ಬದಿಯಡ್ಕ : ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ 75 ನೇ ಪ್ರಜಾಪ್ರಭುತ್ವ ದಿನಾಚರಣೆಯ ಧ್ವಜಾರೋಹಣವನ್ನು ಪೆರಡಾಲ ಎಜುಕೇಶನ್ ಸೊಸೈಟಿಯ ಕೋಶಾಧಿಕಾರಿ ವೆಂಕಟರಮಣ ಭಟ್ ಪೆರ್ಮುಖ ನಿರ್ವಹಿಸಿದರು. ಅವರು ಮಾತನಾಡಿ ಹಲವು ಜನರ ತ್ಯಾಗದ ಫಲವಾಗಿ ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ.. ನಮ್ಮ ಆಡಳಿತ ವ್ಯವಸ್ಥೆ ನಿಯಮಗಳು ಯಾವ ರೀತಿ ಇರಬೇಕೆಂಬುದನ್ನು ಸಂವಿಧಾನದಲ್ಲಿ ತಿಳಿಸಲಾಗಿದೆ. ಅದನ್ನು ಸಂರಕ್ಷಿಸಬೇಕು ಎಂದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಾಫಿ ಚೂರಿಪಳ್ಳ, ಮುಖ್ಯೋಪಾಧ್ಯಾಯನಿ ಶಾಯಿದಾ, ಹಿರಿಯ ಅಧ್ಯಾಪಕರಾದ ಕೇಶವ ಭಟ್, ಕವಿತಾ ಟೀಚರ್, ಊರ್ಮಿಳಾ ಟೀಚರ್ .. ಶುಭ ಹಾರೈಸಿದರು. ರಕ್ಷಕ ಶಿಕ್ಷಕ ಸಂಘದ ಸದಸ್ಯರು, ಅಧ್ಯಾಪಕ ವೃಂದ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಂಶುಪಾಲ ಮಾಧವನ್ ಭಟ್ಟತ್ತಿರಿ ಸ್ವಾಗತಿಸಿದರು. ನಿರಂಜನ ರೈ ಪೆರಡಾಲ ಕಾರ್ಯಕ್ರಮ ನಿರ್ವಹಿಸಿದರು. ಸಿಂಧು ಟೀಚರ್ ವಂದಿಸಿದರು. ಎನ್.ಸಿ.ಸಿ. ಮತ್ತು ಎಸ್ ಪಿ ಸಿ ಘಟಕದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿತು.