ಹ್ಯೂಸ್ಟನ್ : ಅಯೋಧ್ಯೆಯಲ್ಲಿ ಬಾಲರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅಮೆರಿಕದಲ್ಲಿರುವ ಭಾರತೀಯರು ವಿನೂತನವಾಗಿ ಟೆಸ್ಲಾ ಕಾರ್ ಬೆಳಕಿನ ಪ್ರದರ್ಶನ ನಡೆಸಿದರು.
ರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆ: ಹ್ಯೂಸ್ಟನ್ ಭಾರತೀಯರಿಂದ ವಿಶಿಷ್ಟ ಪ್ರದರ್ಶನ
0
ಜನವರಿ 21, 2024
Tags
ಹ್ಯೂಸ್ಟನ್ : ಅಯೋಧ್ಯೆಯಲ್ಲಿ ಬಾಲರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅಮೆರಿಕದಲ್ಲಿರುವ ಭಾರತೀಯರು ವಿನೂತನವಾಗಿ ಟೆಸ್ಲಾ ಕಾರ್ ಬೆಳಕಿನ ಪ್ರದರ್ಶನ ನಡೆಸಿದರು.
ಇಲ್ಲಿನ ಗುರುವಾಯೂರಪ್ಪನ್ ಕೃಷ್ಣ ದೇವಸ್ಥಾನದ ಬಳಿ ನೂರಕ್ಕೂ ಹೆಚ್ಚು ಜನರು ಏಕಕಾಲಕ್ಕೆ ಕಾರುಗಳ ದೀಪಗಳನ್ನು ಉರಿಸುವ ಮತ್ತು ನಂದಿಸುವ ಮೂಲಕ ಸುಂದರ ಬೆಳಕಿನ ಪ್ರದರ್ಶನ ನಡೆಸಿದರು.
ಕಾರ್‌ಗಳೊಂದಿಗೆ ರಾಮಮಂದಿರ ಚಿತ್ರವಿರುವ ರಾಮರಥವು ಇತ್ತು. ಬಳಿಕ ದೇವಳದಲ್ಲಿ ಪೂಜೆ ನೆರವೇರಿಸಲಾಯಿತು. ಇದರೊಂದಿಗೆ ಇತರ ಭಕ್ತರು ರಾಮ ಮತ್ತು ಕೃಷ್ಣನ ಕುರಿತಾದ ಭಜನಾ ಸಂಕೀರ್ತನೆಗಳನ್ನು ಹಾಡಿದರು.
'ಜನವರಿ ಮಧ್ಯದವರೆಗೆ ಅಮೆರಿಕದ 21 ರಾಜ್ಯ ಮತ್ತು 41 ನಗರಗಳಲ್ಲಿ ವಿಶ್ವ ಹಿಂದೂ ಪರಿಷತ್ 51 ಕಾರ್ ರ‍್ಯಾಲಿಗಳನ್ನು ಆಯೋಜಿಸಿದೆ' ಎಂದು ಪರಿಷತ್‌ನ ಅಚಲೇಶ್ ಅಮರ್ ತಿಳಿಸಿದರು.