ತಿರುವನಂತಪುರಂ: ಅಯೋಧ್ಯೆಯಲ್ಲಿ ಶ್ರೀರಾಮ ದೇಗುಲದ ಪ್ರಾಣ ಪ್ರತಿಷ್ಠಾ ಸಮಾರಂಭ ನಡೆಯುವ ದಿನ ಜ.22 ರಂದು ಕೇರಳದಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬ ಪ್ರಚಾರ ಸುಳ್ಳು ಎಂದು ಸಚಿವ ಕೆ.ಕೃಷ್ಣನ್ ಕುಟ್ಟಿ ಅವರು ಫೇಸ್‍ಬುಕ್‍ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಮಲಯಾಳಂ ಮತ್ತು ಎಕ್ಸ್‍ನಲ್ಲಿ ಕೆಲವು ಸಮಾಜ ವಿರೋಧಿಗಳು ಪ್ರಬಲ ಪ್ರಚಾರ ನಡೆಸುತ್ತಿದ್ದಾರೆ. ಅಯೋಧ್ಯೆಯಲ್ಲಿ ಜನವರಿ 22 ರಂದು ಪ್ರತಿಷ್ಠಾ ಸಮಾರಂಭ ನಡೆಯುವಾಗ ಕೇರಳದಲ್ಲಿ ವ್ಯಾಪಕವಾಗಿ ವಿದ್ಯುತ್ ಕಡಿತವಾಗಲಿದೆ ಎಂಬ ಅಪಪ್ರಚಾರ ನಿನ್ನೆ ವ್ಯಾವಕವಾಗಿ ಹರಿದಾಡಿದ್ದರ ಬೆನ್ನಿಗೇ ಸಚಿವರು ಪ್ರತಿಕ್ರಿಯೆ ನೀಡಿ ಸಮಾಜ ಘಾತುಕ ಕುಕೃತ್ಯವನ್ನು ಬಯಲಿಗೆಳೆದಿದ್ದಾರೆ.
ಜನವರಿ 22ರಂದು ಕೇರಳದಲ್ಲಿ ವ್ಯಾಪಕ ವಿದ್ಯುತ್ ವ್ಯತ್ಯಯವಾಗಲಿದೆ ಎಂಬ ಪ್ರಚಾರ ಸುಳ್ಳು. ಸುಳ್ಳು ಪ್ರಚಾರಗಳಿಗೆ ಮರುಳಾಗಬೇಡಿ ಎಂದು ಸಚಿವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಇಡುಕ್ಕಿ ಪವರ್‍ಹೌಸ್ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಇದೇ 22ರಂದು ವಿದ್ಯುತ್ ಕಡಿತವಾಗಲಿದೆ ಎಂಬ ನಕಲಿ ಪೋಸ್ಟ್ ಗಳು ಹರಿದಾಡುತ್ತಿವೆ. ಪ್ರಾಣ ಪ್ರತಿಷ್ಠಾ ಸಮಾರಂಭ ಬೃಹತ್ ತೆರೆಯಲ್ಲಿ ನೇರಪ್ರಸಾರ ಮಾಡುವವರೂ ಜನರೇಟರ್ ತರಲಿ ಎಂಬ ಸಚಿವ ಕೃಷ್ಣನ್ ಕುಟ್ಟಿ ಅವರ ಹೆಸರಲ್ಲಿ ಪ್ರಚಾರವಾಗಿದ್ದ ಪೋಸ್ಟ್ ಹುಸಿಯೆಮದು ಈ ಮೂಲಕ ದೃಢಪಟ್ಟಿದೆ.