ನವದೆಹಲಿ: ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮಿಲಿಟರಿ ಪರೇಡ್ ಕುರಿತು ಆಸಕ್ತಿದಾಯಕ ಪೋಸ್ಟ್ ಮಾಡಿದ್ದಾರೆ. ಇತರ ದೇಶಗಳ ಸೈನ್ಯಕ್ಕೆ ಸಲಹೆಯನ್ನು ನೀಡಿದ್ದಾರೆ.
ನವದೆಹಲಿ: ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮಿಲಿಟರಿ ಪರೇಡ್ ಕುರಿತು ಆಸಕ್ತಿದಾಯಕ ಪೋಸ್ಟ್ ಮಾಡಿದ್ದಾರೆ. ಇತರ ದೇಶಗಳ ಸೈನ್ಯಕ್ಕೆ ಸಲಹೆಯನ್ನು ನೀಡಿದ್ದಾರೆ.
ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯ ಪಥ್ನಲ್ಲಿ ಶುಕ್ರವಾರ ನಡೆದ ಪರೇಡ್ ಆಕರ್ಷಕವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಖ್ಯಾತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ, ನಮ್ಮ ಭಾರತೀಯ ಸೇನೆಯ ಶಕ್ತಿಯನ್ನು ಶ್ಲಾಘಿಸಿದ್ದಾರೆ. ಈ ಸಂದರ್ಭದಲ್ಲಿ ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆಯನ್ನೂ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನಮ್ಮ ಸೇನೆಯ ಶಕ್ತಿ ಸಾಮರ್ಥ್ಯಗಳನ್ನು ಉಲ್ಲೇಖಿಸಿ 'ಭಾರತ ಬಲಿಷ್ಠವಾಗಿದೆ' ಎಂಬರ್ಥದಲ್ಲಿ ಎಮೋಜಿಗಳನ್ನು ಸೇರಿಸಲಾಗಿದೆ. ಈ ಪೋಸ್ಟ್ ಈಗ ವೈರಲ್ ಆಗಿದೆ.
ಈ ಬಾರಿಯ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ನಮ್ಮ ಸೇನಾ ಶಕ್ತಿಯನ್ನು ಜಗತ್ತಿಗೆ ತೋರಿಸಲಾಗಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರಗಳ ಜೊತೆಗೆ, ನಾಗ್ ಕ್ಷಿಪಣಿಗಳು, ಟಿ-90 ಭೀಷ್ಮ ಯುದ್ಧ ಟ್ಯಾಂಕ್‌ಗಳು, ಡ್ರೋನ್ ಜಾಮರ್‌ಗಳು, ಕಣ್ಗಾವಲು ವ್ಯವಸ್ಥೆಗಳು, ವಾಹನ ಮೌಂಟೆಡ್ ಮೋಟಾರ್‌ಗಳು, ಪಿನಾಕಾ ಮಲ್ಟಿಪಲ್ ರಾಕೆಟ್ ಸಿಸ್ಟಮ್, ವೆಪನ್ ಲೊಕೇಶನ್ ರಾಡಾರ್ ಸಿಸ್ಟಮ್‌ಗಳು. ಬಿಎಂಪಿ -2 ಸಶಸ್ತ್ರ ಪಡೆಗಳನ್ನು ಪ್ರದರ್ಶಿಸಲಾಯಿತು. ಇದೇ ಪ್ರಥಮ ಬಾರಿಗೆ ಮೂರು ಪಡೆಗಳಿಗೆ ಸೇರಿದ ಮಹಿಳೆಯರು ಪ್ರದರ್ಶಿಸಿದ ಮೆರವಣಿಗೆ ಆಕರ್ಷಕವಾಗಿತ್ತು.