ನವದೆಹಲಿ: ದಿನಪತ್ರಿಕೆ ಪ್ರಕಟವಾದ 48 ಗಂಟೆಗಳೊಳಗೆ ಪ್ರಕಾಶಕರು ಅದರ ಇ- ಆವೃತ್ತಿಯನ್ನು 'ಪ್ರೆಸ್ ಸೇವಾ ಪೋರ್ಟಲ್'ಗೆ ಅಪ್‌ಲೋಡ್ ಮಾಡಬೇಕು ಎಂದು ಪತ್ರಿಕೆ ಮತ್ತು ನಿಯತಕಾಲಿಕೆಗಳ ನೋಂದಣಿ ನಿಯಮ 2024ರ ಕರಡು ಪ್ರತಿಯಲ್ಲಿ ಹೇಳಲಾಗಿದೆ.

ಪ್ರತಿ ತಿಂಗಳ 5ನೇ ತಾರೀಕಿನೊಳಗೆ ಪತ್ರಿಕೆಯ ಹಿಂದಿನ ತಿಂಗಳ ಮುದ್ರಿತ ಪ್ರತಿಗಳನ್ನು ಪ್ರೆಸ್ ಇನ್ಫಾರ್ಮೇಶನ್ ಬ್ಯುರೊದ (ಪಿಐಬಿ) ರಾಜ್ಯ ಕಚೇರಿಗಳಿಗೆ ಸಲ್ಲಿಸಬೇಕು ಎಂದೂ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಶುಕ್ರವಾರ ಬಿಡುಗಡೆ ಮಾಡಿರುವ ಕರಡು ನಿಯಮಗಳಲ್ಲಿ ಹೇಳಲಾಗಿದೆ.