ಬದಿಯಡ್ಕ: ಕಲಾಕುಂಚದ ಅಂಗಳದಲ್ಲಿ ಕಲೆಯನ್ನು ಅರಳಿಸುವ ಕೌಶಲ್ಯವಿದೆ. ಕಲೆ ಸಾಹಿತ್ಯ ಸಂಗೀತ ಸಂಸ್ಕøತಿಯ ಕೂಡುಕೊಳ್ಳುವಿಕೆಯ ದಿವ್ಯದರ್ಶನ ಸೂಕ್ತವಾದ ವೇದಿಕೆ, ಹೊಸ ಪರಿಕಲ್ಪನೆಯೊಂದಿಗೆ ಅವಕಾಶ ವಂಚಿತ ಪ್ರತಿಭಾವಂತರಿಗೆ ಮುಕ್ತವಾದ ರಂಗಪ್ರವೇಶದೊಂದಿಗೆ ಕಲಾವಿದರ ಪ್ರತಿಭೆಗಳನ್ನು ಅನಾವರಣಗೊಳಿಸುತ್ತಿರುವ ಈ ಸಂಸ್ಥೆ ಇತರ ಸಂಘಟನೆಗಳಿಗೆ ಮಾದರಿ. ನೆರೆಹೊರೆ ರಾಜ್ಯಗಳ ಸಾಂಸ್ಕøತಿಕ ಸಮ್ಮಿಲನ, ಎರಡೂ ರಾಜ್ಯಗಳ ವಿವಿಧ ಕಲಾಪ್ರಕಾರಗಳೊಂದಿಗೆ ಸುಸಂಪನ್ನಗೊಂಡ ಈ ಸಮ್ಮೇಳನದಿಂದ ನಮ್ಮ ನಾಡು ನುಡಿಯ, ಸಂಸ್ಕøತಿ, ಸಂಸ್ಕಾರಕ್ಕೆ ಭದ್ರವಾದ ಬುನಾದಿಯಾಯಿತು ಎಂದು ಹಿರಿಯ ಸಾಹಿತಿ ವಿ.ಬಿ.ಕುಳಮರ್ವ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ದಾವಣಗೆರೆಯ ಕಲಾಕುಂಚ ಸಾಂಸ್ಕøತಿಕ ಸಂಸ್ಥೆ ಮತ್ತು ಕಲಾಕುಂಚ ಕೇರಳ ಗಡಿನಾಡ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಆರ್.ಎಚ್.ಗೀತಾಮಂದಿರದಲ್ಲಿ ಜರಗಿದ ಪ್ರತಿಭಾನ್ವೇಷಣೆ ಸಾಂಸ್ಕøತಿಕ ಸಂಗೀತ ನಾಟ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕೇರಳದ ಗಡಿನಾಡ ಶಾಖೆಯ ಅಧ್ಯಕ್ಷೆ ಜಯಲಕ್ಷ್ಮೀ, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ ಶೆಣೈ, ಅಧ್ಯಕ್ಷ ರಾಜಶೇಖರ ಬನ್ನೂರು, ಪ್ರಭಾ ರವೀಂದ್ರ, ಶಾರದಮ್ಮ ಶೀವನಪ್ಪ, ಲಲಿತಾ ಕಲ್ಲೇಶ್, ನೆಲ್ಲೂರು ಲಕ್ಷ್ಮಣ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.