ನವದೆಹಲಿ : ಬಿನಾನ್ಸ್, ಕುಕೊಯಿನ್, ಒಕೆಎಕ್ಸ್ ಮುಂತಾದ ಕೆಲವು ಉನ್ನತ ಜಾಗತಿಕ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರಗಳ ವೆಬ್ಸೈಟ್ಗಳನ್ನ ಜನವರಿ 12 ರಂದು ಭಾರತದಲ್ಲಿ ನಿರ್ಬಂಧಿಸಲಾಗಿದೆ.
ನವದೆಹಲಿ : ಬಿನಾನ್ಸ್, ಕುಕೊಯಿನ್, ಒಕೆಎಕ್ಸ್ ಮುಂತಾದ ಕೆಲವು ಉನ್ನತ ಜಾಗತಿಕ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರಗಳ ವೆಬ್ಸೈಟ್ಗಳನ್ನ ಜನವರಿ 12 ರಂದು ಭಾರತದಲ್ಲಿ ನಿರ್ಬಂಧಿಸಲಾಗಿದೆ.
ದೇಶದ ಮನಿ ಲಾಂಡರಿಂಗ್ ಕಾನೂನುಗಳನ್ನ ಅನುಸರಿಸದ ಕಾರಣ ಸರ್ಕಾರವು ಈ ಕ್ರಿಪ್ಟೋ ಎಕ್ಸ್ಚೇಂಜ್ಗಳಿಗೆ ಶೋಕಾಸ್ ನೋಟಿಸ್ ಕಳುಹಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಈ ಕಂಪನಿಗಳು ಸ್ಥಳೀಯ ತೆರಿಗೆ ನಿಯಮಗಳನ್ನು ನೋಂದಾಯಿಸಲು ಮತ್ತು ಅನುಸರಿಸಲು ವಿಫಲವಾದ ಕಾರಣ ನೋಟಿಸ್ ನೀಡಲಾಗಿದೆ ಎಂದು ವರದಿ ಮಾಡಿದೆ.
ಇದರ ಪರಿಣಾಮವಾಗಿ, ಹಣಕಾಸು ಸಚಿವಾಲಯವು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಅವುಗಳ URLಗಳನ್ನ ನಿರ್ಬಂಧಿಸಲು ನಿರ್ದೇಶನ ನೀಡಿದೆ.