ನವದೆಹಲಿ: ಗಣರಾಜ್ಯೋತ್ಸವ ಅಂಗವಾಗಿ ಜನವರಿ 26ರಂದು ಕರ್ತವ್ಯಪಥದಲ್ಲಿ ನಡೆಯುವ ಪಥಸಂಚಲನದಲ್ಲಿ ಮೇಜರ್ ಜೆರ್ರಿ ಬ್ಲೈಜ್ ಮತ್ತು ಕ್ಯಾಪ್ಟನ್ ಸುಪ್ರೀತಾ ಸಿ.ಟಿ ದಂಪತಿ ಎರಡು ಪ್ರತ್ಯೇಕ ತಂಡಗಳ ಸದಸ್ಯರಾಗಿ ಭಾಗಿಯಾಗಲಿದ್ದಾರೆ.
ನವದೆಹಲಿ: ಗಣರಾಜ್ಯೋತ್ಸವ ಅಂಗವಾಗಿ ಜನವರಿ 26ರಂದು ಕರ್ತವ್ಯಪಥದಲ್ಲಿ ನಡೆಯುವ ಪಥಸಂಚಲನದಲ್ಲಿ ಮೇಜರ್ ಜೆರ್ರಿ ಬ್ಲೈಜ್ ಮತ್ತು ಕ್ಯಾಪ್ಟನ್ ಸುಪ್ರೀತಾ ಸಿ.ಟಿ ದಂಪತಿ ಎರಡು ಪ್ರತ್ಯೇಕ ತಂಡಗಳ ಸದಸ್ಯರಾಗಿ ಭಾಗಿಯಾಗಲಿದ್ದಾರೆ.
'ದಂಪತಿ ಭಾಗಿಯಾಗುತ್ತಿರುವುದು ಗಣರಾಜ್ಯೋತ್ಸವ ಪಥಸಂಚಲನದ ಇತಿಹಾಸದಲ್ಲಿಯೇ ಮೊದಲು' ಎಂದು ಮೇಜರ್ ಬ್ಲೈಜ್ ತಿಳಿಸಿದರು.
'ಇದು ಕಾಕತಾಳೀಯ ಅಷ್ಟೆ. ಮೊದಲಿಗೆ ನಾನು ಪಥಸಂಚಲನದಲ್ಲಿ ಭಾಗಿಯಾಗಲು ಆಯ್ಕೆಯಾದೆ, ಬಳಿಕ ಪತಿಯೂ ಆಯ್ಕೆಯಾದರು' ಎಂದು ಸುಪ್ರೀತಾ ತಿಳಿಸಿದರು.
ಸುಪ್ರೀತಾ ಅವರು ಕರ್ನಾಟಕದ ಮೈಸೂರಿನವರು. ಇಲ್ಲಿನ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಮೇಜರ್ ಬ್ಲೈಜ್ ಅವರು ತಮಿಳುನಾಡಿನ ವೆಲ್ಲಿಂಗ್ಟನ್‌ನವರು. ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ. ಜೂನ್ 2023ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ದಂಪತಿ ಸದ್ಯ ದೆಹಲಿಯಲ್ಲಿ ನೆಲೆಸಿದ್ದಾರೆ.
ಬ್ಲೈಜ್ ಅವರು ಮದ್ರಾಸ್ ರೆಜಿಮೆಂಟ್‌ನಲ್ಲಿ ಕರ್ತವ್ಯದಲ್ಲಿದ್ದಾರೆ. ಸುಪ್ರೀತಾ ಅವರು ಸೇನೆಯ ಪೊಲೀಸ್ ವಿಭಾಘದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.