ತಿರುವನಂತಪುರ: ನೆಹರು ಯುವ ಕೇಂದ್ರದ ಆಶ್ರಯದಲ್ಲಿ ಜನವರಿ 20 ರಿಂದ 26 ರವರೆಗೆ ಆಯೋಜಿಸಲಾದ 15 ನೇ ಪರಿಶಿಷ್ಟ ಪಂಗಡದ ಯುವ ಸಾಂಸ್ಕøತಿಕ ತಂಡಕ್ಕೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ರಾಜಭವನದಲ್ಲಿ ಔತಣ ಕೂಟವನ್ನು ಏರ್ಪಡಿಸಿದರು.
ಗಣರಾಜ್ಯೋತ್ಸವದ ಮುನ್ನಾದಿನದಂದು, ಯುವಕೇಂದ್ರದ 200 ಯುವ ಸದಸ್ಯರಿಗೆ, ಅವರ ಪರಿಚಾರಕರು ಸಹ ಔತಣದಲ್ಲಿ ಪಾಲ್ಗೊಂಡರು. ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ಡಾ. ದೇವೇಂದ್ರ ಕುಮಾರ ದೊಡಾವತ್, ನೆಹರು ಯುವ ಕೇಂದ್ರದ ರಾಜ್ಯ ಸಂಚಾಲಕ ಎಂ. ಅನಿಲ್ ಕುಮಾರ್, ಪಿಐಬಿ ಹೆಚ್ಚುವರಿ ಮಹಾನಿರ್ದೇಶಕ ಪಿ. ಪಳನಿ ಚಾಮಿ, ಕ್ಯಾಲಿಕಟ್ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮಾಜಿ ಮುಖ್ಯಸ್ಥ ಡಾ. ಆರ್. ಸುರೇಂದ್ರನ್ ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ರಾಜ್ಯಪಾಲರು ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರಗಳು ಮತ್ತು ಪೋಟೋ ಆಲ್ಬಮ್‍ಗಳನ್ನು ವಿತರಿಸಿದರು. ನಂತರ ವಿವಿಧ ರಾಜ್ಯಗಳ ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.