HEALTH TIPS

ಉಕ್ರೇನ್ ಮೇಲಿನ ದಾಳಿಗೆ ಉತ್ತರ ಕೊರಿಯಾ ನಿರ್ಮಿತ ಕ್ಷಿಪಣಿ ಬಳಸಿದ ರಷ್ಯಾ: ಅಮೆರಿಕ

               ವಾಷಿಂಗ್ಟನ್: ಇತ್ತೀಚಿನ ದಿನಗಳಲ್ಲಿ ರಷ್ಯಾ ಸೇನೆಯು ಉತ್ತರ ಕೊರಿಯಾ ನಿರ್ಮಿತ ಕ್ಷಿಪಣಿಗಳನ್ನು ಬಳಸಿ ಉಕ್ರೇನ್‌ನ ಪ್ರಮುಖ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ ಎಂದು ಅಮೆರಿಕ ಹೇಳಿದೆ.

            ಇದರೊಂದಿಗೆ ಉಕ್ರೇನ್ ಮೇಲೆ ಯುದ್ಧವನ್ನು ಮುಂದುವರಿಸಲು ರಷ್ಯಾವು ಇತರ ದೇಶಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ಅಮೆರಿಕ ಗುಪ್ತಚರ ಮೂಲಗಳು ತಿಳಿಸಿವೆ.

                  ಡಿಸೆಂಬರ್ 30 ಮತ್ತು ಜನವರಿ 2ರಂದು ನಡೆದ ಎರಡು ದಾಳಿಗಳಲ್ಲಿ ರಷ್ಯಾವು ಉತ್ತರ ಕೊರಿಯಾ ಒದಗಿಸಿದ ಕ್ಷಿಪಣಿಗಳನ್ನು ಬಳಸಿದೆ ಎಂದು ಶ್ವೇತಭವನದ ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ.

ರಷ್ಯಾವು ಇರಾನ್‌ನಿಂದಲೂ ಖಂಡಾಂತರ ಕ್ಷಿಪಣಿಗಳನ್ನು ಪಡೆಯಲು ಪ್ರಯತ್ನಿಸುತ್ತಿದೆ. ಜತೆಗೆ ಇತ್ತೀಚಿನ ದಿನಗಳಲ್ಲಿ ಉಕ್ರೇನ್‌ ಮೇಲೆ ದಾಳಿ ನಡೆಸಲು ರಷ್ಯಾವು ಇರಾನ್ ನಿರ್ಮಿತ ಡ್ರೋನ್‌ಗಳನ್ನು ಬಳಸಿದೆ ಎಂದು ಕಿರ್ಬಿ ಹೇಳಿದ್ದಾರೆ.

                 ಮುಂದಿನ ದಿನಗಳಲ್ಲಿ 550 ಮೈಲುಗಳಷ್ಟು ದೂರದಿಂದ ಹಾರಿಸಬಹುದಾದ ಉತ್ತರ ಕೊರಿಯಾ ನಿರ್ಮಿತ ಖಂಡಾಂತರ ಕ್ಷಿಪಣಿಗಳನ್ನು ಬಳಸುವುದಕ್ಕೆ ರಷ್ಯಾ ಯೋಜನೆ ರೂಪಿಸಿದೆ ಎಂದು ಕಿರ್ಬಿ ತಿಳಿಸಿದ್ದಾರೆ.

              ರಷ್ಯಾ ಸೇನೆಯು ಉಕ್ರೇನ್‌ನ ಪ್ರಮುಖ ನಗರಗಳನ್ನು ಗುರಿಯಾಗಿಸಿ ಈಚೆಗೆ ನಡೆಸಿದ ನೂರಾರು ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಭಾರಿ ದಾಳಿಯಲ್ಲಿ 20ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ನೂರಾರು ನಾಗರಿಕರು ಗಾಯಗೊಂಡಿದ್ದರು.

              22 ತಿಂಗಳಿನಿಂದ ನಡೆಯುತ್ತಿರುವ ಈ ಯುದ್ಧದಲ್ಲಿ ಒಂದೇ ದಿನದಲ್ಲಿ 122 ಕ್ಷಿಪಣಿಗಳು ಮತ್ತು 36 ಡ್ರೋನ್‌ಗಳನ್ನು ರಷ್ಯಾ ಉಡಾಯಿಸಿತ್ತು. ಇದರಲ್ಲಿ 87 ಕ್ಷಿಪಣಿಗಳು ಮತ್ತು 27 ಶಾಹಿದ್‌ ಮಾದರಿಯ ಡ್ರೋನ್‌ಗಳನ್ನು ವಾಯುಪಡೆಯು ಹೊಡೆದುರುಳಿಸಿದೆ ಎಂದು ಉಕ್ರೇನ್‌ ಸೇನಾ ಮುಖ್ಯಸ್ಥ ವೆಲೇರಿ ಝಲುಝ್ನಿ ಹೇಳಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries