HEALTH TIPS

ಉಪ್ಪಳ ಬಿ ಆರ್ ಸಿ ಯಲ್ಲಿ ಮಂಜೇಶ್ವರ ಉಪಜಿಲ್ಲಾ ಮಟ್ಟದ ಬರಹಕೂಟ

             ಉಪ್ಪಳ:ಎಸ್ ಎಸ್ ಕೆ ಕಾಸರಗೋಡು, ಬಿ.ಆರ್. ಸಿ ಮಂಜೇಶ್ವರ ಇದರ ನೇತೃತ್ವದಲ್ಲಿ ಮಂಜೇಶ್ವರ ಬಿ ಆರ್ ಸಿ ಮಟ್ಟದ ಪ್ರತಿಭಾ ಕೇಂದ್ರಗಳ ಬರಹ ಕೂಟ ಕಾರ್ಯಾಗಾರ ಉಪ್ಪಳ ಬಿ ಆರ್.ಸಿ.ಯಲ್ಲಿ ಸೋಮವಾರ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶಮೀನ ಟೀಚರ್ ಮಾತನಾಡಿ, ಪ್ರತಿಭಾ ಕೇಂದ್ರಗಳು ಪ್ರಾದೇಶಿಕ ಪರಿಸರದ ಮಕ್ಕಳ ಪ್ರತಿಭೆಯ ಅನಾವರಣ ಕೇಂದ್ರವಾಗಿದೆ. ಇದು ಮಕ್ಕಳ ಸುಪ್ತ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಶ್ರಮವಹಿಸುತ್ತಿದ್ದು ಉತ್ತಮ ಅಡಿಪಾಯವನ್ನು ಒದಗಿಸುತ್ತಿದ್ದು ವೈಜ್ಞಾನಿಕ ಮನೋಭಾವವನ್ನು ಬೆಳೆಸುತ್ತಿದೆ ಎಂದು ತಿಳಿಸಿದರು.


          ಬಿ ಆರ್ ಸಿ ಟ್ರೈನರ್ ಜೋಯ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಲೇಖಕಿ ಸ್ನೇಹಲತ ದಿವಾಕರ್, ಅಶೋಕ್ ಕೊಡ್ಲಮೊಗರು ಶುಭ ಹಾರೈಸಿದರು. ಬಿ ಆರ್ ಸಿ ಟ್ರೈನರ್ ಸುಮಾದೇವಿ ಸ್ವಾಗತಿಸಿ, ದಿವ್ಯಾ ಟೀಚರ್ ವಂದಿಸಿದರು. ಮೋಹಿನಿ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕವಿತೆ ರಚನೆ ಹಾಗೂ ಕಥಾ ರಚನಾ ಕಮ್ಮಟ ಜರಗಿತು.ಸಂಪನ್ಮೂಲ ವ್ಯಕ್ತಿಯಾಗಿ ಸ್ನೇಹಲತ ದಿವಾಕರ್ ತರಗತಿ ನಡೆಸಿದರು. ಬಿ ಆರ್.ಸಿ.  ಸಂಯೋಜಕರಾದ ಚಂದ್ರಿಕಾ ಟೀಚರ್, ಪ್ರಸನ್ನ ಟೀಚರ್ ಸಹಕರಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries