ಟೋಕಿಯೊ: ಗುಪ್ತಚರ ಮಾಹಿತಿಯನ್ನು ಒದಗಿಸುವ ಉಪಗ್ರಹವನ್ನು ಒಳಗೊಂಡ ರಾಕೆಟ್ ಅನ್ನು ಜಪಾನ್ ಶುಕ್ರವಾರ ಯಶಸ್ವಿಯಾಗಿ ಉಡಾವಣೆ ಮಾಡಿತು. ಉತ್ತರ ಕೊರಿಯಾದ ಸೇನಾ ನೆಲೆಗಳ ಚಲನವಲನಗಳ ಮೇಲೆ ನಿಗಾ ಇಡಲು ಹಾಗೂ ನೈಸರ್ಗಿಕ ವಿಕೋಪ ತಡೆಗೆ ಕ್ರಮ ರೂಪಿಸುವ ಉದ್ದೇಶದಿಂದ ಈ ಉಪಗ್ರಹವನ್ನು ನಭಕ್ಕೆ ಕಳುಹಿಸಿದೆ.

ಮಿತ್ಸುಬಿಶಿ ಹೆವಿ ಇಂಡಸ್ಟ್ರೀಸ್ ಲಿಮಿಡೆಟ್, ತನೆಗಾಶಿಮಾ ಬಾಹ್ಯಾಕಾಶ ಕೇಂದ್ರದಿಂದ ಎಚ್2ಎ ರಾಕೆಟ್ ಮೂಲಕ ಉಪಗ್ರಹವನ್ನು ಅಂತರಿಕ್ಷಕ್ಕೆ ಕಳುಹಿಸಿತು.
ಆಪ್ಟಿಕಲ್-8 ಉಪಗ್ರಹವು ರಾಕೆಟ್‌ನಿಂದ ಯಶಸ್ವಿಯಾಗಿ ಪ್ರತ್ಯೇಕಗೊಂಡು ನಿಯೋಜಿತ ಕಕ್ಷೆ ಸೇರಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಪ್ರತಿಕೂಲ ಹವಾಮಾನದಲ್ಲಿ ಕಾರ್ಯನಿರ್ವಹಿಸುವ ಮಿತಿಗಳಿದ್ದರೂ ಉಪಗ್ರಹವು ಸ್ಪಷ್ಟ ಚಿತ್ರಗಳನ್ನು ಭೂಮಿಗೆ ರವಾನಿಸಲಿದೆ.
1998ರಲ್ಲಿ ಉತ್ತರ ಕೊರಿಯಾವು ಜಪಾನ್ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದಾಗಿನಿಂದ ಜಪಾನ್ ಗುಪ್ತಚರ ಮಾಹಿತಿ ನೀಡುವ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ.