ತ್ರಿಶೂರ್: ಪ್ರಧಾನಿ ನರೇಂದ್ರ ಮೋದಿ ಮತ್ತೆ ಕೇರಳಕ್ಕೆ ಆಗಮಿಸಲಿದ್ದಾರೆ. ಅವರು ಸುರೇಶ್ ಗೋಪಿ ಅವರ ಪುತ್ರಿಯ ವಿವಾಹ ಸಮಾರಂಭಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಜನವರಿ 17 ರಂದು ಗುರುವಾಯೂರು ದೇವಸ್ಥಾನದಲ್ಲಿ ವಿವಾಹ ಸಮಾರಂಭ ನಡೆಯಲಿದೆ.
ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದಂತೆ ಕೇಂದ್ರವು ಕೇರಳ ಪೋಲೀಸರಿಂದ ವರದಿ ಕೇಳಿದೆ. ಗುರುವಾಯೂರು ಶ್ರೀಕೃಷ್ಣ ಕಾಲೇಜಿನ ಹೆಲಿಪ್ಯಾಡ್‍ನಲ್ಲಿ ಪೋಲೀಸರು ಪರಿಶೀಲನೆ ನಡೆಸಿದರು. ಇಂದು ಕೇಂದ್ರಕ್ಕೆ ವರದಿ ನೀಡಲಾಗಿದೆ.
ಸುರೇಶ್ ಗೋಪಿ ದೆಹಲಿಗೆ ತೆರಳಿ ತಮ್ಮ ಪುತ್ರಿ ಸೌಭಾಗ್ಯಳ ವಿವಾಹ ಸಮಾರಂಭಕ್ಕೆ ಪ್ರಧಾನಿಯವರನ್ನು ಆಹ್ವಾನಿಸಿದ್ದರು. ನಟ ತಮ್ಮ ಪತ್ನಿ ರಾಧಿಕಾ ಮತ್ತು ಪುತ್ರಿಯೊಂದಿಗೆ ಪ್ರಧಾನಿಯನ್ನು ಭೇಟಿಯಾದರು. ಪ್ರಧಾನಿಯವರಿಗೆ ವಿವಾಹ ಆಮಂತ್ರಣ ಪತ್ರಿಕೆ ಹಸ್ತಾಂತರಿಸಿದ ಚಿತ್ರಗಳನ್ನು ಸುರೇಶ್ ಗೋಪಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಾವೇಲಿಕರ ಮೂಲದ ಉದ್ಯಮಿ ಶ್ರೇಯಸ್ ಮೋಹನ್ ವರ.