ವಾಷಿಂಗ್ಟನ್: ಭಾರತ-ಅಮೆರಿಕದ ಬಾಂಧವ್ಯವನ್ನು ಬಲಪಡಿಸಲು ನಾಯಕತ್ವ ವಹಿಸಿದ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರ ಬಗ್ಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತ ಮೆಚ್ಚುಗೆ ವ್ಯಕ್ತಪಡಿಸಿದೆ.
ಕಳೆದ ಮೂರು ದಶಕಗಳ ವಿದೇಶಾಂಗ ಇಲಾಖೆಯ ಸೇವೆಯಿಂದ ನಿವೃತ್ತಿಯಾದ ಸಂಧು ಅವರಿಗೆ ಇಲ್ಲಿನ 'ಇಂಡಿಯಾ ಹೌಸ್'ನಲ್ಲಿ ಸೋಮವಾರ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.
ಈ ವೇಳೆ ಮಾತನಾಡಿದ ಶ್ವೇತ ಭವನದ ರಾಷ್ಟ್ರೀಯ ಔಷಧ ನಿಯಂತ್ರಣ ನೀತಿಯ ನಿರ್ದೇಶಕ ರಾಹುಲ್ ಗುಪ್ತ, 'ನಿಮ್ಮ ಕಾರ್ಯವೈಖರಿಯಿಂದಾಗಿ ದ್ವಿಪಕ್ಷೀಯ ಸಂಬಂಧದ ತೋಟದಲ್ಲಿ ಸಾವಿರಾರು ಹೂವುಗಳು ಅರಳಿವೆ' ಎಂದು ಪ್ರಶಂಸಿಸಿದರು.
ರಾಜಕೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ವಿಕ್ಟೋರಿಯಾ ನುಲಾಂದ್, 'ಸಂಧು ಅವರ ರೀತಿಯ ಮತ್ತೊಬ್ಬ ರಾಯಭಾರಿಯನ್ನು ಕಾಣಲು ಸಾಧ್ಯವಿಲ್ಲ' ಎಂದು ಹೊಗಳಿದರು.