" *ರಾಮ* " ಎಂಬ ಎರಡಕ್ಷರದ ಪದದಲ್ಲಿದೆ ಮಾಧುರ್ಯತೆ. *ರಾಮನಾಮ* ಜಪದಿಂದ ಶರೀರ ಹಾಗೂ ಮನಸ್ಸಿಗೆ ಶಾಂತಿ, ನೆಮ್ಮದಿ ಹಾಗೂ ಆಧ್ಯಾತ್ಮಿಕ ಅನುಭವ ಸಿಗುತ್ತದೆ. ಸಾವಿರಾರು ಸಂತರು, ಮಹಾತ್ಮರು ರಾಮನಾಮದಿಂದ ಅಲೌಕಿಕ ಶಾಂತಿ ಹಾಗೂ ಮೋಕ್ಷತ್ವವನ್ನು ಪಡೆದಿದ್ದಾರೆ. ರಾಮನಾಮದ ಮಹಿಮೆ ರಾಮನಿಗಿಂತಲೂ ಹಿರಿದು. ಭವದ ಕತ್ತಲೆಯಿಂದ ಆನಂದದ ಬೆಳಕಿನತ್ತ ಕೊಂಡೊಯ್ಯುವ ದೀಪ ರಾಮನಾಮ. ಭವದುಃಖದ ಪರಿಹಾರಕ್ಕೆ ರಾಮನಾಮವೊಂದೇ ಸಾಕು.
ಸಮರ್ಥ ರಾಮದಾಸರು " *ಶ್ರೀ ರಾಮ ಜಯರಾಮ ಜಯ ಜಯ ರಾಮ*" ಎಂಬ ತ್ರಯೋದಶಾಕ್ಷರಿ ಮಂತ್ರವನ್ನು ೧೩ ಕೋಟಿ ಸಲ ಬರೆದು ಸಾಕ್ಷಾತ್ ಶ್ರೀರಾಮನ ದರ್ಶನ ಪಡೆದರು.
ಶ್ರೀರಾಮನನ್ನೇ ನೆನೆದು, ಪೂಜಿಸಿ ಶಬರಿ ಮುಮುಕ್ಷತ್ವವನ್ನು ಪಡೆದಳು.
ವಾನರರ ಸೇನೆ ರಾಮದರ್ಶನದಿಂದ ಪುನೀತವಾಯಿತು.
ಹೀಗೆ ಶರಣಾಗತರನ್ನು ರಕ್ಷಿಸುವ ಭಕ್ತವತ್ಸಲ ಪ್ರಭು ಶ್ರೀರಾಮ. ಆತನ ನಾಮಜಪದಿಂದ ಮಾತ್ರ ಕಲಿಯುಗದ ದುಃಖದುಮ್ಮಾನಗಳ ಪರಿಹಾರ. ರಾಮನಾಮ ಸಂಕೀರ್ತನೆಯಿಂದ ಈ ಭವಸಾಗರವನ್ನು ದಾಟಲು ಸುಲಭ ಸಾಧ್ಯ.
ರಾಮನಾಮದಲ್ಲಿದೆ ಅದ್ಭುತ ಶಕ್ತಿ, ಅಪಾರ ಮಹಿಮೆ. ಆ ಶಕ್ತಿ ಮಹಿಮೆಗಳ ದರ್ಶನ ಕೇವಲ ಶ್ರದ್ಧೆ, ವಿಶ್ವಾಸ ಹಾಗೂ ಭಕ್ತಿಗಳಿಂದ ಮಾತ್ರ ಸಾಧ್ಯ. "*ಅಣೋರಣೀಯಾನ್ ಮಹತೋ ಗರೀಯಾನ್*" ಅಣುವಿನಲ್ಲಿ ಅಣು, ಮಹತ್ತಿನಲ್ಲಿ ಹಿರಿದು ರಾಮನಾಮ. ಇದನ್ನರಿತ ವ್ಯಕ್ತಿಗೆ ಭವಸಾಗರದ ಅಳುಕಿಲ್ಲ, ದುಃಖ, ನೋವುಗಳಿಲ್ಲ.
