ಕಾಸರಗೋಡು: ಸಂವಿಧಾನಬದ್ಧ ಅವಕಾಶಗಳು ತಳಮಟ್ಟದ ನಾಗರಿಕರಿಗೂ ಲಭಿಸುವಂತೆ ಮಾಡಿದಾಗ ಗಣತಂತ್ರಕ್ಕೆ ಹೆಚ್ಚಿನ ಮೌಲ್ಯ ಪ್ರಾಪ್ತಿಯಾಗುವುದಾಗಿ ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಇಲಾಖೆ ಸಚಿವೆ ಆರ್.ಬಿಂದು ತಿಳಿಸಿದ್ದಾರೆ.
ಅವರು ಕಾಸರಗೋಡು ವಿದ್ಯಾನಗರದ ನಗರಸಭಾ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನಡೆಸಿ ಮಾತನಾಡಿದರು.
ಸಂವಿಧಾನಾತ್ಮಕ ಮೌಲ್ಯ ಎತ್ತಿ ಹಿಡಿಯುವುದರ ಜತೆಗೆ ಸಂವಿಧಾನ ಸಂರಕ್ಷಣೆಗೆ ಪ್ರತಿಯೊಬ್ಬ ಪಣತೊಡಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ. ಬಿಜೋಯ್, ಸಂಸದ ರಾಜಮೋಹನ್ ಉಣ್ಣಿತ್ತಾನ್ ಗೌರವ ವಂದನೆ ಸ್ವೀಕರಿಸಿದರು. ಶಾಸಕರಾದ ಎಕೆಎಂ ಅಶ್ರಫ್, ಎನ್ ಎ ನೆಲ್ಲಿಕುನ್ನು, ಸಿಎಚ್ ಕುಂಜಂಬು, ಇ ಚಂದ್ರಶೇಖರನ್, ಎಂ ರಾಜಗೋಪಾಲನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಎಡಿಎಂಕೆ ನವೀನ್ ಬಾಬು, ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೈನಿಕರ ಆರ್‍ಡಿಓ ಅತುಲ್ ಸ್ವಾಮಿನಾಥನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭ ನಡೆದ ಪಥಸಂಚಲನದಲ್ಲಿ ಜಿಲ್ಲಾ ಸಶಸ್ತ್ರ ಪೆÇಲೀಸ್, ಸ್ಥಳೀಯ ಪೆÇಲೀಸ್, ಮಹಿಳಾ ಪೆÇಲೀಸ್, ಅಬಕಾರಿ, ಹಿರಿಯ ವಿಭಾಗ ಎನ್.ಸಿ.ಸಿ ಕಾಸರಗೋಡು ಸರ್ಕಾರಿ ಕಾಲೇಜು, ಹಿರಿಯ ವಿಭಾಗದ ಎನ್.ಸಿ.ಸಿ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜು ಕಾಞಂಗಾಡ್, ಜವಾಹರ ನವೋದಯ ವಿದ್ಯಾಲಯ ಪೆರಿಯ ಹಾಗೂ ಉಳಿಯತ್ತಡ್ಕ ಜೈಮಾತಾ ಹಿರಿಯ ಮಾಧ್ಯಮಿಕ ಶಾಲೆ ಬ್ಯಾಂಡ್‍ಸೆಟ್, ತನ್‍ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆ ನಾಯನ್‍ಮರ್‍ಮೂಲೆ, ಹೆಣ್ಮಕ್ಕಳ ಸರ್ಕಾರಿ ಮಾದರಿ ವಸತಿ ಶಾಲೆ, ಪೆರಿಯ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ವಿ.ಪಿ.ಪಿ.ಎಂ.ಕೆ.ಎಚ್.ಪಿ.ಎಸ್ ತೃಕ್ಕರಿಪುರ ಶಾಲೆಗಳ ಸ್ಟೂಡೆಂಟ್ ಪೊಲೀಸ್ ವಿಭಾಗ, ಜವಾಹರ್ ನವೋದಯ ವಿದ್ಯಾಲಯದ ಎನ್‍ಸಿಸಿ, ಜೈಮಾತಾ ಶಾಲೆಯ ಸ್ಕೌಟ್ ಏಂಡ್ ಗೈಡ್ಸ್ ಎನ್‍ಸಿಸಿ, ದುರ್ಗಾ ಹೈಯರ್ ಸೆಕೆಂಡರಿ ಶಾಲೆ, ಇಕ್ಬಾಲ್ ಹೈಯರ್ ಸೆಕೆಂಡರಿ ಸ್ಕೂಲ್ ಕಾಂಞಂಗಾಡ್, ಸರ್ಕಾರಿ ಹೈಯರ್ ಸೆಕೆಂಡರಿ ಸ್ಕೂಲ್ ಚಾಯೋತ್, ರಾಜಾಸ್ ಹೈಯರ್ ಸೆಕೆಂಡರಿ ಸ್ಕೂಲ್ ನೀಲೇಶ್ವರಂ, ಸರ್ಕಾರಿ ಹೈಯರ್ ಸೆಕೆಂಡರಿ ಸ್ಕೂಲ್ ಚೆಮ್ನಾಡ್ ಎನ್‍ಸಿಸಿ ವಿಭಾಗ ಪಥಸಂಚಲನದಲ್ಲಿ ಪಾಲ್ಗೊಂಡಿತ್ತು.
ವಿವಿಧ ತಂಡಗಳಿಂದ ಕಲಾ, ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.