ತಿರುವನಂತಪುರಂ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುತ್ರಿ ವೀಣಾ ವಿಜಯನ್ ಅವರ ಕಂಪನಿ ಎಕ್ಸಾಲಾಜಿಕ್ ವಿರುದ್ಧ ಕೇಂದ್ರ ತನಿಖೆ ಜಾರಿಯಾಗಿದ್ದರೂ ಸಿಪಿಎಂ ನಾಯಕರು ಮಾಧ್ಯಮದ ಮುಂದೆ ಯಾವುದೇ ಹೇಳಿಕೆ ನೀಡುತ್ತಿಲ್ಲ.
ಎಕ್ಸಾಲಾಜಿಕ್ ವಿರುದ್ಧದ ತನಿಖೆಯ ಬಗ್ಗೆ ನನಗೆ ತಿಳಿದಿಲ್ಲ ಎಂದು ಎಲ್‍ಡಿಎಫ್ ಸಂಚಾಲಕ ಇಪಿ ಜಯರಾಜನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಸಂಸ್ಥೆಯನ್ನು ಕೇಳಿ ಘಟನೆಯ ಬಗ್ಗೆ ತನಿಖೆ ನಡೆಸಿ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು. ವೀಣಾ ಅವರ ಪತಿ ಹಾಗೂ ಲೋಕೋಪಯೋಗಿ ಸಚಿವ ಪಿಎ ಮುಹಮ್ಮದ್ ರಿಯಾಝ್ ಕೂಡ ಮಾಧ್ಯಮದವರರಿಂದ ಕಣ್ತಪ್ಪಿಸುತ್ತಿರುವರು. ಮಾಜಿ ಸಚಿವ ಎ.ಕೆ.ಬಾಲನ್ ಕೂಡ ಇದೇ ರೀತಿ ಪ್ರತಿಕ್ರಿಯಿಸಿದ್ದಾರೆ. ಸಿಪಿಎಂ ರಾಜ್ಯ ಸಮಿತಿ ಸಭೆಯಲ್ಲಿ ಭಾಗವಹಿಸಲು ಬಂದಾಗ ಮಾಧ್ಯಮಗಳಿಗೆ ಪ್ರತಿಕ್ರಿಯಿಸದೆ ಮುಖಂಡರು ತೆರಳಿದರು.
ಕೇಂದ್ರ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯವು ಎಕ್ಸಾಲಾಜಿಕ್ ವಿರುದ್ಧ ತನಿಖೆಯನ್ನು ಹೊರಡಿಸಿದೆ. ಕಾರ್ಪೋರೇಟ್ ಸಚಿವಾಲಯವು ಸಿಎಂಆರ್ ಎಲ್ ಮತ್ತು ಎಕ್ಸಲೋಜಿಕಲ್, ಬ್ರೌನ್ ಸ್ಯಾಂಡ್ ಕಂಪನಿ ನಡುವಿನ ಅಕ್ರಮ ವಹಿವಾಟಿನ ಬಗ್ಗೆ ತನಿಖೆ ನಡೆಸಲಿದೆ. ಕರ್ನಾಟಕ ಕಂಪನಿಗಳ ಉಪ ರಿಜಿಸ್ಟ್ರಾರ್ ವರುಣ್ ಬಿ.ಎಸ್, ಚೆನ್ನೈ ಉಪ ನಿರ್ದೇಶಕ ಕೆ.ಎಂ.ಶಂಕರ ನಾರಾಯಣ್ ಮತ್ತು ಪುದುಚೇರಿ ಆರ್‍ಒಸಿ ಎ ಗೋಕುಲನಾಥ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಸಮಿತಿಯು ನಾಲ್ಕು ತಿಂಗಳೊಳಗೆ ತನ್ನ ಅಂತಿಮ ವರದಿಯನ್ನು ಕೇಂದ್ರ ಕಾಪೆರ್Çರೇಟ್ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಲಿದೆ.