HEALTH TIPS

ಮೋದಿ ಜೊತೆ ಕೇರಳ ಕೈ ಜೋಡಿಸಿದೆ: ಪಿಕೆ ಕೃಷ್ಣದಾಸ್

               ಕಾಸರಗೋಡು: ಎಡ ಮತ್ತು ಬಲ ರಂಗಗಳನ್ನು ತೊರೆದು ಕೇರಳದ ಜನತೆ ಮೋದಿಯೊಂದಿಗೆ ಕೈ ಜೋಡಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ.ಕೃಷ್ಣದಾಸ್ ಹೇಳಿದರು. 

                  ಜ. 27ರಂದು ಎನ್ ಡಿಎ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ನೇತೃತ್ವದಲ್ಲಿ ಕಾಸರಗೋಡಿನಿಂದ ಆರಂಭವಾಗಲಿರುವ ರಾಜ್ಯಮಟ್ಟದ ಪಾದಯಾತ್ರೆಗೆ ಕಾಸರಗೋಡು ಸಂಸತ್ ಕ್ಷೇತ್ರದ ಸ್ವಾಗತ ಸಮಿತಿ ರಚನಾ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 

            ಪ್ರಧಾನಿ ನರೇಂದ್ರ ಮೋದಿಯವರ ಕೇರಳ ಭೇಟಿ ಇತಿಹಾಸವಾಗುತ್ತಿದೆ. ರಾಜಕೀಯ ಧ್ರುವೀಕರಣಕ್ಕೆ ವೇದಿಕೆಯಾಗುತ್ತಿದೆ. ಮೋದಿ ಆಡಳಿತದಲ್ಲಿ ನವ ಭಾರತ ನಿರ್ಮಾಣವಾದಂತೆ ಮೋದಿ ಮೂಲಕ ಹೊಸ ಕೇರಳ ನಿರ್ಮಾಣವಾಗಲಿದೆ. ಮೋದಿ ಮಂತ್ರದಿಂದ ಕೇರಳ ರೋಮಾಂಚನಗೊಳ್ಳುತ್ತಿದೆ. ಇದನ್ನು ಕಂಡ ಎಡ-ಬಲ ರಂಗಗಳು ಬೆಚ್ಚಿ ಬಿದ್ದಿವೆ. ಮೋದಿಯವರ ಆಡಳಿತವನ್ನು ಕೇರಳದ ಜನರು ಒಪ್ಪಿಕೊಳ್ಳುವುದಿಲ್ಲ ಎಂದು ಇಲ್ಲಿನ ಸಿಪಿಎಂ ಮತ್ತು ಕಾಂಗ್ರೆಸ್ ಭಾವಿಸಿದ್ದವು. ಆದರೆ ಕೇರಳದ ಸಾಮಾನ್ಯ ಸಮಾಜ ಅವುಗಳ ಭಾವನೆಯನ್ನು ಹುಸಿಯಾಗಿಸಿ  ಮೋದಿಯವರ ಗ್ಯಾರಂಟಿ ಮೇಲೆ ನಂಬಿಕೆ ಇಡುತ್ತಿದೆ. ಕೇರಳದಲ್ಲಿ ಜಾರಿಗೆ ತಂದಿರುವ ಯೋಜನೆಗಳೆಲ್ಲವೂ ಕೇಂದ್ರ ಸರ್ಕಾರದದ್ದೇ ಎಂಬುದು ಜನರಿಗೆ ಅರಿವಾಗುತ್ತಿದೆ. ರಾಜಕೀಯ ಬದಲಾವಣೆ ಬಿಜೆಪಿಗೆ ಅನುಕೂಲವಾಗಲಿದೆ. ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಎಫ್‍ಐ ಹಮ್ಮಿಕೊಂಡಿರುವ ಮಾನವ ಸರಪಳಿ ಬಿಜೆಪಿಗೆ ಮೆಚ್ಚುಗೆಯ ಸರಪಳಿಯಾಗಲಿದೆ ಎಂದು ಪಿ.ಕೆ.ಕೃಷ್ಣದಾಸ್ ಹೇಳಿದರು. 

             ಸಭೆಯ ಅಧ್ಯಕ್ಷತೆಯನ್ನು ಎನ್‍ಡಿಎ ಜಿಲ್ಲಾ ಸಂಚಾಲಕ ರವೀಶ ತಂತ್ರಿ ಕುಂಟಾರು ವಹಿಸಿದ್ದರು. ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಎಂ.ಸಂಜೀವ ಶೆಟ್ಟಿ, ರಾಜ್ಯ ಕಾರ್ಯದರ್ಶಿಗಳಾದ ಕೆ.ರಂಜಿತ್, ಶಿವರಾಜ್, ರಾಜ್ಯ ಸಮಿತಿ ಸದಸ್ಯರಾದ ಸವಿತಾ ಟೀಚರ್, ನ್ಯಾಯವಾದಿ.ಮನೋಜ್, ಕೋಳಾರು ಸತೀಶ್ಚಂದ್ರ ಭಂಡಾರಿ, ನ್ಯಾಯವಾದಿ. ಎಂ.ನಾರಾಯಣ ಭಟ್, ಸದಸ್ಯ ವಿ.ರವೀಂದ್ರನ್, ಉತ್ತರ ವಲಯ ಕಾರ್ಯದರ್ಶಿ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಬಿಜೆಡಿಎಸ್ ರಾಜ್ಯ ಉಪಾಧ್ಯಕ್ಷ ಪೈಲಿ ವಾಥಿಯಾಟ್, ಜಿಲ್ಲಾಧ್ಯಕ್ಷ ಗಣೇಶ ಪಾರೆಕಟ್ಟೆ, ಆರ್‍ಎಲ್‍ಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣನ್ ವಜುನೋರಡಿ, ಕೇರಳ ಕಾಮರಾಜ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂತೋಷ್ ಮತ್ತಿತರರು ಮಾತನಾಡಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ರೈ ಸ್ವಾಗತಿಸಿ, ಎ.ವೇಲಾಯುಧನ್ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries