HEALTH TIPS

ಫಿಲ್ಟರ್ ನೀರು ಕುಡಿಯುತ್ತೀರಾ..? ಎಚ್ಚರ ಈ ಸಮಸ್ಯೆ ಎದುರಾಗಬಹುದು!

 ಕುಡಿಯುವ ನೀರಿನ ವಿಷಯಕ್ಕೆ ಬಂದಾಗ ಎಷ್ಟೊಂದು ಎಚ್ಚರ ವಹಿಸಿದ್ರು ಸಾಲದು ಎಂಬಂತಾಗಿದೆ. ಇತ್ತೀಚಿಗೆ ಪ್ಲಾಸ್ಟಿಕ್ ಬಾಟಲಿಯ ನೀರು ಕುಡಿಯುವುದು ಸಹ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ. ಹೀ‍ಗಾಗಿ ಜನ ಯಾವ ನೀರು ಕುಡಿಯಬೇಕು ಎಂಬ ಗೊಂದಲದಲ್ಲೇ ಇದ್ದಾರೆ. ಅದರಲ್ಲೂ ಕೋವಿಡ್ ನಂತರದ ಸಮಯದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಪ್ರಮಾಣವು ಹೆಚ್ಚಾಗಿದೆ.

ಇದೇ ಕಾರಣಕ್ಕೆ ಜನ ಕುಡಿಯುವ ನೀರಿಗಾಗಿ ಫಿಲ್ಟರ್‌ಗಳ ಮೊರೆ ಹೋಗುತ್ತಿದ್ದಾರೆ. ಬಹುಕಾಲದಿಂದಲೂ ಫಿಲ್ಟರ್ ಬಳಕೆ ಇದ್ದು, ಹಲವರು ಚಿಕ್ಕ ವಯಸ್ಸಿನಿಂದಲೂ ಫಿಲ್ಟರ್ ನೀರನ್ನೇ ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ದೀರ್ಘಾವಧಿಯ ಫಿಲ್ಟರ್ ನೀರು ಸೇವನೆ ಸಹ ಅನಾರೋಗ್ಯ ಸಮಸ್ಯೆಗೆ ದಾರಿಯಾಗಬಹುದು ಎಂದು ತಜ್ಞರು ಹೇಳಿದ್ದಾರೆ.

ನೀರು ಬಾಯಾರಿಕೆಯನ್ನು ತಣಿಸುವುದು ಮಾತ್ರವಲ್ಲ, ಎಲ್ಲಾ ಅಂಗಗಳ ಸರಿಯಾದ ಕಾರ್ಯನಿರ್ವಹಣೆ ಮತ್ತು ದೇಹಕ್ಕೆ ಪ್ರಾಥಮಿಕ ಹಂತದಲ್ಲಿ ಶಕ್ತಿ ನೀಡಲು ಮುಖ್ಯವಾಗಿದೆ. ಮತ್ತು ಎಲ್ಲಾ ನೀರು ಕುಡಿಯಲು ಯೋಗ್ಯವಾಗಿಲ್ಲದ ಕಾರಣ, ಕುಡಿಯುವ ಮತ್ತು ಶುದ್ಧೀಕರಣದ ವಿವಿಧ ವಿಧಾನಗಳು ಪ್ರಪಂಚದಾದ್ಯಂತ ಬಳಸಲ್ಪಡುತ್ತಿವೆ

ಈ ವಿಧಾನಗಳು ನೀರನ್ನು ಶುದ್ಧಗೊಳಿಸುತ್ತದೆ ಎಂದು ನೀವು ನಂಬಿದ್ದರೂ ಸಹ, ಅದು ಯಾವಾಗಲೂ ಅಲ್ಲ. ತಜ್ಞರ ಪ್ರಕಾರ, ಶುದ್ಧೀಕರಿಸಿದ, ಫಿಲ್ಟರ್ ಮಾಡಿದ ನೀರು ನಿಮಗೆ ಕೆಟ್ಟದ್ದಾಗಿರಲು ಹಲವಾರು ಕಾರಣಗಳಿವೆ.

ಶುದ್ಧೀಕರಿಸಿದ ನೀರಿನ ಮುಖ್ಯ ಸಮಸ್ಯೆಯೆಂದರೆ ಅದು ತುಂಬಾ ಸ್ವಚ್ಛವಾಗಿರುವುದು. ಹೌದು ನೀರು ತುಂಬಾ ಸ್ವಚ್ಛವಾಗಿದ್ದರೆ ಅದು ಒಳ್ಳೆಯ ಮತ್ತು ಕುಡಿಯಲು ಯೋಗ್ಯವಾಗಿದೆ ಎಂದು ತಿಳಿಯುವವರೇ ಹೆಚ್ಚು. ಆದರೆ ನಿಮಗೆ ಗೊತ್ತಿಲ್ಲದ ವಿಚಾರ ಎಂದರೆ ಅತ್ಯಂತ ಪರಿಶುದ್ಧವಾದ ನೀರು ನಿಮಗೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಏಕೆಂದರೆ ಈ ಪರಿಶುದ್ಧ ನೀರಿನಲ್ಲಿ ಅಗತ್ಯವಾಗಿ ಇರಬೇಕಾದ ಖನಿಜಗಳೇ ಇಲ್ಲದಿರುವುದು.

ಶುದ್ಧೀಕರಿಸಿದ ನೀರಿನಲ್ಲಿ ಬಹಳಷ್ಟು ವಿಷಕಾರಿ ಅಂಶಗಳು ಮತ್ತು ಲೋಹಗಳು ಇದ್ದರೂ ಸಹ ಅದು ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳಿಂದ ತುಂಬಿರುತ್ತದೆ. ಇದು ದೇಹದಲ್ಲಿ ಅತಿಯಾದ ಸೋಡಿಯಂ ಅನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಮೂಳೆಗಳ ಹಾನಿ ಮತ್ತು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಫಿಲ್ಟರ್ ಮಾಡಿರುವ ನೀರು ಕೆಲವು ಗಂಭೀರ ಅಡ್ಡಪರಿಣಾಮಗಳು ಒಳಗೊಂಡಿರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಪರಿಶುದ್ಧ ನೀರಿನ ದೀರ್ಘಕಾಲದ ಸಮಸ್ಯೆಗಳು:

  • ಸುಸ್ತು
  • ದೌರ್ಬಲ್ಯ
  • ತಲೆನೋವು
  • ತೀವ್ರವಾದ ಸ್ನಾಯು ಸೆಳೆತ
  • ದುರ್ಬಲಗೊಂಡ ಹೃದಯ ಬಡಿತ
  • ಕ್ಯಾನ್ಸರ್
  • ಅಧಿಕ ರಕ್ತದೊತ್ತಡ
  • ಗ್ಯಾಸ್ಟ್ರಿಕ್ ಮತ್ತು ಡ್ಯುವೋಡೆನಲ್ ಅಲ್ಸರ್
  • ದೀರ್ಘಕಾಲದ ಜಠರದುರಿತ
  • ಗಂಟಲು ಊತ
  • ಗರ್ಭಾವಸ್ಥೆಯ ತೊಡಕುಗಳು

ಇನ್ನು ಆಹಾರ ತಯಾರಿಕೆಯಲ್ಲಿ ಫಿಲ್ಟರ್ ನೀರು ಬಳಸಿದರೆ ತರಕಾರಿ, ಮಾಂಸ ಮತ್ತು ಇತರ ವಸ್ತುಗಳಲ್ಲಿರುವ ಖನಿಜಾಂಶಗಳ ನಷ್ಟಕ್ಕೂ ಇದು ಕಾರಣವಾಗಲಿದೆಯಂತೆ. ಆದರೆ ನೀವು ಅಡುಗೆಗಾಗಿ ಖನಿಜಯುಕ್ತ ನೀರನ್ನು ಬಳಸಿದಾಗ, ಈ ಅಂಶಗಳ ನಷ್ಟವು ತುಂಬಾ ಕಡಿಮೆ ಎಂದು ವರದಿಯಾಗಿದೆ.

ಫಿಲ್ಟರ್ ಮಾಡಿದ ನೀರಿಗಿಂತ ಇದನ್ನು ಬಳಸಿ

ನೀರನ್ನು ಕುದಿಸಿ ಕುಡಿಯಿರಿ

ತಜ್ಞರ ಪ್ರಕಾರ, ನೀರನ್ನು ಕುದಿಸಿ, ಆರಿಸಿ ಕುಡಿಯಲು ಬಳಸಬೇಕು. ಇದರ ಜೊತೆ ಅಡುಗೆಗೆ ಸೂಕ್ತ ನೀರನ್ನು ಬಳಸಬಹುದು. ಇದು ಫಿಲ್ಟರ್ ನೀರಿಗಿಂತಲೂ ಉತ್ತಮ.

ಅಯೋಡಿನ್

ಒಂದು ಲೀಟರ್ ಶುದ್ಧ ನೀರಿನಲ್ಲಿ ಸುಮಾರು 4-4 ಹನಿಗಳ ಅಯೋಡಿನ್ ಅನ್ನು ಕುಡಿಯಲು ಯೋಗ್ಯವಾಗುವಂತೆ ಸೇರಿಸಬಹುದು. ನೀರಿನ ಉಷ್ಣತೆಯು 21 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿದ್ದರೆ ಅಯೋಡಿನ್ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಯೋಡಿನ್ ನೀರಿನಲ್ಲಿರುವ ಕೆಲವು ರೋಗಕಾರಕ ಅಂಶಗಳನ್ನು ನಾಶಮಾಡುವ ಶಕ್ತಿ ಹೊಂದಿದೆ. ಹೀಗಾಗಿ ನೀವು ಬಳಸುವ ನೀರಿನಲ್ಲಿ ಉಪ್ಪಿನ ಅಂಶ ಇದ್ದರೆ ಒಳಿತು. ಆದರೆ ಅತೀಯಾದ ಉಪ್ಪು ಸಹ ದೇಹಕ್ಕೆ ಒಳ್ಳೆಯದಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕಿದೆ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries