HEALTH TIPS

ನಾಯಿ ಮಾಂಸ ನಿಷೇಧ ಮಸೂದೆ ಅಂಗೀಕರಿಸಿದ ದಕ್ಷಿಣ ಕೊರಿಯಾ

               ಸಿಯೋಲ್‌: ನಾಯಿ ಮಾಂಸ ಸೇವನೆ ನಿಷೇಧಿಸುವ ಮಸೂದೆಯೊಂದನ್ನು ದಕ್ಷಿಣ ಕೊರಿಯಾ ಸರ್ಕಾರ ಅಂಗೀಕರಿಸಿದ್ದು, ಆ ಮೂಲಕ ಪ್ರಾಚೀನ ಆಹಾರ ಪದ್ಧತಿಯನ್ನು ಕೈಬಿಡಲು ಮುಂದಾಗಿದೆ.

              ನಾಯಿ ಮಾಂಸ ನಿಷೇಧಿಸುವ ಕುರಿತ ಮಸೂದೆಯನ್ನು ಇಂದು ನಡೆದ ಸಂಸತ್‌ ಸಭೆಯಲ್ಲಿ ಮಂಡಿಸಿದ್ದು, 208-0 ಮತಗಳಿಂದ ಮಸೂದೆಯನ್ನು ಅಂಗೀಕರಿಸಲಾಗಿದೆ.

              ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೆಲ್ ಅವರು ಸಹಿ ಮಾಡಿದ ನಂತರ ಈ ಮಸೂದೆ ಕಾನೂನು ಆಗಿ ಜಾರಿಯಾಗಲಿದೆ.

              ಮನುಷ್ಯರ ಆಹಾರವಾಗಿ ನಾಯಿ ಸಾಕಾಣಿಕೆ, ವಧೆ, ಮಾರಾಟ ಸಂಪೂರ್ಣ ಕಾನೂನುಬಾಹಿರ ಹಾಗೂ ಕೃತ್ಯ ಎಸಗಿದವರಿಗೆ 2 ರಿಂದ 3 ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶ ಮಸೂದೆಯಲ್ಲಿದೆ. ಇದು 2027ರಿಂದ ಜಾರಿಗೆ ಬರಲಿದೆ.

                ನಾಯಿ ಮಾಂಸ ನಿಷೇಧಿಸುವ ಸರ್ಕಾರದ ನಿರ್ಧಾರಕ್ಕೆ ರೈತರು ಮತ್ತು ನಾಯಿ ಮಾಂಸ ವ್ಯಾಪಾರಿಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಈ ಕುರಿತು ಇತ್ತೀಚೆಗೆ ಸಮೀಕ್ಷೆಯೊಂದನ್ನು ಕೈಗೊಂಡಿದ್ದು, ದೇಶದ ಯುವ ಸಮುದಾಯ ಸೇರಿದಂತೆ ಹಲವರು ಪ್ರಾಣಿ ಕ್ರೌರ್ಯದ ಬಗ್ಗೆ ಕಾಳಜಿ ಹೊಂದಿರುವುದು ತಿಳಿದುಬಂದಿದೆ. ಅಲ್ಲದೇ ನಾಯಿ ಮಾಂಸ ಸೇವನೆ ಕುರಿತಂತೆ ಜಾಗತಿಕ ಮಟ್ಟದಲ್ಲೂ ವಿರೋಧ ವ್ಯಕ್ತವಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries