ಚೆನ್ನೈ: ತಮಿಳುನಾಡಿಗೆ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಮೊದಲ ದಿನವಾದ ಶುಕ್ರವಾರ ಚೆನ್ನೈನಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಈ ವೇಳೆ ಬಿಜೆಪಿ ಬೆಂಬಲಿಗರು ಪ್ರಧಾನಿ ಮೋದಿ ಅವರ ಮೇಲೆ ಹೂಮಳೆಗರೆದರು.
ಚೆನ್ನೈ: ತಮಿಳುನಾಡಿಗೆ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಮೊದಲ ದಿನವಾದ ಶುಕ್ರವಾರ ಚೆನ್ನೈನಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಈ ವೇಳೆ ಬಿಜೆಪಿ ಬೆಂಬಲಿಗರು ಪ್ರಧಾನಿ ಮೋದಿ ಅವರ ಮೇಲೆ ಹೂಮಳೆಗರೆದರು.
ರೋಡ್ ಶೋ ಉದ್ದಕ್ಕೂ ತಮ್ಮ ಬೆಂಬಲಿಗರತ್ತ ಮೋದಿ ಕೈಬೀಸುತ್ತಾ ಸಾಗಿದರು.
ಬಿಜೆಪಿ ಕಾರ್ಯಕರ್ತರು ಜ.22ರಂದು ನಡೆಯಲಿರುವ ಬಾಲರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆಯ ಬ್ಯಾನರ್‌ಗಳನ್ನು ಪ್ರದರ್ಶಿಸಿದರು.
ಅದಕ್ಕೂ ಮುನ್ನ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರು ನಂತರ ಹೆಲಿಕಾಪ್ಟರ್ ಮೂಲಕ ಮರೀನಾ ಬೀಚ್ ಸನಿಹದ ಐಎನ್‌ಎಸ್ ಅಡ್ಯಾರ್ ತಲುಪಿ ಅಲ್ಲಿಂದ ರಸ್ತೆ ಮಾರ್ಗವಾಗಿ ಖೇಲೋ ಇಂಡಿಯಾದ ಸ್ಥಳ ತಲುಪಿದರು. ಅವರನ್ನು ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ ಮತ್ತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸ್ವಾಗತಿಸಿದರು.