ಕೊಲ್ಲಂ; ಪರವೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ನೇಣಿಗೆ ಶರಣಾದ ಘಟನೆ ನಡೆದಿದೆ. ಅಡ್ವ. ಎಸ್ ಅನಿಸ್ಯಾ(41) ಆತ್ಮಹತ್ಯೆ ಮಾಡಿಕೊಂಡವರು.
ಪರವೂರು ನೆಡುಂಗೊಳಂನಲ್ಲಿರುವ ಮನೆಯ ವಾಶ್ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ನಿನ್ನೆ ಮಧ್ಯಾಹ್ನ ಸಾವು ಸಂಭವಿಸಿದೆ ಎಂದು ಪೋಲೀಸರು ತೀರ್ಮಾನಿಸಿದ್ದಾರೆ. ಎಷ್ಟೋ ಸಮಯದ ನಂತರ ವಾಶ್ ರೂಮ್‍ಗೆ ಪ್ರವೇಶಿಸಿದ ಅನಿಸ್ಯಾ ಹೊರಗೆ ಬಾರದೆ, ಸಂಬಂಧಿಕರಿಗೆ ಶವವಾಗಿ ಪತ್ತೆಯಾಗಿದ್ದಾಳೆ. ಕೆಲಸದ ಒತ್ತಡ ಕಾರಣ ಎನ್ನಲಾಗಿದೆ. ಪೋಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅನಿಸ್ಯಾ ಅವರ ಪತಿ ಅಜಿತ್ ಕುಮಾರ್ ಮಾವೇಲಿಕ್ಕರ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದಾರೆ.