ಕಾಸರಗೋಡು: ಗ್ರಾಹಕರ ಹಕ್ಕುಗಳ ದಿನಾಚರಣೆಯ ಅಂಗವಾಗಿ ಸಾರ್ವಜನಿಕ ವಿತರಣಾ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ನೇತೃತ್ವದಲ್ಲಿ ಈ ಒಳ್ಳೆಯ ಬದಲಾವಣೆಗಳನ್ನು ತಿಳಿದುಕೊಳ್ಳಿ ಎಂಬ ವಿಷಯದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾಂಞಂಗಾಡು ಮಿನಿ ಸಿವಿಲ್ ಸ್ಟೇಷನ್ ಕಾನರೆನ್ಸ್ ಹಾಲ್‍ನಲ್ಲಿ ನಡೆದ ಈ ಕಾರ್ಯಕ್ರಮವನ್ನು ಕಾಂಞಂಗಾಡು ಶಾಸಕ ಇ.ಚಂದ್ರಶೇಖರನ್ ಉದ್ಘಾಟಿಸಿ ಮಾತನಾಡಿದರು.
ಕಾಂಞಂಗಾಡು ನಗರಸಭೆ ಸದಸ್ಯೆ ವಂದನಾ ಬಾಲರಾಜ್ ಅಧ್ಯಕ್ಷತೆ ವಹಿಸಿದ್ದರು. ಕಾಂಞಂಗಾಡು ಶಿಕ್ಷಣಾಧಿಕಾರಿ ಟಿ.ಪಿ.ಬಾಲಾದೇವಿ ಉಪಸ್ಥಿತರಿದ್ದರು. ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ, ನ್ಯಾಯವಾದಿ ಎಂ.ಜಯಪ್ರಕಾಶ್ ಸ್ವಾಗತಿಸಿ, ಹೊಸದುರ್ಗ ತಾಲೂಕು ಸರಬರಾಜು ಅ„ಕಾರಿ ಕೆ.ಎನ್.ಬಿಂದು ವಂದಿಸಿದರು.
ವಿಶೇಷ ತರಗತಿ ಕಾರ್ಯಕ್ರಮ : ಕಾರ್ಯಕ್ರಮದ ಅಂಗವಾಗಿ ಗ್ರಾಹಕ ಸಂರಕ್ಷಣಾ ಕಾಯ್ದೆ ಮತ್ತು ಹಸಿರು ಬಳಕೆ ಕುರಿತು ವಿಶೇಷ ತರಗತಿ ನಡೆಯಿತು. ವಿದ್ಯಾರ್ಥಿಗಳಿಗೆ ಇ-ಕಾಮರ್ಸ್ ಮತ್ತು ಡಿಜಿಟಲ್ ವ್ಯಾಪಾರದ ಯುಗದಲ್ಲಿ ಗ್ರಾಹಕರ ರಕ್ಷಣೆ ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ಮತ್ತು ಗ್ರಾಹಕರ ಸಂರಕ್ಷಣಾ ಕಾಯ್ದೆ ಕುರಿತು ರಸಪ್ರಶ್ನೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಪ್ರೌಢಶಾಲಾ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ಎಂ.ದರ್ಶನ ಕಾಂಞಂಗಾಡು - ಪ್ರಥಮ, ಶ್ರೇಯಾ ಎಸ್.ಬಾಬು ವೆಳ್ಳಿಕೋತ್ - ದ್ವಿತೀಯ, ಟಿ.ವಿ.ಅಗ್ರಿಮಾ ಉದಿನೂರು - ತೃತೀಯ ಸ್ಥಾನ ಪಡೆದರು. ಯುಪಿ ವಿಭಾಗದಲ್ಲಿ ಹರಿಗೋವಿಂದ್ ಪಳ್ಳಿಕೆರೆ - ಪ್ರಥಮ, ಆರ್.ದೀಕ್ಷಿತಾ ವೆಳ್ಳಿಕೋತ್ - ದ್ವಿತೀಯ, ಆರ್.ಅಶ್ವಿನ್ ರಾಜ್ ನೀಲೇಶ್ವರ - ತೃತೀಯ ಸ್ಥಾನ ಗಳಿಸಿದರು. ಸುಭಾಶ್ಚಂದ್ರ ಮತ್ತು ಜಯನ್ ರಸಪ್ರಶ್ನೆ ಸ್ಪರ್ಧೆಗಳನ್ನು ನಿರ್ವಹಿಸಿದರು.