ತ್ರಿಶೂರ್: ನಾಳೆ(ಬುಧವಾರ) ಪ್ರಧಾನಿ ನರೇಂದ್ರಮೋದಿ ಗುರುವಾಯೂರಿಗೆ ಆಗಮಿಸಲಿದ್ದಾರೆ. ಗುರುವಾಯೂರ್ ನಗರ ಮತ್ತು ತ್ರಿಪ್ರಯಾರ್ ದೇವಾಲಯದ ಪ್ರದೇಶದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ನಾಳೆ ಬೆಳಗ್ಗೆ 6:30ಕ್ಕೆ ಗುರುವಾಯೂರು ಶ್ರೀಕೃಷ್ಣ ಕಾಲೇಜು ಮೈದಾನದ ಹೆಲಿಪ್ಯಾಡ್ ಗೆ ಬರಲಿರುವ ಪ್ರಧಾನಿ ಬಂದಿಳಿಯಲಿದ್ದಾರೆ. ಗುರುವಾಯೂರು ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ನಗರದ ಭದ್ರತೆಯನ್ನು ಎಸ್‍ಪಿಜಿ ವಹಿಸಿಕೊಂಡಿದೆ.
ಎಸ್‍ಪಿಜಿ ಕಮಾಂಡೆಂಟ್ ಸುರೇಶ್ ರಾಜ್ ಪುರೋಹಿತ್ ಅವರು ಭದ್ರತಾ ವ್ಯವಸ್ಥೆಗಳನ್ನು ನಿರ್ದೇಶಿಸುತ್ತಿದ್ದಾರೆ. ನರೇಂದ್ರ ಮೋದಿ ಹೆಲಿಪ್ಯಾಡ್ ನಿಂದ ರಸ್ತೆ ಮೂಲಕ ದೇವಸ್ಥಾನ ತಲುಪುವರು. ಮೋದಿ ಅವರನ್ನು ಸ್ವಾಗತಿಸಲು ಇಬ್ಬದಿಗಳಲ್ಲೂ ಸಾವಿರಾರು ಮಂದಿ ಸಾಲುಗಟ್ಟಿ ನಿಲ್ಲಲಿದ್ದಾರೆ.
ಎಂಟು ಗಂಟೆಗೆ ದೇವಸ್ಥಾನಕ್ಕೆ ಆಗಮಿಸುವ ನರೇಂದ್ರ ಮೋದಿ ಎಂಟು ಮೂವತ್ತರ ನಂತರ ಸುರೇಶ್ ಗೋಪಿ ಅವರ ಪುತ್ರಿಯ ವಿವಾಹ ನಡೆಯುವ ಮಂಟಪಕ್ಕೆ ತಲುಪಲಿದ್ದಾರೆ. ನಂತರ ವಧು-ವರರನ್ನು ಆಶೀರ್ವದಿಸಿ ಒಂಬತ್ತು ಗಂಟೆ ಸುಮಾರಿಗೆ ದೇವಸ್ಥಾನದಿಂದ ಹಿಂತಿರುಗುವರು. ನಂತರ ಹೆಲಿಕಾಪ್ಟರ್ ಮೂಲಕ ತ್ರಿಪ್ರಯಾರ್ ದೇವಸ್ಥಾನಕ್ಕೆ ಭೇಟಿ ನೀಡುವರು. ನಾಟಿಕಾ ಎಸ್‍ಎನ್ ಕಾಲೇಜು ಮೈದಾನದಲ್ಲಿರುವ ಹೆಲಿಪ್ಯಾಡ್‍ಗೆ ಬಂದಿಳಿಯುವ ಮೋದಿ ಅವರು ಕಾರಿನಲ್ಲಿ ತ್ರಿಪ್ರಯಾರ್ ದೇವಸ್ಥಾನ ತಲುಪಲಿದ್ದಾರೆ. ತ್ರಿಪ್ರಯಾರ್ ದೇವಸ್ಥಾನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಎಸ್‍ಪಿಜಿ ಸುತ್ತುವರಿದಿದೆ.ಮೊನ್ನೆಯಿಂದ ತ್ರಿಪ್ರಯಾರ್ ನಗರ ಮತ್ತು ದೇವಾಲಯದ ಸುತ್ತಮುತ್ತ ಹೆಚ್ಚಿನ ಭದ್ರತಾ ಕಟ್ಟೆಚ್ಚರ ವಹಿಸಲಾಗಿದೆ.
ತ್ರಿಪ್ರಯಾರ್ ದೇವಾಲಯಕ್ಕೆ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿರುವುದು ಇದೇ ಮೊದಲು. 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪವಾಸ ವೃತದಲ್ಲಿದ್ದು ಇದೇ ವೇಳೆ ಮೋದಿ ದರ್ಶನಕ್ಕಾಗಿ ತ್ರಿಪ್ರಯಾರ್ ಶ್ರೀರಾಮ ದೇವಸ್ಥಾನಕ್ಕೆ ಆಗಮಿಸಿದ್ದು ಗಮನಾರ್ಹ. ದೇವಾಲಯದಲ್ಲಿ ಪ್ರಮುಖ ಸೇವೆಯನ್ನು ನರೇಂದ್ರ ಮೋದಿ ನೆರವೇರಿಸಲಿದ್ದಾರೆ. ನಂತರ ಹೆಲಿಕಾಪ್ಟರ್ ಮೂಲಕ ಕೊಚ್ಚಿಗೆ ಹಿಂತಿರುಗಲಿದ್ದಾರೆ.