"*ಜಪಹಿಂ ನಾಮು ಜನ ಆರತ ಭಾರೀ* | *ಮಿಟಹಿಂ ಕುಸಂಕಟ ಹೋಹಿಂ ಸುಖಾರೀ* |
ಪ್ರತಿದಿನ ಮನದಲ್ಲಿ ಎರಡು ನಿಮಿಷ ರಾಮನಾಮವನ್ನು ನೆನೆದರೆ ಸಾಕು, ಅದೇ ಶ್ರೀರಾಮನ ನಿತ್ಯಪೂಜೆ. ಶ್ರೀರಾಮನ ಸಂಕೀರ್ತನೆಯಿಂದ ಕೇವಲ ಮನಶ್ಶಾಂತಿಯಷ್ಟೇ ಅಲ್ಲ, ಕರ್ಮಶುದ್ಧಿ, ವಿಚಾರಶುದ್ಧಿಗಳು ಸಹ ಸಿಗುತ್ತವೆ. ಪ್ರಕೃತಿಯ ಆರಾಧನೆಯೂ ಕೂಡ. ರಾಮನಿಲ್ಲದೇ ಪ್ರಕೃತಿ, ಪ್ರಪಂಚ, ಚರಾಚರವಸ್ತುಗಳ್ಯಾವವೂ ಇರಲಾರವು.
" *ಆಪನ್ನಃ ಸಂಸೃತಿಂ ಘೋರಾಂ ಯನ್ನಾಮ ವಿವಶೋ ಗೃಣನ್* | *ತತಃ ಸದ್ಯೋ ವಿಮುಚ್ಯೇತ ಯದ್ವಿಭೇತಿ ಸ್ವಯಂ ಭಯಮ್* ||
(ಶ್ರೀ ಮದ್ಭಾಗವತ)
ಅಂದರೆ, ಘೋರ ಸಂಸಾರ ಬಂಧನದಲ್ಲಿ ನಿಲುಕಿರುವ ಮನುಷ್ಯ ರಾಮನಾಮವನ್ನು ಜಪಿಸಿದ ತಕ್ಷಣ ಎಲ್ಲಾ ಬಂಧನಗಳಿಂದ ವಿಮುಕ್ತನಾಗುತ್ತಾನೆ. ಶ್ರೀರಾಮನ ದಿವ್ಯಸ್ಥಾನವನ್ನು ಹೊಂದಲು ಅರ್ಹತೆಯನ್ನು ಗಳಿಸುತ್ತಾನೆ. ರಾಮನಾಮ ಸ್ವಯಂಜ್ಯೋತಿ, ಸ್ವಯಂ ಮಣಿ, ರಾಮನಾಮವನ್ನು ಜಪಿಸುವವನೆಂದೂ ಅಂಧಕಾರದಲ್ಲಿರಲಾರನೆಂದು ಶ್ರೀಮದ್ಭಾಗವತ ತಿಳಿಸುತ್ತದೆ.
"*ನ ದೇಶನಿಯಮಸ್ತಸ್ಮಿನ್ ನ ಕಾಲನಿಯಮಸ್ತಥಾ* | *ನೋಚ್ಛಿಷ್ಟೇಪಿ ನಿಷೇಧೋಸ್ತಿ ಶ್ರೀಹರೇರ್ನಮ ಲುಬ್ಧಕ* ||"
ರಾಮಮಂತ್ರವನ್ನು ಜಪಿಸಲು ದೇಶ ನಿಯಮವಿಲ್ಲ, ಕಾಲ ನಿಯಮವಿಲ್ಲ, ಯಾವುದೇ ಸ್ಥಳ ಹಾಗೂ ಸಮಯದಲ್ಲಿ ರಾಮಮಂತ್ರವನ್ನು ಜಪಿಸಬಹುದು. ಅಶುಚಿ, ಅಪವಿತ್ರವಾಗಿರುವಾಗಲೂ ಸಹ ಶ್ರೀರಾಮಮಂತ್ರವನ್ನು ಜಪಿಸಬಹುದು. ನಿರ್ದಿಷ್ಟ, ಕಠೋರ ನಿಯಮಗಳ್ಯಾವವೂ ರಾಮ ಜಪಕ್ಕಿಲ್ಲ.
“ *ರಾಮ*” ಕೇವಲ ಎರಡಕ್ಷರದ ಪದವಲ್ಲ. ಅಲೌಕಿಕ ಸಂತೋಷ, ಶಾಂತಿ, ಜೀವನ ಹಾಗೂ ಧರ್ಮ ಇವು “ರಾಮ” ಶಬ್ದಕ್ಕಿರುವ ಅರ್ಥಗಳು. ”ಹಾಗಾಗಿ “ರಾಮ” ಎಂಬುದು ದಿವ್ಯಮಂತ್ರ. ವೇದಗಳ ಜ್ಞಾನವಿಲ್ಲದೆಯೂ ಮೋಕ್ಷವನ್ನು ತೋರಿಸುವ ಮಾರ್ಗ. ರಾಮನಾಮ ಜಪಿಸುವವನಿಗೆ ಸರ್ವದುಃಖಗಳಿಂದ ವಿಮೋಚನೆ.
ಹಿಂದಿನಕಾಲದಲ್ಲಿ ಪರಸ್ಪರರು ಭೇಟಿಯಾದಾಗ “ರಾಮ್ ರಾಮ್” ಎನ್ನುವ ಪದ್ಧತಿಯಿತ್ತು.”ರಾಮ” ಶಬ್ದವನ್ನು ಬಿಡಿಸಿದಾಗ ಮೂರು ಅಕ್ಷರಗಳು ಸಿಗುತ್ತವೆ. ರ್+ಆ+ಮ್.. “ರ” ವ್ಯಂಜನಗಳಲ್ಲಿ ಇಪ್ಪತ್ತೇಳನೆಯದು. “ಆ” ಸ್ವರಗಳಲ್ಲಿ ಎರಡನೆಯದು. “ಮ್” ವ್ಯಂಜನಗಳಲ್ಲಿ ಇಪ್ಪತ್ತೈದನೆಯದು. ಇಪ್ಪತ್ತೇಳು+ಎರಡು+ಇಪ್ಪತ್ತೈದು = ಐವತ್ತನಾಲ್ಕು. ”ರಾಮ್ ರಾಮ್” ಎಂದರೆ ಐವತ್ತನಾಲ್ಕು + ಐವತ್ತನಾಲ್ಕು = ನೂರಾಎಂಟು. ನೂರಾಎಂಟು ನಮಗೆ ಪವಿತ್ರ ಸಂಖ್ಯೆ. ಜಪಮಾಲೆಯಲ್ಲಿರುವ ಮಣಿಗಳ ಸಂಖ್ಯೆ. ಜಪಮಾಲೆಯನ್ನು ಹಿಡಿದು ನೂರಾಎಂಟು ಬಾರಿ ಜಪ ಮಾಡಬೇಕಿಂದಿಲ್ಲ.”ರಾಮ ರಾಮ” ಎಂದರೆ ಸಾಕು, ಒಂದು ಮಾಲೆ ಜಪವನ್ನು ಮಾಡಿದ ಫಲ ಸಿಗುತ್ತದೆ..!! “ರಾಮ” ಎಂಬುದು ರಘುಪತಿಯ ಉದಾರನಾಮ. ಅದು ಅತ್ಯಂತ ಪವಿತ್ರ ಹೆಸರು. ವೇದ-ಪುರಾಣಗಳ ಸಾರ. ಸಕಲ ಕಲ್ಯಾಣಗಳ ಭವನ. ಅಮಂಗಲಗಳ ಹರಣ. ಈ ರಾಮನಾಮವನ್ನು ಪಾರ್ವತಿ ಸಹಿತ ಪರಮೇಶ್ವರ ಸದಾ ಜಪಿಸುತ್ತಿರುತ್ತಾನೆ. “ರಾಮ”ವೆಂಬ ಪವಿತ್ರನಾಮ ಸದಾ ನಮ್ಮ ಮನದಲ್ಲಿರಲಿ. ಶ್ರೀರಾಮನ ಅನುಗ್ರಹ ಸದಾ ನಮಗಿರಲಿ.
ಹಾಗಾಗಿ ರಾಮನಾಮ ಭವದ ದಿವ್ಯಮಂತ್ರ. ಆತನ ಸ್ಮರಣೆಯೊಂದೇ ಮೋಕ್ಷಪ್ರದಾಯಕ. ಆತನನ್ನು ಸದಾ ಸ್ಮರಿಸಿ ರಾಮನ ದಿವ್ಯಕೃಪೆಗೆ ಪಾತ್ರರಾಗೋಣ.
ಎಲ್ಲಿ ನಾಮವೋ ಅಲ್ಲಿ ರಾಮನು*
ನಾಮದ ಹೊರತು ವಿಶ್ವಾಸವೆಲ್ಲವು ಕೇವಲ ಅವಿಶ್ವಾಸಕ್ಕೆ ಕಾರಣವು ನಾಮದ ಹೊರತು ತಿಳಿದರೆ ಸತ್ಯ ।
ಹೊಂದುವುದಿಲ್ಲ. ಅವನು ಭಗವಂತ ॥
ನಾಮದ ಹೊರತು ಪ್ರಪಂಚ ಸತ್ಯವೆಂದು ತಿಳಿಯುವದರಿಂದ | ಅದರಿಂದ ಮೈಲಿಗೆ ಆಗಗೊಡಬಾರದು ಅದರಿಂದ ||
ಎಲ್ಲಿರುವದೊ ನಾಮದ ಮಸ್ತಿ । ಅಲ್ಲಿಯೇ ಇರುವದು ರಾಮನ ವಸತಿ ||
ಇದರ ಹೊರತು ಸುಖವೆನಿಸಿದ್ದೆಲ್ಲ ದುಃಖಕ್ಕೆ ಕಾರಣವಾಯಿತೆಲ್ಲ ||
ದೇವಾಲಯ, ಸಭಾಮಂಟಪಗಳ ಪ್ರಯೋಜನವೇನು | ಹೃದಯದಲ್ಲಿರದಿದ್ದರೆ ಶ್ರೀರಾಮನು ||
ಶ್ರೀರಾಮನನ್ನು ಮಾಡಿಕೊಳ್ಳರಿ. ನಮ್ಮವನನ್ನು ಹರಿದು ಜನ್ಮ ಮರಣದ ಬಂಧನವನ್ನು |
ಶ್ರೀರಾಮನೊಬ್ಬನೇ ದಾತಾ । ಅವನ ಹೊರತಿಲ್ಲ ಕೊಡುವಾತ ॥
ನಾಮದ ಅನುಸಂಧಾನ |
ಇದರಿಂದಲೇ ಪ್ರಪಂಚದಲ್ಲಿ ಸಮಾಧಾನ ॥
ಆಗುವದೆಲ್ಲವೂ ಸಮಾಧಾನಕ್ಕೆ ಕಾರಣ । ನಾವಾಗಬೇಕು ರಾಮನಿಗೆ ಅರ್ಪಣ |
ಮೋಹ, ಮಮತೆ, ದೇಹಾಭಿಮಾನ | ತಿಳಿಯಬೇಕು ಇದೇ ಪ್ರಪಂಚದ ವಿಸ್ತೀರ್ಣ | ಇದರಲ್ಲಿಡಬಾರದು ಮನ ||
ದೇಹಕ್ಕೆ ಕೊಡಬಾರದು ಕಷ್ಟವನ್ನು ಕೆಡಿಸಿಕೊಳ್ಳಬಾರದು ಅನುಸಂಧಾನವನ್ನು ||
ನಾಮದಲ್ಲಿರುವದು ಸಮಾಧಾನ | ಇಟ್ಟುಕೊಳ್ಳಬೇಕು ಇದೇ ವಿಶ್ವಾಸಪೂರ್ಣ ||
ಬೇಡುವೆನು ದಾನ ಒಂದನ್ನು ನೀವೆಲ್ಲರೂ ಕೊಡಿರದನ್ನು ॥
ತಿಳಿಯಬೇಡಿ ನಾಮದ ಹೊರತು ಸುಖವನ್ನು ರಾಮಚರಣಕ್ಕೆ ಅರ್ಪಿಸಿಕೊಳ್ಳಿರಿ ನಿಮ್ಮನ್ನು ॥
ಇದಕ್ಕಿಂತ ಬೇರೆ ನನಗೆ ಬೇಕಿಲ್ಲ | ಇಷ್ಟೇ ಭಿಕ್ಷೆ ಹಾಕಿರಿ ನೀವೆಲ್ಲ ||
ವ್ಯವಹಾರ, ಲೌಕಿಕ, ವಿಷಯದ ಆಸಕ್ತಿಗಳು | ಇವೇ ಪರಮಾರ್ಥಕ್ಕೆ ಮುಖ್ಯ ಆಡೆತಡೆಗಳು |
ಸರಿಸಬೇಕು ಪಕ್ಕಕ್ಕೆ ಅವುಗಳನ್ನು ಕೇವಲ ಭಜಿಸಬೇಕು ಭಗವಂತನನ್ನು |
ಜಗತ್ತಿನಲ್ಲಿ ಸತ್ಯವೆಂದು ತಿಳಿಯಬಾರದು ಏನನ್ನೂ ! ಹೃದಯದಲ್ಲಿ ಹೊಂದಿರಬೇಕು ರಾಮನ ಆಶ್ರಯವನ್ನು ॥
ಎಲ್ಲಿಯವರೆಗೆ ದೇಹದ ಸಂಬಂಧ | ಅಲ್ಲಿಯವರೆಗೆ ಲೌಕಿಕದ ಬಂಧ |
ದೇಹ ಹೋಗುವದು ನೋಡು ನೋಡುವಷ್ಟರಲ್ಲಿ ನಂತರ ಲೌಕಿಕ ಉಳಿಯುವದೆಲ್ಲಿ ? |
ಹಿಡಿಯಬಾರದು ಅವುಗಳ ಆಶೆ । ಬಿಡಬಾರದು ಭಗವಂತನ ಭರವಸೆ |
ಪ್ರಪಂಚದ ಅಲ್ಪ ಸುಖಕ್ಕೋಸ್ಕರ | ಮಾಡಬಾರದು ಭಗವಂತನನ್ನು ದೂರ |
ನಾಲ್ಕು ವೇದ ಆರು ಶಾಸ್ತ್ರಗಳನ್ನು | ಪಾರಾಯಣ ಮಾಡಿದೆವು
ಸರ್ವಸ್ಕೃತಿಗಳನ್ನು ॥
ಎಲ್ಲಿಯವರೆಗೆ ಸ್ಥಿರವಾಗಲಿಲ್ಲವೊ ಮನ । ಅಲ್ಲಿಯವರೆಗೆ ಪ್ರಾಪ್ತವಿಲ್ಲ ಸಮಾಧಾನ |
ಸರ್ವಶಾಸ್ತ್ರಗಳ ಸಾರ ಭಜಿಸಿರಿ ಕೇವಲ ರಘುವೀರ | ಲಕ್ಷ್ಯವಿಡಬೇಕು ನಾಮದಲ್ಲಿ ಪರಿಪೂರ್ಣ ! ಅದರಿಂದಲೇ ಪ್ರಾಪ್ತವಾಗುವದು ಸಮಾಧಾನ ||
ನಾಮದಲ್ಲಿಯೇ ಹೊಂದಬೇಕು ಭರವಸೆಯನ್ನು | ದೇಹಾದಿ ಪ್ರಪಂಚದಲ್ಲಿ ಹೊಂದದೇ ಉದಾಸೀನತೆಯನ್ನು ।
ಇದೆಲ್ಲವೂ ಸಾಧಿಸುವದು ಕಾಯ್ದುಕೊಳ್ಳಲು ಅನುಸಂಧಾನವನ್ನು ||
ಇನ್ನು ಮಾಡಬೇಕಾದದ್ದೇನೂ ಜೀವನದಲ್ಲಿ । ಉಳಿದಿದೆ ಎಂದು ತಿಳಿಯಬಾರದು ಮನಸ್ಸಿನಲ್ಲಿ |
ಮನಸ್ಸಿನಿಂದಾಗಬೇಕು ರಾಮಾರ್ಪಣ |
ಇದೇ ಸರ್ವಸತ್ಕರ್ಮಗಳ ಸಾಧನೆಗಳ ಕಳಸಾರೋಹಣ ||
ಚಿತ್ರವನ್ನಿಡಬೇಕು ಶ್ರೀರಾಮನಲ್ಲಿ । ಹಗಲಿರಳೂ ಧ್ಯಾಸವಿರಬೇಕು ಅವನಲ್ಲಿ |
ದೇಹದಿಂದ ಏನೂ ಮಾಡಲಾಗದವರನ್ನು ರಾಮನಲ್ಲಿ ಮನಸ್ಸು ತೊಡಗಿಸಿದವರನ್ನು | ರಾಮನು ಅವರ ಉದ್ಧಾರ ಮಾಡಿದನು |
ರಾಮನು ಇಟ್ಟಿದ್ದರಲ್ಲಿ ಸಮಾಧಾನ ಇದೇ ನಿಜವಾದ ಭಕ್ತಿಯ ಲಕ್ಷಣ ||
ಶ್ರೀಗುರುಗಳಿಂದ ಪಡೆದ ನಾಮವು | ಜಗತ್ತನ್ನು ಮಾಡುವದು ಪಾವನವು ||
ಇಡಬೇಕು ಈ ವಿಶ್ವಾಸವನ್ನು | ನಿಶ್ಚಿತವಾಗಿ ಕೃಪೆಮಾಡುವನು ರಾಮನು ||
ದೇಹದ ಸ್ಥಿತಿಯು ನಿರಂತರ | ನಿಶ್ಚಿತವಿರುವದಿಲ್ಲ ಸ್ಥಿರ ॥
ಅವಶ್ಯ ಕಾಯ್ದುಕೊಳ್ಳಬೇಕು ಅದನ್ನು ಮರೆಯದೆ ರಘುವೀರನನ್ನು ||
ರಾಮಾ ನಿನಗಾಗಿಯೆ ಇರುವೆನು |
ನಿಶ್ಚಿತ ಇಟ್ಟುಕೊಳ್ಳಬೇಕು ಈ ಭಾವವನ್ನು | ಶಕ್ಯವಿದ್ದಷ್ಟು ಸ್ಮರಿಸಬೇಕು ರಘುಪತಿಯನ್ನು |