ಉತ್ತರ ಲಖೀಂಪುರ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ ಜೋಡೊ ನ್ಯಾಯ ಯಾತ್ರೆಯು ಶನಿವಾರ ಅಸ್ಸಾಂನ ಲಖೀಂಪುರದ ಭೋಗಿನದಿಯಿಂದ ಮುಂದುವರಿಯಿತು.
ಉತ್ತರ ಲಖೀಂಪುರ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ ಜೋಡೊ ನ್ಯಾಯ ಯಾತ್ರೆಯು ಶನಿವಾರ ಅಸ್ಸಾಂನ ಲಖೀಂಪುರದ ಭೋಗಿನದಿಯಿಂದ ಮುಂದುವರಿಯಿತು.
ಎರಡು ಬಾರಿ ಬಸ್‌ನಿಂದ ಇಳಿದ ಅವರು, ಜನರೊಂದಿಗೆ ಮಾತನಾಡುತ್ತಾ ಕೆಲ ದೂರ ನಡೆದರು.
ವೇಳಾಪಟ್ಟಿ ಪ್ರಕಾರ ಯಾತ್ರೆಯು, ಗೋವಿಂದಪುರದಲ್ಲಿ ಬೆಳಗ್ಗಿನ ವಿರಾಮ ಇರಲಿದೆ. ಅಲ್ಲಿ ಹಿರಿಯ ನಾಯಕರಾದ ಜೈರಾಮ್ ರಮೇಶ್, ಜಿತೇಂದ್ರ ಸಿಂಗ್, ಭೂಪೆನ್ ಬೋರಾ ಹಾಗೂ ದೇವಬ್ರತಾ ಸೈಕಿಯಾ ಅವರು ಪತ್ರಿಕಾಗೋಷ್ಟಿ ನಡೆಸಲಿದ್ದಾರೆ.
ಹರುಮುತಿಯಿಂದ ಮಧ್ಯಾಹ್ನದ ಬಳಿಕ ಯಾತ್ರೆ ಮುಂದುವರಿಯಲಿದ್ದು, ಗುಮ್ಟೊ ಮೂಲಕ ಅರುಣಾಚಲ ಪ್ರದೇಶವನ್ನು ಪ್ರವೇಶಿಸಲಿದೆ. ಅಲ್ಲಿ ಧ್ವಜ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.
ಅರುಣಾಚಲದ ಮೈತುನ್ ಗೇಟ್‌ನಿಂದ ಇಟಾನಗರದವರೆಗೆ ಪಾದಯಾತ್ರೆ ಮೂಲಕ ಸಾಗಿ, ಅಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ. ಇಟಾನಗರ ಸಮೀಪದ ಚಿಂಪು ಗ್ರಾಮದಲ್ಲಿ ಯಾತ್ರೆ ತಂಗಲಿದೆ.