ಕಾಸರಗೋಡು: ಕೊಲ್ಲಂ ಜಿಲ್ಲೆಯಲ್ಲಿ ನಡೆದ 62ನೇ ಕೇರಳ ಶಾಲಾ ಕಲೋತ್ಸವದಲ್ಲಿ ಯಕ್ಷಗಾನ ಸ್ಪರ್ಧೆಯಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸುವ ಮೂಲಕ ಕಾಸರಗೋಡು ಬಿಇಯಂ ಶಾಲಾ ಮಕ್ಕಳ ಯಕ್ಷಗಾನ ತಂಡ ಹೊಸ ಚರಿತ್ರೆ ಸೃಷ್ಟಿಸಿದೆ, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಶುಭಾಶೀರ್ವಾದ ಹಾಗೂ ರಮೇಶ್ ಶೆಟ್ಟಿ ಬಾಯಾರು ಅವರ ನಿರ್ದೇಶನದೊಂದಿಗೆ ಕಲೋತ್ಸವದಲ್ಲಿ ಯಕ್ಷಗಾನ ಸ್ಪರ್ಧೆ ನಡೆಸಲಾಗಿತ್ತು. ಶಿಕ್ಷಕರಾದ ಯಶ್ವವಂತ.ವೈ, ಶಾಲಾ ಮುಖ್ಯೋಪಾಧ್ಯಾಯರಾದ ವಿನ್ಸೆಂಟ್ ವಿನ್ಸ್ಟನ್ ಅವರ ಪೆÇ್ರೀತ್ಸಾಹದೊಂದಿಗೆ ಹಾಗೂ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಅಧ್ಯಕ್ಷ ಕೆ.ಎನ್.ವೆಂಕಟರಮಣ ಹೊಳ್ಳ ಇವರ ಮುಂದಾಳುತ್ವದಲ್ಲಿ ತಂಡವನ್ನು ಸಜ್ಜುಗೊಳಿಸಲಾಗಿತ್ತು.
ಶಾಲಾ ಮಕ್ಕಳ ಯಕ್ಷಗಾನ ತಂಡ ನರಕಾಸುರ ಮೋಕ್ಷ ಎಂಬ ಯಕ್ಷಗಾನ ಪ್ರದರ್ಶಿಸಿತ್ತು. ಹಿಮ್ಮೇಳದಲ್ಲಿ ಭಾಗವತರಾಗಿ ರಾಮಪ್ರಸಾದ್ ಮಯ್ಯ, ಚೆಂಡೆ ಶಂಕರ ನಾರಾಯಣ ಪದ್ಯಾಣ, ಮದ್ದಳೆ ಲವಕುಮಾರ್ ಐಲ ಹಾಗೂ ಚಕ್ರತಾಳದಲ್ಲಿ ಅರ್ಪಿತ್ ಕೂಡ್ಲು ಸಹಕರಿಸಿದ್ದರು.
ಕಲಾವಿದರಾಗಿ ಮುಮ್ಮೇಳದಲ್ಲಿ ಅನುಶ್ರೀ ಹೊಳ್ಳ, ತಂಡದ ನಾಯಕ ಯತಿರಾಜ್ ರೈ, ಆಕಾಶ್, ಪ್ರೀತಿ ಕಲ್ಲೂರಾಯ, ಸಮನ್ವಿತಾ.ಕೆ.ಬಿ, ಪ್ರಣವ್ ಕೃಷ್ಣ ಹಾಗೂ ಸಂಚಿತ್ ಪ್ರತಿಭೆ ಮೆರೆದಿದ್ದರು.