಫ್ರಿಕಾದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಈ ಜ್ಞಾನವನ್ನು ಮೂಲನಿವಾಸಿ ಸ್ಯಾನ್ ಜನರು ಪ್ರಶಂಸಿಸಿದ್ದರು ಹಾಗೂ ಆಚರಿಸಿದ್ದರು ಎಂಬುದನ್ನು ನಮ್ಮ ತಂಡದ ಶಿಲಾಪದರ ತಜ್ಞರು ಶಿಲಾಪದರಗಳನ್ನು ಗುರುತಿಸಿ, ವ್ಯಾಖ್ಯಾನಿಸಿದ್ದಾರೆ. ಕೆಲವು ಶಿಲಾಪದರ ಪ್ರದೇಶಗಳಲ್ಲಿ ಸದ್ದು ಅಥವಾ ಕಂಪನಕ್ಕೆ ಪ್ರತಿಯಾಗಿ ಆನೆಯ ಚಿತ್ರವನ್ನು ಚಿತ್ರಿಸಿರುವುದು ಕಂಡು ಬಂದಿದೆ.
ಉದಾಹರಣೆಗೆ, ಸೆಡೆರ್ ಬರ್ಗ್ ನ ಕ್ರಿಸ್ಟೊ ಪ್ರದೇಶದಲ್ಲಿ ಕಲಾವಿದನೊಬ್ಬ ಹಲವಾರು ಗುಂಪುಗಳಲ್ಲಿ 31 ಆನೆಗಳನ್ನು ಚಿತ್ರಿಸಿದ್ದಾನೆ. ಅವೆಲ್ಲ ನೈಜ ಅನುಕ್ರಮಣಿಕೆಯಲ್ಲಿವೆ. ಪ್ರತಿ ಆನೆಯ ಸುತ್ತಲೂ ಕೆಂಪು ಗೆರೆ ಇದ್ದು, ಅಂಕುಡೊಂಕು ಗೆರೆಗಳು ಹೊಟ್ಟೆ, ತೊಡೆ ಸಂದು, ಗಂಟಲು, ಸೊಂಡಿಲು ಹಾಗೂ ನಿರ್ದಿಷ್ಟವಾಗಿ ಪಾದವನ್ನು ಸ್ಪರ್ಶಿಸುತ್ತವೆ. ಹಲವಾರು ಅಂಕುಡೊಂಕು ಗೆರೆಗಳು ಆನೆಯನ್ನು ನೆಲಕ್ಕೆ ಸಂಪರ್ಕಿಸುತ್ತವೆ. ಇವು ಆನೆಗಳ ಗುಂಪಿನ ಸುತ್ತ ದಟ್ಟ ಗೆರೆಗಳ ಮೂಲಕ ಸಂಪರ್ಕಿತಗೊಂಡಿದ್ದು, ಆನೆಗಳಿಂದ ಮತ್ತು ಆನೆಗಳ ಹೊರಗೆ ಕೇಂದ್ರೀಕೃತ ವೃತ್ತಾಕಾರಗಳಾಗಿ ಹೊರಹೊಮ್ಮುತ್ತವೆ.
ಈ ಚಿತ್ರವು ಬಹುಶಃ ಆನೆಗಳೊಂದಿಗಿನ ಭೂಕಂಪನ ಸಂಪರ್ಕದ ಕುರಿತು ಸ್ಯಾನ್ ಕಲಾವಿದನು ಸೃಷ್ಟಿಸಿರುವ ಚಿತ್ರವಾಗಿದೆ ಎಂದು ವ್ಯಾಖ್ಯಾನಿಸಲಾಗಿದೆ. ಅಲುಗಾಟ ಮತ್ತು ಕಂಪನದ ಭಾವವು ಸ್ಯಾನ್ ಜನರು ತಾರಾ ಎನ್ ಓಮ್ ಎಂದು ಕರೆಯುವ ಆನೆ ಗೀತೆ ಮತ್ತು ಆನೆ ನೃತ್ಯವಾದ ಸ್ಯಾನ್ ಶಮನ ನೃತ್ಯಗಳಲ್ಲಿ ಪ್ರಮುಖ ಸಂಗತಿಯಾಗಿದೆ. ಎನ್ ಓಮ್ ಎಂದು ಕರೆಯಲ್ಪಡುವ ಗೆರೆಗಳನ್ನು ಎಲ್ಲ ಜೀವಿಗಳು ಚಲಿಸುವಂತೆ ಮಾಡುವ ಹಾಗೂ ಎಲ್ಲ ಸ್ಫೂರ್ತಿದಾಯ ಶಕ್ತಿಯ ಮೂಲವೆಂದು ಪರಿಗಣಿಸಲಾಗಿದೆ.
ಆನೆಯ ಭೂಕಂಪನ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳಲು ಮೂರು ಜ್ಞಾನಾಂಗಗಳ ಸಮಗ್ರತೆ ಅಗತ್ಯ ಎಂಬುದು ನಮ್ಮ ಭಾವನೆಯಾಗಿದೆ: ಆನೆಗಳ ಸಂಖ್ಯೆಯ ಕುರಿತು ವಿಸ್ತೃತ ಸಂಶೋಧನೆ, ಪೂರ್ವಿಕರ ಜ್ಞಾನ (ಶಿಲಾಪದರಗಳಲ್ಲಿ ಪದೇ ಪದೇ ಕೆತ್ತಲಾಗಿದೆ) ಹಾಗೂ ಪಳೆಯುಳಿಕೆ ಜಾಡಿನ ದಾಖಲೆ.
ಪಳೆಯುಳಿಕೆ ಜಾಡಿನ ದಾಖಲೆಯನ್ನು ಉಳಿಸಿ ಹೋಗುವ ಆನೆಯ ಭೂಕಂಪನ ಸಂಪರ್ಕವು ಈ ಹಿಂದೆ ಎಂದಿಗೂ ವರದಿಯಾಗಿಲ್ಲ ಅಥವಾ ಪ್ರತಿಪಾದನೆಯೂ ಆಗಿಲ್ಲ. ನಮ್ಮ ಶೋಧನೆಯು ಈ ಕ್ಷೇತ್ರದಲ್ಲಿ ಬಹುಶಿಸ್ತೀಯ ಸಂಶೋಧನೆಯನ್ನು ಪ್ರಚೋದಿಸುವ ಸಾಮರ್ಥ್ಯ ಹೊಂದಿರುವ ಸಾಧ್ಯತೆ ಇದೆ. ಈ ಸಂಶೋಧನೆಯು ಆನೆಗಳ ಆಧುನಿಕ ಘೀಳಿಡುವಿಕೆ ಪ್ರದೇಶದಲ್ಲಿನ ಮರಳಿನ ಉಪ ಮೇಲ್ಮೈ ಪದರಗಳ ಶೋಧನೆಗೆ ಮುಡುಪಾಗಿಡುವುದನ್ನೂ ಒಳಗೊಂಡಿದೆ.
ಲೇಖಕರು: ಚಾರ್ಲ್ಸ್ ಹೆಲ್ಮ್, ಸಹ ಸಂಶೋಧಕ, ಆಫ್ರಿಕನ್ ಸೆಂಟರ್ ಫಾರ್ ಕೋಸ್ಟಲ್ ಪ್ಯಾಲಿಯೊಸೈನ್ಸ್, ನೆಲ್ಸನ್ ಮಂಡೇಲಾ ವಿಶ್ವವಿದ್ಯಾಲಯ