ಕುಂಬಳೆ: ಇತಿಹಾಸ ಪ್ರಸಿದ್ದ ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ದೇಲಯದಲ್ಲಿ ಇಂದು(ಜ.14) ವಿಶೇಷ ಪೂಜಾದಿಗಳು ನಡೆಯಲಿವ.
ಬೆಳಿಗ್ಗೆ 8 ಕ್ಕೆ ತಂತ್ರಗಳಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ವಿಶೇಷ ಪೂಜೆ ಹಾಗೂ ಫೆ.16 ರಿಂದ 24ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಬೆಳಿಗ್ಗೆ 9 ರಿಂದ 10ರ ಮಧ್ಯೆ ಶುಭಮುಹೂರ್ತದಲ್ಲಿ ಚಪ್ಪರ ಮುಹೂರ್ತ ನೆರವೇರಲಿದೆ. ಭಕ್ತಾದಿಗಳು ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.