ಬದಿಯಡ್ಕ: ಅಪಘಾತದಲ್ಲಿ ಗಾಯಗೊಂಡು ಅನೇಕ ದಿನಗಳ ಕಾಲ ಹಾಸಿಗೆ ಹಿಡಿದು ಕೊನೆಗೆ ಇಹಲೋಕವನ್ನು ತ್ಯಜಿಸಿದ ಕ್ಯಾಂಪ್ಕೋ ಸದಸ್ಯ ಕೆ.ಎಂ. ಮಹಾಲಿಂಗ ಭಟ್ ಕುಂಟಿಕಾನ ಮಠ ಇವರ ಕುಟುಂಬಕ್ಕೆ ಕ್ಯಾಂಪ್ಕೋ ವತಿಯಿಂದ ಐವತ್ತು ಸಾವಿರ ರೂಪಾಯಿ ಧನಸಹಾಯವನ್ನು ಹಸ್ತಾಂತರಿಸಲಾಯಿತು.
ಕ್ಯಾಂಪ್ಕೋ ಚಿತ್ತ ಸದಸ್ಯರ ಆರೋಗ್ಯದತ್ತ ಯೋಜನೆಯಡಿಯಲ್ಲಿ ಸಹಾಯ ಧನವನ್ನು ನೀಡಲಾಗಿತ್ತು. ನೀರ್ಚಾಲು ಪೇಟೆಯಲ್ಲಿ ಟೈಲರಿಂಗ್ ವೃತ್ತಿಯನ್ನು ಮಾಡಿಕೊಂಡಿದ್ದ ಅವರಿಗೆ ವರ್ಷಗಳ ಹಿಂದೆ ಅಪಘಾತಗೊಂಡು ಅರೆಪ್ರಜ್ಞಾವಸ್ಥೆಯಲ್ಲಿದ್ದು ಕೊನೆಗೆ ನಿಧನರಾಗಿದ್ದರು. ಅವರ ಪತ್ನಿ ದುರ್ಗಾಪರಮೇಶ್ವರಿ ಅವರಿಗೆ ಕ್ಯಾಂಪ್ಕೋ ನಿರ್ದೇಶಕ ಪದ್ಮರಾಜ ಪಟ್ಟಾಜೆ ಚೆಕ್ ಹಸ್ತಾಂತರಿಸಿದರು. ಸ್ಥಾನೀಯ ಪ್ರಬಂಧಕ ಗಿರೀಶ್ ಕಾನತ್ತೂರು, ನೀರ್ಚಾಲು ಶಾಖಾ ಪ್ರಬಂಧಕ ಜಯನ್ ಬಿ., ಸುರೇಶ್ ಶೆಟ್ಟಿ ಪರಂಕಿಲ, ವೆಂಕಟ್ರಾಜ ಕುಂಟಿಕಾನ ಮಠ, ಸೌಮ್ಯ ಕೆ.ಎಂ. ಉಪಸ್ಥಿತರಿದ್ದರು.