ಉಪ್ಪಳ: ಕಣಿಹಿತ್ತಿಲು ಶ್ರೀ ಮಲರಾಯ ದೂಮಾವತಿ ಪಂಜುರ್ಲಿ ನಾಗ ದೇವರು ಹಾಗೂ ಪರಿವಾರ ದೈವಗಳ ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ರಚನೆಯು ಆಡಳಿತ ಸಮಿತಿಯ ಅಧ್ಯಕ್ಷ ಬಂಟಪ್ಪ ಪೂಜಾರಿ ಕುಡಾಲು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎ.21ರಿಂದ 23ರ ತನಕ ಶ್ರೀ ಮಲರಾಯ ದೂಮಾವತಿ ಪಂಜುರ್ಲಿ ನಾಗ ದೇವರು ಹಾಗೂ ಪರಿವಾರ ದೈವಗಳ ಪುನರ್ ಪ್ರತಿμÉ್ಠ ಹಾಗೂ ಪಡಿಪಿರೆ( ಮುಖ ಮಂಟಪ), ಮತ್ತು ತರವಾಡು ಮನೆಯ ಗೃಹಪ್ರವೇಶವು ಹಾಗೂ ದೈವಗಳ ವಾರ್ಷಿಕ ನೇಮೋತ್ಸವವು ನಡೆಯಲಿರುವುದು.
ಶ್ರೀಧರ್ ಬಾಳೆಕಲ್ಲು, ಅಧ್ಯಕ್ಷರಾಗಿ ಆಯ್ಕೆಯಾದರು. ಪ್ರದಾನ ಕಾರ್ಯದರ್ಶಿಯಾಗಿ ಪ್ರೇಮ್ ಜೀತ್ ಕಾಸರಗೋಡು, ಕೋಶಾಧಿಕಾರಿಯಾಗಿ ವಿಜೇಶ್ ಕಾನ ಮತ್ತು ಉಪಸಮಿತಿಯನ್ನು ಆಯ್ಕೆ ಮಾಡಲಾಯಿತು. ಆಡಳಿತ ಮಂಡಳಿಯ ಕಾರ್ಯದರ್ಶಿ ನಾರಾಯಣ ಕೊರೊಕ್ಕೊಡು, ದೈವಗಳ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು, ಶ್ರೀಧರ್ ಬಾಳೆಕಲ್ಲು ಸ್ವಾಗತಿಸಿ, ಪ್ರೇಮ್ ಜೀತ್ ಕಾಸರಗೋಡು ವಂದಿಸಿದರು.