ಲಂಡನ್: ಬ್ರಿಟನ್‌ನಲ್ಲಿ ಯುವ ವಿಜ್ಞಾನಿಗಳಿಗೆ ನೀಡುವ ಪ್ರತಿಷ್ಠಿತ 'ದಿ ಬ್ಲವ್ಯಾಟ್ನಿಕ್ ಪ್ರಶಸ್ತಿ'ಗೆ ಭಾರತ ಮೂಲದ ಪ್ರೊ. ರಾಹುಲ್ ಆರ್. ನಾಯರ್, ಮೆಹುಲ್ ಮಲಿಕ್ ಹಾಗೂ ತನ್ಮಯ್ ಭರತ್ ಸೇರಿದಂತೆ ಒಂಬತ್ತು ಮಂದಿ ಆಯ್ಕೆಯಾಗಿದ್ದಾರೆ.
ಲಂಡನ್: ಬ್ರಿಟನ್‌ನಲ್ಲಿ ಯುವ ವಿಜ್ಞಾನಿಗಳಿಗೆ ನೀಡುವ ಪ್ರತಿಷ್ಠಿತ 'ದಿ ಬ್ಲವ್ಯಾಟ್ನಿಕ್ ಪ್ರಶಸ್ತಿ'ಗೆ ಭಾರತ ಮೂಲದ ಪ್ರೊ. ರಾಹುಲ್ ಆರ್. ನಾಯರ್, ಮೆಹುಲ್ ಮಲಿಕ್ ಹಾಗೂ ತನ್ಮಯ್ ಭರತ್ ಸೇರಿದಂತೆ ಒಂಬತ್ತು ಮಂದಿ ಆಯ್ಕೆಯಾಗಿದ್ದಾರೆ.
ರಸಾಯನ ಶಾಸ್ತ್ರ, ಭೌತವಿಜ್ಞಾನ, ಎಂಜಿನಿಯರಿಂಗ್ ಮತ್ತು ಜೀವ ವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಫೆಬ್ರುವರಿ 27ರಂದು ಲಂಡನ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. 4.8 ಲಕ್ಷ ಪೌಂಡ್ (ಅಂದಾಜು ₹5.7 ಕೋಟಿ) ಮೊತ್ತವನ್ನು ಈ ಪ್ರಶಸ್ತಿ ಒಳಗೊಂಡಿದೆ.
ನಾಯರ್ ಅವರು ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಭೌತವಿಜ್ಞಾನಿಯಾಗಿದ್ದಾರೆ. ಮಲಿಕ್ ಅವರು ಹೆರಿಯಟ್-ವ್ಯಾಟ್ ವಿಶ್ವವಿದ್ಯಾಲಯದಿಂದ ಹಾಗೂ ತನ್ಮಯ್ ಅವರು ಇಂಗ್ಲೆಂಡ್‌ನ ಎಂಆರ್‌ಸಿ 'ಲ್ಯಾಬೊರೇಟರಿ ಆಫ್ ಮಾಲಿಕ್ಯುಲರ್ ಬಯಾಲಜಿ' ಸಂಸ್ಥೆಯಿಂದ ಪಿಎಚ್.ಡಿ ಪಡೆದಿದ್ದಾರೆ.
2024ರ ಸಾಲಿನ ಪ್ರಶಸ್ತಿಗೆ 40 ಸಂಶೋಧನಾ ಸಂಸ್ಥೆಗಳಿಂದ 84 ನಾಮನಿರ್ದೇಶನಗಳು ಬಂದಿದ್ದವು ಎಂದು ಪ್ರಶಸ್ತಿ ನೀಡುವ ಬ್ಲವ್ಯಾಟ್ನಿಕ್ ಕುಟುಂಬ ಪ್ರತಿಷ್ಠಾನ ಮತ್ತು ದಿ ನ್ಯೂಯಾರ್ಕ್ ಅಕಾಡೆಮಿ ಆಫ್ ಸೈನ್ಸ್ ಸಂಸ್ಥೆ ಹೇಳಿದೆ.