ಮುಳ್ಳೇರಿಯ: ಬೆಳ್ಳೂರು ಗ್ರಾಮ ಪಂಚಾಯತಿ ಮತ್ತು ಬೆಳ್ಳೂರು ಕುಟುಂಬ ಆರೋಗ್ಯ ಕೇಂದ್ರದ ಜಂಟಿ ಆಶ್ರಯದಲ್ಲಿ ಸೇಫ್ ಬೆಳ್ಳೂರು ಯೋಜನೆಯ ಅನುಷ್ಠಾನದ ಅಂಗವಾಗಿ ಉಪಶಾಮಕ ಆರೈಕೆ ಸ್ನೇಹ ಸಂಗಮವನ್ನು ಬುಧವಾರ ಆಯೋಜಿಸಲಾಗಿತ್ತು. ಬೆಳ್ಳೂರು ಕುಟುಂಬ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಶ್ರೀಧರ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಉಪಶಾಮಕ ರೋಗಿಗಳನ್ನು ರಕ್ಷಿಸುವ ಕಾರ್ಯವನ್ನು ಪ್ರತಿಯೊಬ್ಬರೂ ಯಜ್ಞವೆಂದು ಪರಿಗಣಿಸಬೇಕು.ಚಿಕಿತ್ಸೆ, ನೆರವು ಎಲ್ಲೆಡೆ ಎಲ್ಲರಿಗೂ ಲಭ್ಯವಾಗುತ್ತದೆ ಎಂದರು.
ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಜಯಕುಮಾರ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ಕೆ.ಗೀತಾ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ಸುಜಾತಾ ರೈ, ವಾರ್ಡ್ ಸದಸ್ಯರಾದ ಟಿ.ದುರ್ಗಾದೇವಿ, ಬಿ.ಎನ್.ಗೀತಾ, ಬೇಬಿ, ಭಾಗೀರಥಿ, ವೀರೇಂದ್ರಕುಮಾರ್, ಅಬ್ದುಲ್ ಖಾದರ್, ಶ್ರೀಪತಿ, ಭಾಗೀರಥಿ ಆರ್.ರೈ, ಬೆಳ್ಳೂರು ಎಫ್.ಎಚ್.ಸಿಯ ಡಾ. ರವಿಪ್ರಸಾದ್, ಆಯುರ್ವೇದ ವೈದ್ಯಾಧಿಕಾರಿ ಡಾ.ಲೀನಾ, ಹೋಮಿಯೋಪತಿ ವೈದ್ಯಾಧಿಕಾರಿ ಡಾ.ಶಶಿತಾ, ಉಪಶಾಮಕ ಮುಖಂಡ ಮೊಯ್ತೀನ್ ಪೂವಡ್ಕ ಮಾತನಾಡಿದರು. ಎಫ್ ಎಚ್ ಸಿ ಪ್ಯಾಲಿಯೇಟಿವ್ ನರ್ಸ್ ನಯನಾಕುಮಾರಿ ವರದಿ ಮಂಡಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತರು, ಉಪಶಾಮಕ ರೋಗಿಗಳು ಮತ್ತು ಪರಿಚಾರಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಉಪಶಾಮಕ ಸ್ವಯಂಸೇವಕರು, ಆರೋಗ್ಯ ಸೇನಾ ಕಾರ್ಯಕರ್ತರು, ಕುಟುಂಬಶ್ರೀ ಕಾರ್ಯಕರ್ತರು, ವಿದ್ಯಾರ್ಥಿಗಳು, ಸಾರ್ವಜನಿಕ ಕಾರ್ಯಕರ್ತರು ಹಾಗೂ ಸ್ಥಳೀಯರು ಭಾಗವಹಿಸಿದ್ದರು. ನಂತರ ವಿವಿಧ ಕಲಾ ಕಾರ್ಯಕ್ರಮಗಳು ನಡೆದವು. ಉಪಶಮನ ರೋಗಿಗಳಿಗೆ ಹೊಸ ಬಟ್ಟೆ, ಗಾಲಿಕುರ್ಚಿ ಹಾಗೂ ಆಹಾರಧಾನ್ಯ ಕಿಟ್‍ಗಳನ್ನು ವಿತರಿಸಲಾಯಿತು. ಕುಟುಂಬ ಆರೋಗ್ಯ ಕೇಂದ್ರ ಬೆಳ್ಳೂರು ವೈದ್ಯಾಧಿಕಾರಿ ಡಾ.ಜ್ಯೋತಿಮೋಳ್ ಸ್ವಾಗತಿಸಿ, ಆರೋಗ್ಯ ನಿರೀಕ್ಷಕ ವಿ.ಪಿ.ವಿನೋದ್ ವಂದಿಸಿದರು.